ಕೋಚರಿ ಗ್ರಾಮದಲ್ಲಿ ವಿದ್ಯುತ್ ಪರಿವರ್ತಕ ಚಾಲನೆ ಕಾರ್ಯಕ್ರಮದಲ್ಲಿ ಪೃಥ್ವಿ ಕತ್ತಿ, ಮಹಾವೀರ ನಿಲಜಗಿ, ಅಜಿತ ಮುನ್ನೋಳಿ, ವಿನಯ ಪಾಟೀಲ ಇತರರಿದ್ದರು.
ಹುಕ್ಕೇರಿ: ವಿದ್ಯುತ್ ಸಹಕಾರ ಸಂಘವು ರೈತರು ಮತ್ತು ಗ್ರಾಹಕರ ಜೀವನಾಡಿಯಾಗಿದೆ. ಗ್ರಾಹಕರು ಕಡ್ಡಾಯವಾಗಿ ಅಧಿಕೃತ ವಿದ್ಯುತ್ ಸಂಪರ್ಕ ಪಡೆಯಬೇಕು. ಸಕಾಲಕ್ಕೆ ಬಿಲ್ ಪಾವತಿಸುವ ಮೂಲಕ ಸಂಘದ ಪ್ರಗತಿಗೆ ಸಹಕಾರ ನೀಡಬೇಕು ಎಂದು ವಿದ್ಯುತ್ ಸಂಘದ ನಿರ್ದೇಶಕ ಪೃಥ್ವಿ ಕತ್ತಿ ಹೇಳಿದರು.
ತಾಲೂಕಿನ ಕೋಚರಿ ಗ್ರಾಮದಲ್ಲಿ ನಿರಂತರ ಜ್ಯೋತಿ ಯೋಜನೆಯಡಿ ಹೊಸ ವಿದ್ಯುತ್ ಪರಿವರ್ತಕವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದ ಅವರು, ಕೆಲವರು ಅನಧಿಕೃತ ವಿದ್ಯುತ್ ಸಂಪರ್ಕ ಪಡೆದಿದ್ದಾರೆ. ಅಂತವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ಆಡಳಿತ ಮಂಡಳಿ ನಿರ್ಧರಿಸಿದೆ ಎಂದು ತಿಳಿಸಿದರು.
ವಿದ್ಯುತ್ ಸಹಕಾರ ಸಂಘದ ಅಧ್ಯಕ್ಷ ಮಹಾವೀರ ನಿಲಜಗಿ ಮತ್ತು ನಿರ್ದೇಶಕ ವಿನಯಗೌಡ ಪಾಟೀಲ ಮಾತನಾಡಿ, ನಿರಂತರ ವಿದ್ಯುತ್ ಪೂರೈಕೆಯಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ. ಗ್ರಾಪಂ ಸಹಕಾರ ನೀಡಿದರೆ ತೋಟಪಟ್ಟಿ ನಿವಾಸಿಗಳಿಗೂ ಶೀಘ್ರ ನಿರಂತರ ಜ್ಯೋತಿ ಒದಗಿಸುತ್ತೇವೆ ಎಂದರು.
ಉಪಾಧ್ಯಕ್ಷ ಅಜಿತ ಮುನ್ನೋಳಿ, ನಿರ್ದೇಶಕರಾದ ಕೆಂಪಣ್ಣ ದೇಸಾಯಿ, ಸತ್ಯಪ್ಪ ನಾಯಿಕ, ಶಿವನಗೌಡ ಮದವಾಲ, ಮುಖಂಡರಾದ ಲಾಜಮ್ ನಾಯಿಕವಾಡಿ, ಶಿವನಾಯಿಕ ನಾಯಿಕ, ರಾಮಗೌಡ ಮಗದುಮ್ಮ, ಕಾಡಪ್ಪ ಹುದ್ದಾರ, ಸಂತು ಪಾಟೀಲ, ಸೈಯದ್ ಸನದಿ, ಗಣೇಶ ಪಾಟೀಲ, ಮಲ್ಲಪ್ಪ ನಾಯಿಕ, ಶಿವಪುತ್ರ ಹನಗುಂದಿ, ರೆಸಿಡೆಂಟ್ ಇಂಜಿನಿಯರ್ ನೇಮಿನಾಥ ಖೇಮಲಾಪುರೆ ಇತರರಿದ್ದರು.