ಅರಳಿಕಟ್ಟಿಯ ಗುರುದೇವ ತಪೋವನಕ್ಕೆ ಭೇಟಿ ನೀಡಿದ ಮಾಜಿ ಸಂಸದ ರಮೇಶ ಕತ್ತಿ ಅವರನ್ನು ಜಗದ್ಗುರು ಸದಾಶಿವಾನಂದ ಸ್ವಾಮೀಜಿ ಸನ್ಮಾನಿಸಿದರು. ಬಸವರಾಜ ಹುಂದ್ರಿ, ಕಲಗೌಡ ಪಾಟೀಲ ಇತರರಿದ್ದರು. 
ಬೆಳಗಾವಿ

ಧರ್ಮ ಉಳಿವಿಗೆ ಮುಂದಾಗಲಿ

ಹುಕ್ಕೇರಿ: ಸನಾತನ ಧರ್ಮ ಪ್ರತಿಪಾದಿಸುವ ಮನೋಭಾವ ಎಲ್ಲರಲ್ಲೂ ಬರಬೇಕು ಎಂದು ಅರಳಿಕಟ್ಟಿಯ ಗುರುದೇವ ತಪೋವನದ ಜಗದ್ಗುರು ಸದಾಶಿವಾನಂದ ಸ್ವಾಮೀಜಿ ಹೇಳಿದರು.
ತಾಲೂಕಿನ ಅರಳಿಕಟ್ಟಿಯ ತಪೋವನಕ್ಕೆ ಶುಕ್ರವಾರ ಭೇಟಿ ನೀಡಿದ ಮಾಜಿ ಸಂಸದ ರಮೇಶ ಕತ್ತಿ ಅವರನ್ನು ಸನ್ಮಾನಿಸಿ ಮಾತನಾಡಿದ ಅವರು, ಸನಾತನ ಧರ್ಮದ ಶಕ್ತಿ ಮತ್ತು ಸಂಸ್ಕೃತಿಯನ್ನು ಯುವಜನಾಂಗಕ್ಕೆ ತಿಳಿಸಿಕೊಡುವ ಮಾಜಿ ಸಂಸದರ ಕಾರ್ಯ ಶ್ಲಾಘನೀಯ ಎಂದರು.
ಮಾಜಿ ಸಂಸದ ರಮೇಶ ಕತ್ತಿ ಮಾತನಾಡಿ, ಹಿಂದೂ ಸಂಸ್ಕೃತಿ, ಆಚಾರ-ವಿಚಾರ ಉಳಿಸಿಕೊಳ್ಳಲು ಹೋರಾಡಬೇಕಾಗಿದೆ. ಈ ಹೋರಾಟಕ್ಕೆ ಮಠಾಧೀಶರ ಬೆಂಬಲ ಮತ್ತು ಮಾರ್ಗದರ್ಶನ ಅವಶ್ಯ ಎಂದರು.
ಬಿಜೆಪಿ ಎಸ್ಟಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಬಸವರಾಜ ಹುಂದ್ರಿ, ವಿದ್ಯುತ್ ಸಹಕಾರ ಸಂಘದ ನಿರ್ದೇಶಕ ಕಲಗೌಡ ಪಾಟೀಲ, ಯಮಕನಮರಡಿ ಮಂಡಳ ಅಧ್ಯಕ್ಷ ಶ್ರೀಶೈಲ ಯಮಕನಮರಡಿ, ಸಿದ್ಧಲಿಂಗ ಸಿದಗೌಡರ, ಗುರುಸಿದ್ಧ ಪಾಯನ್ನವರ, ಅಡಿವೆಪ್ಪ ಜಿನರಾಳ, ಅರ್ಜುನ ಪಾಟೀಲ, ಬಾಳಗೌಡ ಪಾಟೀಲ, ಬಸವರಾಜ ಪೂಜೇರಿ ಇತರರಿದ್ದರು.