ಕಕಮರಿ ಗ್ರಾಮದ ಮಹಾವೀರ ವೃತ್ತದಲ್ಲಿ ಮಹಾವೀರ ಜಯಂತಿ ಆಚರಿಸಲಾಯಿತು. ಅಪ್ಪುಗೌಡ ಪಾಟೀಲ ಮಾತನಾಡಿದರು. ಗಿರಮಲ್ಲ ಜನಗೌಡ, ಗುರಪ್ಪ ದಾಶ್ಯಾಳ ಇತರರಿದ್ದರು.
ಕಕಮರಿ: ಭಗವಾನ ಮಹಾವೀರ ಮಾನವ ಕಲ್ಯಾಣಕ್ಕಾಗಿ ಬೋಧಿಸಿದ ಸತ್ಯ, ಅಹಿಂಸೆ ಮತ್ತು ಅಪರಿಗ್ರಹ ತತ್ತ್ವ ಪ್ರತಿಯೊಬ್ಬರೂ ಪಾಲಿಸಬೇಕು ಎಂದು ಅಮ್ಮಾಜೇಶ್ವರಿ ದೇವಸ್ಥಾನ ಅಧ್ಯಕ್ಷ ಅಪ್ಪುಗೌಡ ಪಾಟೀಲ ಹೇಳಿದರು.
ಗ್ರಾಮದ ಭಗವಾನ ಮಹಾವೀರ ವೃತ್ತದಲ್ಲಿ ಸೋಮವಾರ ೧೦೦೮ ಭಗವಾನ ಮಹಾವೀರರ ೨೬೨೫ನೇ ಜನ್ಮಕಲ್ಯಾಣ ಮಹೋತ್ಸವ ಹಿನ್ನೆಲೆ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಮಹಾವೀರರು ಮಾನವ ಕಲ್ಯಾಣಕ್ಕಾಗಿ ವಿಶ್ವಶಾಂತಿ ಸಂದೇಶ ನೀಡಿದ್ದಾರೆ. ಅಹಂಕಾರ, ಕ್ರೋಧ, ಮೋಹದಿಂದ ದೂರವಿರಬೇಕು. ಮನಸ್ಸಿನ ಮೇಲೆ ನಿಯಂತ್ರಣ ಸಾಧಿಸಬೇಕು. ಆಗ ನಾವೆಲ್ಲರೂ ಮಹಾವೀರರಂತಾಗಲು ಸಾಧ್ಯ ಎಂದರು.
ಜಿಪA ಮಾಜಿ ಸದಸ್ಯ ಗುರಪ್ಪ ದಾಶ್ಯಾಳ ಮಾತನಾಡಿದರು. ಹಿರಿಯರಾದ ಗಿರಮಲ್ಲ ಜನಗೌಡ, ಲಕ್ಷ್ಮಣ ಗುರ್ಕಿ, ಅಣ್ಣಪ್ಪ ತಂಗಡಿ, ಅಪ್ಪಾಸಾಬ ಈರಗೌಡ, ಭುಜಪ್ಪ ಸವದತ್ತಿ, ಜಿನ್ನಪ್ಪ ಕೋರಬು, ಮಹಾವೀರ ಕೋರಬು, ಕುಮಾರ ಕೋರಬು, ನರಸಪ್ಪ ಕೋರಬು, ರಾಯಗೊಂಡ ದುರ್ಗಣ್ಣವರ, ರವಿ ಸವದತ್ತಿ, ವಿದ್ಯಾಸಾಗರ ಕೋರಬು, ಅಣ್ಣಪ್ಪ ಚಿಗದೋಳ್ಳಿ, ಶಿಕ್ಷಕ ಮಹಾಂತೇಶ ಮಠಪತಿ ಇತರÀರಿದ್ದರು.