ಭೂತಾನದಲ್ಲಿ ಹಮ್ಮಿಕೊಂಡಿದ್ದ 54ನೇ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಫೆಸ್ಟ್ ನಲ್ಲಿ ರಡ್ಡೇರಹಟ್ಟಿ ಸರ್ಕಾರಿ ಪ್ರೌಢಶಾಲೆ ಶಿಕ್ಷಕಿ ಡಾ.ಅರ್ಚನಾ ಅಥಣಿಗೆ ಭೂತಾನ ಲೋಕಸಭಾ ಸದಸ್ಯ ಎಚ್.ಇ. ದಶೋ ಉಗೇನ್ ಲಾಮಾ ನೆನಪಿನ ಕಾಣಿಕೆ ನೀಡಿದರು. ಶಂಕರೇಗೌಡ ಇದ್ದರು. 
ಬೆಳಗಾವಿ

ಕನ್ನಡ ವಿಶ್ವ ಪ್ರಜ್ಞೆಯಾಗಿ ಬೆಳೆಯಲಿ

ಅಥಣಿ ಗ್ರಾಮೀಣ:
ಭೂತಾನ ಆಶ್ರಯಲ್ಲಿ ಈಚೆಗೆ ಜರುಗಿದ 54ನೇ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಫೆಸ್ಟ್ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಮೇರು ದಿಗ್ಗಜರು ಕನ್ನಡ ಸಾಹಿತ್ಯ ಕಟ್ಟಿ ಬೆಳೆಸಿದ್ದಾರೆ. ಕನ್ನಡ ಭಾಷೆ ಸಾಹಿತ್ಯ, ಸಂಸ್ಕೃತಿ ಸಮುದ್ರವಿದ್ದಂತೆ. ಸಾಹಿತಿಗೆ ಸಾವಿರಾರು ಜನರನ್ನು ಬಡಿದೆಬ್ಬಿಸುವ ಶಕ್ತಿಯಿದೆ. ಕನ್ನಡ ಭಾಷೆ ಭಾರತ ಅಲ್ಲದೇ ವಿದೇಶದಲ್ಲಿಯೂ ಕಂಪು ಸೂಸುತ್ತಿದೆ. ಆ ಶಕ್ತಿ ಕನ್ನಡ ಭಾಷೆಗಿದೆ ಎಂದರು.
ಭೂತಾನ ಲೋಕಸಭಾ ಸದಸ್ಯ ಎಚ್.ಇ.ದಶೋ ಉಗೇನ್ ಲಾಮಾ ಮಾತನಾಡಿ, ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳ ಹಮ್ಮಿಕೊಳ್ಳುವ ಮೂಲಕ ಭಾರತ-ಭೂತಾನ ಬಾಂಧವ್ಯ ಬೆಸೆಯುತ್ತಿರುವ ಕಾರ್ಯ ಶ್ಲಾಘನೀಯ ಎಂದು ಹೇಳಿದರು. ಶಂಕರೇಗೌಡ ಹಾಗೂ ಇತರರಿದ್ದರು.