ಅಥಣಿ ಮೋಟಗಿಮಠದಲ್ಲಿ ಹಮ್ಮಿಕೊಂಡಿದ್ದ ಬಸವ ಸಂಸ್ಕೃತಿ ಪ್ರವಚನ ಕಾರ್ಯಕ್ರಮವನ್ನು ಸಿದ್ಧಲಿಂಗ ಸ್ವಾಮೀಜಿ ಉದ್ಘಾಟಿಸಿದರು. ಪ್ರಭುಚನ್ನಬಸವ ಸ್ವಾಮೀಜಿ, ಮರುಳಸಿದ್ಧ ಸ್ವಾಮೀಜಿ, ಯೋಗಿರಾಜೇಂದ್ರ ಶಾಸ್ತ್ರೀ ಇತರರಿದ್ದರು.
- ಸಿದ್ಧಲಿಂಗ ಸ್ವಾಮೀಜಿ ಹಿತನುಡಿ
- ಬಸವ ಸಂಸ್ಕೃತಿ ಪ್ರವಚನ
ಅಥಣಿ: ಮಾನವೀಯ ಮೌಲ್ಯ ಬದುಕಿನ ಆದರ್ಶವಾಗಬೇಕು. ಆಗ ಮಹಾತ್ಮರ ಸಂದೇಶಗಳಿಗೆ ಗೌರವ ನೀಡಿದಂತಾಗುತ್ತದೆ ಎಂದು ನದಿ ಇಂಗಳಗಾವಿಯ ಸಿದ್ಧ್ದಲಿಂಗ ಸ್ವಾಮೀಜಿ ಹೇಳಿದರು.
ಪಟ್ಟಣದಲ್ಲಿ ಮೋಟಗಿಮಠದ ಲಿಂಗೈಕ್ಯ ಚನ್ನಬಸವ ಶಿವಯೋಗಿಗಳ ೧೦೧ನೇ ಪುಣ್ಯಸ್ಮರಣೋತ್ಸವ, ಬಸವ ಸಂಸ್ಕೃತಿ ಮೇಳ-೨೦೨೬ರ ಅಂಗವಾಗಿ ಶನಿವಾರ ಹಮ್ಮಿಕೊಂಡಿದ್ದ ಬಸವ ಸಂಸ್ಕೃತಿ ಪ್ರವಚನ ಉದ್ಘಾಟಿಸಿ ಮಾತನಾಡಿ, ಬಸವಾದಿ ಶಿವಶರಣರು ತೋರಿದ ಪಥದಲ್ಲಿ ನಡೆದರೆ ಬದುಕು ಸುಂದರವಾಗಿರುತ್ತದೆ. ಅಷ್ಟಾವರಣ, ಲಿಂಗಾರ್ಚಣೆ, ಕಾಯಕ, ದಾಸೋಹ ಇವುಗಳನ್ನು ಪಾಲಿಸಿಕೊಂಡು ಪುಣ್ಯ ಕರ್ಮಗಳನ್ನು ಮಾಡಬೇಕೆಂದು ಚನ್ನಬಸವ ಶಿವಯೋಗಿಗಳು ತಿಳಿಸಿದ್ದಾರೆ ಎಂದರು.
ಮೋಟಗಿಮಠದ ಪ್ರಭುಚನ್ನಬಸವ ಸ್ವಾಮೀಜಿ ಮಾತನಾಡಿ, ಭಕ್ತರ ಬದುಕು ವಿಕಾಸವಾಗಲು ನಿಸ್ವಾರ್ಥ ಭಕ್ತಿ, ಶ್ರದ್ಧೆ ನಿರಂತರ ಸತ್ಯಶುದ್ಧ ಕಾಯಕದಿಂದ ಮಾತ್ರ ಸಾಧ್ಯ. ಅಂತಹ ಸಮಾಜ ನಿರ್ಮಿಸುವಲ್ಲಿ ಶ್ರೀಮಠ ನಿರಂತರವಾಗಿ ಶ್ರಮಿಸುತ್ತಿದ್ದು, ಇದಕ್ಕೆ ಭಕ್ತರ ಸಹಕಾರವೇ ಕಾರಣ
ಎಂದು ತಿಳಿಸಿದರು. ಗದಗ ಪ್ರವಚನಕಾರ ಯೋಗಿರಾಜೇಂದ್ರ ಶಾಸ್ತ್ರೀ ಮಾತನಾಡಿ, ಸುಸಂಸ್ಕೃತ ಸಾತ್ವಿಕ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದರು.
ಶೆಟ್ಟರಮಠದ ಮರುಳಿಸಿದ್ಧ ಸ್ವಾಮೀಜಿ ಮಾತನಾಡಿದರು.ಶ್ರೀಮಠದ ಭಕ್ತರಾದ ಸುಭಾಸ ಕಾಗಲೆ, ಶಂಕರ ಹಗಲಂಬಿ, ದೀಪಕ ಸೌದಾಗರ ಅವರನ್ನು ಸನ್ಮಾನಿಸಲಾಯಿತು. ಸಂಗಮೇಶ ಪಾಟೀಲ, ಕುಮಾರ ತೋಟೆಂದ್ರ ಅವರಿಂದ ವಚನ ಸಂಗೀತ ಜರುಗಿತು. ಪ್ರಕಾಶ ಮಹಾಜನ, ಗುರುಪಾದ ಕಾವೇರಿ, ಮುರಿಗೆಪ್ಪ ತೊದಲಬಾಗಿ, ಮುರಿಗೆಪ್ಪ ಮಮದಾಪೂರ, ಶಂಕರ ಬುಕಿಟಗಾರ, ಗಿರೀಶ ದಿವಾನಮಳ, ಶಿವಾನಂದ ಕೊಪ್ಪದ, ಎಸ್.ಆರ್.ಪಾಟೀಲ ಇತರರಿದ್ದರು.