ಹಾರೂಗೇರಿ ಪಟ್ಟಣದ ಪುರಸಭೆ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಡಾ.ಎಲ್.ಎಸ್.ಜಂಬಗಿ ಮಾತನಾಡಿದರು. ಐ.ಆರ್.ಮಠಪತಿ, ವಸಂತ ಲಾಳಿ, ಜಿನ್ನಪ್ಪ ಅಸ್ಕಿ ಇದ್ದರು.
ಹಾರೂಗೇರಿ: ತಾಲೂಕು ಘೋಷಣೆ ಮಾಡುವಂತೆ ಇಪ್ಪತ್ತು ವರ್ಷಗಳಿಂದ ನಿರಂತರ ಹೋರಾಟ ಮಾಡುತ್ತಿದ್ದರೂ, ಸರ್ಕಾರ ಹಾರೂಗೇರಿ ತಾಲೂಕು ಘೋಷಣೆಗೆ ಹಿಂದೇಟು ಹಾಕುತ್ತಿದೆ. ಹಾಗಾಗಿ ಎಲ್ಲರೂ ಸೇರಿ ಶಾಸಕ ಮಹೇಂದ್ರ ತಮ್ಮಣ್ಣವರ, ಸಚಿವ ಸತೀಶ ಜಾರಕಿಹೊಳಿ ಅವರೊಂದಿಗೆ ತೆರಳಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸೋಣ ಎಂದು ಡಾ.ಎಲ್.ಎಸ್.ಜಂಬಗಿ ಹೇಳಿದರು.
ಪಟ್ಟಣದ ಪುರಸಭೆ ಕಾರ್ಯಾಲಯದ ಸಭಾಭವನದಲ್ಲಿ ಪುರಸಭೆ ಅಧ್ಯಕ್ಷ ವಸಂತ ಲಾಳಿ ಅವರ ನೇತೃತ್ವದಲ್ಲಿ ಹಾರೂಗೇರಿ ತಾಲೂಕು ರಚನೆ ಕುರಿತು ಶುಕ್ರವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ನಿವೃತ್ತ ಶಿಕ್ಷಕ ಬಸವರಾಜ ಮುಗಳಿಹಾಳ, ದಮನಿತರ ಸಂರಕ್ಷಣಾ ಸಮಿತಿ ರಾಜ್ಯಾಧ್ಯಕ್ಷ ಸುರೇಶ ಐಹೊಳೆ ಮಾತನಾಡಿದರು. ಐ.ಆರ್.ಮಠಪತಿ, ರಾಮಣ್ಣ ಗಸ್ತಿ, ಜಿನ್ನಪ್ಪ ಅಸ್ಕಿ, ಸುರೇಶ ಕಟ್ಟಿ, ಈರಣಗೌಡ ಪಾಟೀಲ, ವಸಂತ ಅಲಖನೂರ, ಮಲ್ಲಿಕಾರ್ಜುನ ಖಾನಗೌಡರ, ಧನಪಾಲ ಶಿರಹಟ್ಟಿ, ಶ್ರೀಪತಿ ದಟವಾಡ, ಬಿ.ಆರ್.ಆಜೂರ, ಸಿದ್ದಪ್ಪ ನಾಗನೂರ, ಅಶೋಕ ಕೊಪ್ಪದ, ಬಸವರಾಜ ತುಳಸಿಗೇರಿ ಇತರರಿದ್ದರು.