ರಾಯಬಾಗ ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಹಮ್ಮಿಕೊಂಡಿದ್ದ ನಿವೃತ್ತ ಸರ್ಕಾರಿ ನೌಕರರ ಸಂಘದ ವಾರ್ಷಿಕ ಸಭೆಯಲ್ಲಿ ಐ.ಆರ್.ಮಠಪತಿ ಮಾತನಾಡಿದರು. ಸಣ್ಣಪ್ಪ ಮೀಸಿ, ಎಸ್.ಜಿ.ಸಿದ್ದನಾಳ, ಎಂ.ಎಸ್.ಮುದಕವಿ ಇತರರಿದ್ದರು.
ರಾಯಬಾಗ:
ಸರ್ಕಾರಿ ನೌಕರರ ಭವನದಲ್ಲಿ ಮಂಗಳವಾರ ಸರ್ಕಾರಿ ನಿವೃತ್ತ ನೌಕರರ ಸಂಘದ ವಾರ್ಷಿಕ ಸಭೆಯಲ್ಲಿ ಮಾತನಾಡಿ, 70 ವರ್ಷ ಮೇಲ್ಪಟ್ಟ ನಿವೃತ್ತ ನೌಕರರಿಗೆ ಶೇ.10ರಷ್ಟು ವೇತನ ಹೆಚ್ಚು ಮಾಡುವ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಸಂಘ ಗಟ್ಟಿಯಾಗಬೇಕಾದರೆ ಎಲ್ಲ ನಿವೃತ್ತ ನೌಕರರು ಸ್ವಯಂಪ್ರೇರಿತರಾಗಿ ಸಂಘದ ಸದಸ್ಯತ್ವ ಪಡೆಯಬೇಕು ಎಂದು ತಿಳಿಸಿದರು.
ಜಿಲ್ಲಾ ನಿವೃತ್ತ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಸ್.ಜಿ.ಸಿದ್ದನಾಳ, ಎಂ.ಎಸ್.ಮುದಕವಿ, ಎಸ್.ಬಿ.ಹಳಿಯಾಚಿ, ಎ.ಎ.ಮುಲ್ಲಾ, ಐ.ಆರ್.ಮಠಪತಿ, ಬಾಲಕೃಷ್ಣ ಜಂಬಗಿ, ಹನುಮಂತ ಭಜಂತ್ರಿ, ಅಶೋಕ ದೇಶಿಂಗೆ, ಅಪ್ಪಾಸಾಹೇಬ ಮುಗಳಖೋಡ, ಡಿ.ಎಸ್.ಡಿಗ್ರಜ, ಎಂ.ಆರ್.ಮಠದ, ಜಿ.ಆರ್.ಬೆಕ್ಕೇರಿ, ಎಂ.ಬಿ.ಕಂಬಾರ, ಕೃಷ್ಣಾ ತೋಳೆ ಇತರರಿದ್ದರು.