ಮುರಗೋಡ ಗ್ರಾಮದಲ್ಲಿ ಬೃಹತ್ ವಿರಾಟ ಹಿಂದೂ ಸಮಾವೇಶದ ಅಂಗವಾಗಿ ಶೋಭಾಯಾತ್ರೆ ಜರುಗಿತು. 
ಬೆಳಗಾವಿ

ಎಲ್ಲರೂ ಹಿಂದೂ ಧರ್ಮ ಜಾಗೃತಿಗೆ ಮುಂದಾಗಲಿ

ಪ್ರಮುಖ ಮುಖ್ಯಾಂಶಗಳು

  • ಕಾರ್ಯಕಾರಿಣಿ ಸದಸ್ಯ ರಘುನಂದನ ಅನಿಸಿಕೆ
  • ಗಮನ ಸೆಳೆದ ಶೋಭಾಯಾತ್ರೆ
ಮುರಗೋಡ: ಪ್ರತಿಯೊಬ್ಬರೂ ದೇಶ ಭಕ್ತಿ, ಹಿಂದೂ ಧರ್ಮ ಜಾಗೃತಿ ಮೂಡಿಸಲು ಮುಂದಾಗಬೇಕು ಎಂದು ಅಖಿಲ ಭಾರತೀಯ ಕಾರ್ಯಕಾರಿಣಿ ಸದಸ್ಯ ರಘುನಂದನ ಜೆ. ಹೇಳಿದರು.
ಗ್ರಾಮದ ಮಹಾಂತೇಶ್ವರ ಪ್ರೌಢಶಾಲೆ ಮೈದಾನದಲ್ಲಿ ಹಿಂದೂ ಸಮ್ಮೇಳನ ಸಂಚಲನಾ ಸಮಿತಿ ಹಾಗೂ ವಿವಿಧ ಹಿಂದೂಪರ ಸಂಘಟನೆಗಳ ಆಶ್ರಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಬೃಹತ್ ವಿರಾಟ ಹಿಂದೂ ಸಮಾವೇಶದಲ್ಲಿ ಮಾತನಾಡಿದರು.
ಆರ್‌ಎಸ್‌ಎಸ್ ಸಂಘಟನೆ ಶತಮಾನೋತ್ಸವ ಆಚರಣೆ ದೇಶ ಭಕ್ತಿ ಸಂಕೇತ. ಸಾರಾಯಿ ಮತ್ತು ಗುಟ್ಖಾಮುಕ್ತ ಗ್ರಾಮ ನಿರ್ಮಾಣಕ್ಕಾಗಿ ಎಲ್ಲರೂ ಕೈಜೋಡಿಸೋಣ ಎಂದರು.
ಮುನವಳ್ಳಿ ನಿತ್ಯಾನಂದ ಸತ್ಸಂಗ ಆಶ್ರಮದ ಮುಕ್ತಾನಂದ ಸ್ವಾಮೀಜಿ ಮಾತನಾಡಿ, ಎಲ್ಲರಿಗೂ ಸಂಸ್ಕಾರ ನೀಡುವಲ್ಲಿ ಹಿಂದೂ ಧರ್ಮದ ಪಾತ್ರ ಹಿರಿದಾಗಿದೆ. ರಾಜಕೀಯ ಹಿತಾಸಕ್ತಿಗಾಗಿ ವಿವಿಧ ಪಕ್ಷಗಳು ಜಾತಿಯ ವಿಷ ಬೀಜ ಬಿತ್ತುತ್ತಿರುವುದು ಖೇದಕರ ಸಂಗತಿ ಎಂದು ತಿಳಿಸಿದರು.
ಸಾನ್ನಿಧ್ಯ ವಹಿಸಿದ್ದ ಮಹಾಂತ ದುರದುಂಡೀಶ್ವರ ಮಠದ ನೀಲಕಂಠ ಸ್ವಾಮೀಜಿ, ಕೆಂಗೇರಿ ಶಿವ ಚಿದಂಬರ ಮಠದ ದಿವಾಕರ ದೀಕ್ಷಿತ ಸ್ವಾಮೀಜಿ, ಹಾರುಗೊಪ್ಪದ ಶಿವಯೋಗಿನಿದೇವಿ ಆಶೀರ್ವಚನ ನೀಡಿದರು. ಶಿಕ್ಷಕ ಎಸ್.ಎಂ.ಪಟಾತರ ಪ್ರಾಸ್ತಾವಿಕವಾಗಿ ಮಾತನಾಡಿದರು. ಭಾರತಾಂಬೆಯ ಭಾವಚಿತ್ರ ಮೆರವಣಿಗೆಯ ಶೋಭಾಯಾತ್ರೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.
ಮಾಜಿ ಶಾಸಕ ಜಗದೀಶ ಮೆಟಗುಡ್ಡ, ಶಂಕರ ಮಾಡಲಗಿ, ಮಲ್ಲಿಕಾರ್ಜುನ ಸಿದ್ಧನಗೌಡರ, ಚಿದಂಬರ ಮೇಟಿ, ಬಸವರಾಜ ನಾಗನೂರು, ಎ್.ಎಸ್.ಸಿದ್ಧನಗೌಡರ, ಡಾ.ಆರ್.ಎಸ್.ಬಾಳಿಕಾಯಿ, ಪ್ರದೀಪ ಪಟ್ಟಣಶೆಟ್ಟಿ, ಲಕ್ಕಪ್ಪ ಕಾರಗಿ, ಮಹಾಂತೇಶ ದಾಡಿಗುಂಡಿ, ಸದಾಶಿವ ಪಾಟೀಲ ಇದ್ದರು.