ಸವದತ್ತಿಯ ವ್ಯಾಪ್ತಿಯ ವಾರ್ಡಗಳಿಗೆ ಶಾಸಕ ವಿಶ್ವಾಸ ವೈದ್ಯ ಭೇಡಿ ನೀಡಿ ಸಾರ್ವಜನಿಕರ ಅಹವಾಲು ಸ್ವೀಕರಿಸಿದರು. ತಹಸೀಲ್ದಾರ ಮಲ್ಲಿಕಾರ್ಜುನ ಹೆಗ್ಗನ್ನವರ, ಸಂಗನಬಸಯ್ಯ ಗದ್ದಗಿಮಠ ಇನ್ನಿತರಿದ್ದರು.
ನಗರದ ಪ್ರತಿಯೊಂದು ವಾರ್ಡ್ ಅಭಿವೃದ್ಧಿಗೆ ಸಮಾನ ಆದ್ಯತೆ ನೀಡಲಾಗುತ್ತಿದ್ದು, ಬಾಕಿ ಉಳಿದಿರುವ ಕಾಮಗಾರಿಗಳನ್ನು ಶೀಘ್ರದಲ್ಲೇ ಕೈಗೆತ್ತಿಕೊಳ್ಳಲಾಗುವುದು. ಸಾರ್ವಜನಿಕರಿಗೆ ಮೂಲಸೌಕರ್ಯ ಒದಗಿಸುವಲ್ಲಿ ನಿರ್ಲಕ್ಷ್ಯ ವಹಿಸಿದರೆ ಸಹಿಸಲಾಗುವುದಿಲ್ಲ ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.
ನಗರಸಭೆ ವ್ಯಾಪ್ತಿಯ 18, 19 ಹಾಗೂ 22ನೇ ವಾರ್ಡ್ ಗಳಿಗೆ ಶುಕ್ರವಾರ ಭೇಟಿ ನೀಡಿ ಸಾರ್ವಜನಿಕರ ಅಹವಾಲು ಆಲಿಸಿ ಮಾತನಾಡಿ, ರಸ್ತೆ, ಚರಂಡಿ, ಕುಡಿಯುವ ನೀರು, ಬೀದಿ ದೀಪ ಹಾಗೂ ಸ್ವಚ್ಛತೆ ಸೇರಿದಂತೆ ಮೂಲ ಸೌಲಭ್ಯಗಳಿಗೆ ಸಂಬಂಧಿಸಿದ ಸಮಸ್ಯೆ ಕುರಿತು ನಿವಾಸಿಗಳೊಂದಿಗೆ ಚರ್ಚಿಸಿದರು.
ನಾಗಪ್ಪನ ಗುಡಿ ರಸ್ತೆ, ಕಟ್ಟೆಕಾರ ಮನೆ ಸಮೀಪದ ಚರಂಡಿ ನೀರಿನ ಸಮಸ್ಯೆ, ಶಿವಬಸವ ಸದನ ಬಡಾವಣೆ, ಬನಶಂಕರಿ ದೇವಸ್ಥಾನ, ಉದ್ಯಾನ, ಅಂಗನವಾಡಿ, ಹುಂಡನವರ ಓಣಿ, ಕವಲಾಪುರ ಓಣಿ, ಗ್ರಾಮದೇವಿ ದೇವಸ್ಥಾನ ರಸ್ತೆ ಹಾಗೂ ವೀರಭದ್ರೇಶ್ವರ ದೇವಸ್ಥಾನ ರಸ್ತೆ ಸೇರಿದಂತೆ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ರಸ್ತೆ ಮತ್ತು ಚರಂಡಿಗಳ ಸ್ಥಿತಿಗತಿ ಪರಿಶೀಲಿಸಿದರು. ಸಾರ್ವಜನಿಕರು ಪ್ರಸ್ತಾಪಿಸಿದ ಸಮಸ್ಯೆಗಳನ್ನು ಆದ್ಯತೆ ಮೇರೆಗೆ ಬಗೆಹರಿಸಲು ಅಧಿಕಾರಿಗಳಿಗೆ ಸೂಚಿಸಿದರು.
ತಹಸೀಲ್ದಾರ್ ಮಲ್ಲಿಕಾರ್ಜುನ ಹೆಗ್ಗಣ್ಣವರ, ಪೌರಾಯುಕ್ತ ಸಂಗನಬಸಯ್ಯ ಗದ್ದಗಿಮಠ, ಕ್ಷೇತ್ರ ಶಿಕ್ಷಣಾಧಿಕಾರಿ ಅಕ್ಬರ್ ಅಲಿ ಖಾಜಿ, ಸಿಡಿಪಿಒ ಅಮೃತ ಸಾಣಿಕೊಪ್ಪ, ಪಿಡಬ್ಲ್ಯುಡಿ ಎಇ ಅಕ್ಷಯಕುಮಾರ ಮೂಗಿ, ಮುಖಂಡ ಶಿವಾನಂದ ಪಟ್ಟಣಶೆಟ್ಟಿ, ಪ್ರಭು ಪ್ರಭುನವರ, ಶಿವನಗೌಡ ಪಾಟೀಲ, ಪ್ರವೀಣ ಮುನವಳ್ಳಿ, ಮಂಜು ಪಾಚಂಗಿ, ಬಿ.ಎನ್.ಪ್ರಭುನವರ, ಎ್.ಬಿ.ಹೊಂಗಲ, ಉಮೇಶ ಕೋರಿಕೊಪ್ಪ, ಅಮೀರ ಗೋರಿನಾಯ್ಕ, ಬಸವರಾಜ ಅರಮನಿ, ಮದನಲಾಲ್ ಚೋಪ್ರಾ, ಪಿ.ಎಂ. ಪಾಯಣ್ಣವರ, ಮಲ್ಲಿಕಾರ್ಜುನ ಬೇವೂರ, ನಿಂಗಪ್ಪ ಹಾದಿಮನಿ, ಅಶೋಕ ಹಾದಿಮನಿ ಇತರರಿದ್ದರು.