ಗುಡದೂರ ಗ್ರಾಮ ದೇವತೆಗಳ ದೇವಸ್ಥಾನ ಲೋಕಾರ್ಪಣೆ ಕಾರ್ಯಕ್ರಮವನ್ನು ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಉದ್ಘಾಟಿಸಿದರು. ಗುರುಲಿಂಗ ಸ್ವಾಮೀಜಿ, ಶಾಸಕ ಮಹಾಂತೇಶ ಕೌಜಲಗಿ, ಬಸವರಾಜ ಹಿರೇಮಠ ಇತರರಿದ್ದರು. 
ಬೆಳಗಾವಿ

ಪ್ರತಿಯೊಬ್ಬರೂ ಪ್ರವಚನಗಳಲ್ಲಿ ಪಾಲ್ಗೊಳ್ಳಲಿ

ರಾಘವೇಂದ್ರಗೌಡ ಭೀ ಪಾಟೀಲ್
ತಾಲೂಕಿನ ಗುಡದೂರ ಗ್ರಾಮದಲ್ಲಿ ಗ್ರಾಮದೇವತೆಗಳ ದೇವಸ್ಥಾನ ಲೋಕಾರ್ಪಣೆ ಹಾಗೂ ನೂತನ ಮೂರ್ತಿಗಳ ಪ್ರಾಣ ಪ್ರತಿಷ್ಠಾಪಣೆ ಅಂಗವಾಗಿ ಈಚೆಗೆ ಹಮ್ಮಿಕೊಂಡಿದ್ದ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿ, ಮಠ-ಮಂದಿರ ಶಾಂತಿ ಬಿತ್ತುವ ಕೇಂದ್ರಗಳಾಗಿದ್ದು, ಪ್ರವಚನ-ಪುರಾಣಗಳಲ್ಲಿ ಪ್ರತಿಯೊಬ್ಬರು ಪಾಲ್ಗೊಂಡು ಪುನೀತರಾಗಬೇಕು ಎಂದರು.
ಬೆಳಗಾವಿಯ ಪ್ರಣವಂ ಫೌಂಡೇಷನ್ ಗುರುಕುಲದ ಮುಖ್ಯಸ್ಥ ನಿಶ್ಚಲ ಸ್ವರೂಪ ಸ್ವಾಮೀಜಿ ಮಾತನಾಡಿ, ನಗರ ಸಂಸ್ಕೃತಿಗೆ ಮಾರು ಹೋಗಿ ಹಳ್ಳಿಗಳ ಸಂಸ್ಕಾರವನ್ನು ಮರೆಮಾಚಬೇಡಿ. ಹಳ್ಳಿಯಿಂದಲೇ ದೇಶೋದ್ದಾರ ಸಾಧ್ಯವಿದ್ದು ಸಂಪ್ರದಾಯಗಳ ಆಚರಣೆಗೆ ಮಹತ್ವ ನೀಡಲು ಕರೆ ನೀಡಿದರು.
ಸಂಗೊಳ್ಳಿ ಹಿರೇಮಠ ಸಂಸ್ಥಾನದ ಗುರುಲಿಂಗ ಸ್ವಾಮೀಜಿ ಸಾನ್ನಿದ್ಯ ವಹಿಸಿದ್ದರು. ಶಾಸಕ ಮಹಾಂತೇಶ ಕೌಜಲಗಿ, ವೈದ್ಯ ಬಸವರಾಜ ಹಿರೇಮಠ, ಅರುಣ ಹಿರೇಮಠ, ತುರಾಬುದ್ದಿನ್ ದಾನವಾಲೆ, ಶಂಕ್ರಯ್ಯ ಪೂಜೇರ, ಶ್ರೀಧರ ಹಿರೇಮಠ, ಅಡಿವೆಪ್ಪ ಪಟ್ಟೇದ, ಕುಮಾರ ಮುಳಕೂರ, ಬಸವರಾಜ ಹಿರೇಮಠ, ಗಂಗಾಧರ ಹಿರೇಮಠ, ನಿಂಗಪ್ಪ ಪರಸಣ್ಣವರ, ರಮೇಶ ಬೀಡಿ, ರಮೇಶ ಕುರಬರ ಇತರರಿದ್ದರು.