ಕೊಕಟನೂರ ಗ್ರಾಮದ ದಡಕೆ ತೋಟದ ಅಪ್ಪಯ್ಯ ಸ್ವಾಮೀಜಿ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ರೈತನ ಮನೆತನ ನಾಟಕ ಪ್ರದರ್ಶನಕ್ಕೆ ಗಣ್ಯರು ಚಾಲನೆ ನೀಡಿದರು. ಡಾ.ವಿವೇಕಾನಂದ ದೇವರು, ಅಣ್ಣಪ್ಪ ಖೋತ, ಶಿವಗೌಡ ನೇಮಗೌಡ, ಯಶವಂತ ಪೋಳ ಇತರರಿದ್ದರು.
ಅಥಣಿ ಗ್ರಾಮೀಣ: ದೈವತ್ವದ ಕೊಡುಗೆಯಾದ ನಾಟಕ ಕಲೆಯನ್ನು ಎಲ್ಲರೂ ಗೌರವಿಸಬೇಕು. ನಮ್ಮ ಸಂಸ್ಕೃತಿ, ಪರಂಪರೆ ಉಳಿಸುವ ಕೆಲಸ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ಗುಣದಾಳದ ಡಾ.ವಿವೇಕಾನಂದ ದೇವರು ಹೇಳಿದರು.
ಅಥಣಿ ತಾಲೂಕಿನ ಕೊಕಟನೂರ ಗ್ರಾಮದ ದಡಕೆ ತೋಟದ ಅಪ್ಪಯ್ಯ ಸ್ವಾಮೀಜಿ ಜಾತ್ರಾ ಮಹೋತ್ಸವ ಅಂಗವಾಗಿ ಶನಿವಾರ ಹಮ್ಮಿಕೊಂಡಿದ್ದ ‘ರೈತನ ಮನೆತನ’ ನಾಟಕ ಹಾಗೂ ರಸಮಂಜರಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಚಿಂತೆ, ದಣಿವು, ಆಯಾಸ ಹಾಗೂ ಕಷ್ಟಗಳನ್ನು ದೂರ ಮಾಡುವ ಶಕ್ತಿ ನಾಟಕದಲ್ಲಿದೆ ಎಂದರು. ಪಿಕೆಪಿಎಸ್ ಅಧ್ಯಕ್ಷ ಅಣ್ಣಪ್ಪ ಖೋತ, ಮುಖಂಡರಾದ ಶಿವಗೌಡ ನೇಮಗೌಡ, ಪ್ರಹ್ಲಾದ ಪೂಜಾರಿ, ಗುರುಮೂರ್ತಯ್ಯ ಕಾಡದೇವರಮಠ ಮಾತನಾಡಿದರು. ಇದಕ್ಕೂ ಪೂರ್ವ ಅಂತಾರಾಜ್ಯ ಮಟ್ಟದ ಜಂಗೀ ನಿಕಾಲಿ ಕುಸ್ತಿ ಪಂದ್ಯಾವಳಿ ಜರುಗಿತು. ಮುಖಂಡರಾದ ಸುಭಾಸ ಸೋನಕರ, ಅನಿಲ ಮುಳಿಕ, ಮಲ್ಲಿಕಾರ್ಜುನ ಪರಾಂಡೆ, ಡಾ.ಮಲ್ಲಿಕಾರ್ಜುನ ಹಿರೇಮಠ, ರಘುನಾಥ ಗವಾನೆ, ಸುರೇಶ ಪಾಟಣಕರ, ಮಲ್ಲಪ್ಪ ನೇಮಗೌಡ, ಶಂಕರಯ್ಯ ಮಠಪತಿ, ಶಿವಾನಂದ ಐಗಳಿ, ಯಶವಂತ ಪೋಳ, ಯಾದಪ್ಪ ಧಡಕೆ ಇತರರು ಇದ್ದರು.