ಮುನವಳ್ಳಿ ಪುರಸಭೆ ವತಿಯಿಂದ ಲಾನುಭವಿಗಳಿಗೆ ಶಾಸಕ ವಿಶ್ವಾಸ ವೈದ್ಯ ಹೊಲಿಗೆ ಯಂತ್ರ ವಿತರಿಸಿದರು. ರವೀಂದ್ರ ಯಲಿಗಾರ, ಎಂ.ಆರ್.ಗೋಪಶೆಟ್ಟಿ, ಈಶ್ವರ ಕರೀಕಟ್ಟಿ, ಡಿ.ಡಿ.ಕಿನ್ನೂರಿ, ಮೀರಾಸಾಬ್ ವಟ್ನಾಳ ಇತರರಿದ್ದರು.
ಮುನವಳ್ಳಿ: ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಯೋಜನೆ ತಲುಪಬೇಕು. ಲಾನುಭವಿಗಳು ಸೌಲಭ್ಯ ಸದುಪಯೋಗಪಡಿಸಿಕೊಂಡು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.
ಪಟ್ಟಣದ ಪುರಸಭೆ ವತಿಯಿಂದ ನಗರೋತ್ಥಾನ ಹಾಗೂ ಎಸ್‌ಎಫ್ಸಿ ಯೋಜನೆಯಡಿ ಲಾನುಭವಿಗಳಿಗೆ ಬುಧವಾರ ವಿವಿಧ ವೈಯಕ್ತಿಕ ಸೌಲಭ್ಯಗಳ ವಿತರಿಸಿ ಮಾತನಾಡಿದರು.
ಪುರಸಭೆ ಅಧ್ಯಕ್ಷ ಈಶ್ವರ ಕರೀಕಟ್ಟಿ ಮಾತನಾಡಿ, 221 ಅರ್ಹ ಲಾನುಭವಿಗಳಿಗೆ ಹೊಲಿಗೆ ಯಂತ್ರ, ಸೋಲಾರ್ ಲ್ಯಾಂಪ್, ಲ್ಯಾಪ್‌ಟಾಪ್, ಯಂತ್ರಚಾಲಿತ ತ್ರಿಚಕ್ರ ವಾಹನ, ವಿದ್ಯಾರ್ಥಿ ವೇತನ ವಿತರಿಸಲಾಗಿದೆ ಎಂದರು.
ಎಪಿಎಂಸಿ ಅಧ್ಯಕ್ಷ ಚಂದ್ರು ಪೂಜೇರ, ರವೀಂದ್ರ ಯಲಿಗಾರ, ಎಂ.ಆರ್.ಗೋಪಶೆಟ್ಟಿ, ಪುರಸಭೆ ಉಪಾಧ್ಯಕ್ಷ ಡಿ.ಡಿ.ಕಿನ್ನೂರಿ, ಸದಸ್ಯರಾದ ಮೀರಾಸಾಬ್ ವಟ್ನಾಳ, ಶ್ರೀಶೈಲ ನೇಗಿನಹಾಳ, ಸಮೀವುಲ್ಲಾ ಚೂರಿಖಾನ್, ವಿನಾಯಕ ಕಟ್ಟೇಕಾರ, ಪಂಚು ಬಾರಕೇರ, ಹನುಮಂತ ಹಿರೇಮೇತ್ರಿ, ಮುಖ್ಯಾಧಿಕಾರಿ ಎಂ.ಎಂ.ತಿಮ್ಮಾಣಿ, ಅನಿಲ ಗಿಡ್ನಂದಿ, ಬಸವರಾಜ ಹಲಗಿ, ಮಧು ಕೌಜಲಗಿ, ಯಲ್ಲಪ್ಪ ಭಜಂತ್ರಿ, ಶ್ರೀಶೈಲ ಹಿರೇಮಠ, ಎಂ.ಮಹೇಶ, ಮೃತ್ಯುಂಜಯ ಹಿರೇಮಠ, ವೀರೂ ಹೂಲಿ, ಸುರೇಶ ಮಾನೆ ಇತರರಿದ್ದರು.