ಸಂಕೋನಟ್ಟಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಬೇಟಿ ಬಚಾವೋ, ಬೇಟಿ ಪಡಾವೋ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಎಸ್.ಎನ್. ದೊಡಮನಿ, ಬೀರಪ್ಪ ಕಡಗಂಚಿ, ಸುಜಾತಾ ಅವರವಾಡ, ತಮ್ಮಣ್ಣ ಶೇಡಬಾಳ ಇತರರಿದ್ದರು. 
ಬೆಳಗಾವಿ

ಲಿಂಗ ತಾರತಮ್ಯ ದೂರವಾಗಲಿ

ವಿದ್ಯಾ ಶೆಟ್ಟನಗೌಡ್ರ

ಪ್ರಮುಖ ಮುಖ್ಯಾಂಶಗಳು

  • ಎಸ್.ಎನ್.ದೊಡಮನಿ ಅನಿಸಿಕೆ
  • ಮಹಿಳಾ ದಿನಾಚರಣೆ
ಅಥಣಿ ಗ್ರಾಮೀಣ: ಜನರ ಮನಸ್ಸಿನಿಂದ ಲಿಂಗ ತಾರತಮ್ಯ ದೂರವಾಗಬೇಕು ಎಂದು ಮೇಲ್ವಿಚಾರಕಿ ಎಸ್.ಎನ್.ದೊಡಮನಿ ಹೇಳಿದರು.
ಅಥಣಿ ತಾಲೂಕಿನ ಸಂಕೋನಟ್ಟಿ ಗ್ರಾಮದಲ್ಲಿ ಶಿಶು ಅಭಿವೃದ್ಧಿ ಯೋಜನೆ ಹಾಗೂ ಸಂಕೋನಟ್ಟಿ ಗ್ರಾಪಂ ಆಶ್ರಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಬೇಟಿ ಬಚಾವೋ, ಬೇಟಿ ಪಢಾವೋ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಹೆಣ್ಣು ಸಮಾಜದ ಕಣ್ಣು. ಸ್ತ್ರೀ ಶೋಷಣೆಯಿಂದ ಹಾಗೂ ಪುರುಷ ಪ್ರಧಾನ ಕುಟುಂಬದಿಂದ ಮಹಿಳೆ ಹಿಂದುಳಿದಿದ್ದಾಳೆ. ಹೆಣ್ಣು ತಾಯಿಯಾಗಿ, ಹೆಂಡತಿಯಾಗಿ ಬೇಕು. ಆದರೆ, ಮಗಳಾಗಿ ಏಕೆ ಬೇಡ ಎಂದರು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬೀರಪ್ಪ ಕಡಗಂಚಿ ಮಾತನಾಡಿ, ಮದರ್ ತೆರೇಸಾ, ಅಕ್ಕಮಹಾದೇವಿ, ಕಲ್ಪನಾ ಚಾವ್ಲಾ, ಸಾವಿತ್ರಿಬಾಯಿ ಫುಲೆ ಸೇರಿ ಅನೇಕ ಮಹಾನ್ ಮಹಿಳೆಯರಂತೆ ಸ್ವಾವಲಂಬಿಯಾಗಿ ಬದುಕು ಕಟ್ಟಿಕೊಳ್ಳಬೇಕು ಎಂದರು.
ತಾಪಂ ಮಾಜಿ ಉಪಾಧ್ಯಕ್ಷೆ ಸುಜಾತಾ ಅವರವಾಡ, ತಮ್ಮಣ್ಣ ಶೇಡಬಾಳ, ಗುಣವಂತಿ ಸೋಮನ್ನವರ, ರೂಪಾ ಕಾಂಬಳೆ, ಸುಜಾತಾ ಮಸಾರಕಲ್ಲ, ರೂಪಶ್ರೀ ಕೊಡತೆ, ಜ್ಯೋತಿ ಚವ್ಹಾಣ, ಬಸಯ್ಯ ಅವರವಾಡ, ಪರಮಾನಂದ ನಾಯಿಕ, ಮಹಾವೀರ ಆಚಾರಟ್ಟಿ ಇತರರಿದ್ದರು.