ಅಂಕಲಿ ಗ್ರಾಮದಲ್ಲಿರುವ ಕೆಎಲ್‌ಇ ಶಿಕ್ಷಣ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ಬಿಬಿಎ ಮತ್ತು ಬಿಸಿಎ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಉಪನ್ಯಾಸಕ ಶಿವಾನಂದ ಅವಟಿ ಅವರನ್ನು ಸನ್ಮಾನಿಸಲಾಯಿತು. ಎಂ.ಎಸ್.ಕಾನಡೆ, ಪ್ರಜ್ವಲ ಪೂಜಾರಿ, ಶಿವಾನಂದ ಬಡಕುಂದ್ರಿ ಇತರರು ಇದ್ದರು. 
ಬೆಳಗಾವಿ

ಕೆಲಸದ ಮೇಲೆ ಇರಲಿ ಪ್ರೀತಿ

ಮಾಂಜರಿ:
ನಮ್ಮ ಆಶಯವಾಗಿದೆ ಎಂದು ಪ್ರಾಚಾರ್ಯ ಎಂ.ಎಸ್.ಕಾನಡೆ ಹೇಳಿದರು.
ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದಲ್ಲಿರುವ ಕೆಎಲ್‌ಇ ಶಿಕ್ಷಣ ಸಂಸ್ಥೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಬಿಸಿಎ ಮತ್ತು ಬಿಬಿಎ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ಧೈರ್ಯ ತುಂಬುವ ಶಿಕ್ಷಕರು ಬೇಕು. ನಮ್ಮ ಮೇಲೆ ನಮಗೆ ಭರವಸೆ ಹಾಗೂ ಮಾಡುವ ಕೆಲಸದ ಮೇಲೆ ಪ್ರೀತಿ ಇರಬೇಕು ಎಂದರು.
ಶಿವಾನಂದ ಮಹಾವಿದ್ಯಾಲಯದ ಉಪನ್ಯಾಸಕ ಶಿವಾನಂದ ಅವಟಿ ಮಾತನಾಡಿ, ಇಂದು ನಾವು ಸಾಕ್ಷರತೆಯಲ್ಲಿ ಶೇ.100 ಪ್ರಗತಿ ಸಾಧಿಸಿದ್ದೇವೆ ಎಂದರು.
ವಿದ್ಯಾರ್ಥಿಗಳಾದ ನೇಹಾ ಕೋಟಿವಾಲೆ, ಪ್ರಗತಿ ಕದಂ, ಪ್ರಸನ್ನ ಕುಂಬಾರ, ಶಿವಾನಂದ ಬಡಕುಂದ್ರಿ ಅನಿಸಿಕೆ ವ್ಯಕ್ತಪಡಿಸಿದರು. ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕ ಸಂತೋಷ ಹಿರೇಮಠ, ಸಂಸ್ಕೃತಿ ಶಾಲೆ ಮುಖ್ಯ ಶಿಕ್ಷಕರಾದ ಮಹುಆ ನಿಯೋಗಿ, ಉಪನ್ಯಾಸಕರಾದ ಪ್ರಜ್ವಲ ಪೂಜಾರಿ, ಉಮಾಶ್ರೀ ಹವಾಲ್ದಾರ್, ದಿವ್ಯಾ ಪಾಟೋಳೆ, ಎಸ್. ಸಿ.ಪಾಟೀಲ, ಅಕ್ಷಯ ಬೆನಾಡಿ, ರಾಹುಲ ಪಾಟೀಲ, ವೈಷ್ಣವಿ ಸುರುವೆ, ಸುಜಾತ ಬರಗಾಲೆ, ಅಕ್ಷಯ ಬೆನಾಡೆ, ಆರ್.ಆರ್.ಪೂಜಾರಿ ಇತರರಿದ್ದರು.