ಜುಗೂಳದಲ್ಲಿ 1008 ಆದಿನಾಥ ವಿವಿಧ ಉದ್ದೇಶಗಳ ಸೌಹಾರ್ದ ಸೊಸೈಟಿ ಕಟ್ಟಡವನ್ನು ಗಣ್ಯರು ಉದ್ಘಾಟಿಸಿದರು. ಮಹಾಂತೇಶ ಕವಟಗಿಮಠ, ಶ್ರೀಮಂತ ಪಾಟೀಲ, ಉತ್ತಮ ಪಾಟೀಲ, ಸ್ವಸ್ತಿಶ್ರೀ ಜಿನಸೇನ ಭಟ್ಟಾರಕ ಪಟ್ಟಾಚಾರ್ಯರು ಇತರರಿದ್ದರು.
- ವಿಪ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಹಾರೈಕೆ
- ಯುವಕರು ಆರ್ಥಿಕ ಸ್ವಾವಲಂಬಿಯಾಗಲಿ
ಹದಿನೈದು ವರ್ಷಗಳ ಹಿಂದೆ ಬಾಡಿಗೆ ಕಟ್ಟಡದಲ್ಲಿ ಸ್ಥಾಪನೆಗೊಂಡು, ಅಲ್ಪಾವಧಿಯಲ್ಲಿ ಪ್ರಗತಿಪಥದಲ್ಲಿ ಸಾಗಿ, ಸ್ವಂತ ಕಟ್ಟಡಕ್ಕೆ ಸ್ಥಳಾಂತರಗೊಳ್ಳುತ್ತಿರುವ ಜುಗೂಳ ಗ್ರಾಮದ 1008 ಆದಿನಾಥ ವಿವಿಧ ಉದ್ದೇಶಗಳ ಸೌಹಾರ್ದ ಸಹಕಾರ ರೈತರ ಮತ್ತು ಸಾರ್ವಜನಿಕರ ಆರ್ಥಿಕ ಪ್ರಗತಿಗೆ ಶ್ರಮಿಸುತ್ತಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಹೇಳಿದರು.
ಜುಗೂಳ ಗ್ರಾಮದಲ್ಲಿ ಬುಧವಾರ ಹಮ್ಮಿಕೊಂಡಿದ್ದ 1008 ಆದಿನಾಥ ವಿವಿಧ ಉದ್ದೇಶಗಳ ಸೌಹಾರ್ದ ಸಹಕಾರ ಸಂಘದ ಕಟ್ಟಡ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿ, ಬೆಳಗಾವಿ ಸಹಕಾರ ರಂಗದಲ್ಲಿ ದೇಶಕ್ಕೆ ಮಾದರಿಯಾಗಿದೆ. ಸಾವಿರಾರು ಸಂಘ-ಸಂಸ್ಥೆಗಳು ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಯುವಕರು ಸೇರಿ ಸ್ಥಾಪಿಸಿರುವ ಸಹಕಾರಿ ಇನ್ನಷ್ಟು ಪ್ರಗತಿ ಸಾಧಿಸಿ, ರೈತರ ಏಳಿಗೆಗೆ ಶ್ರಮಿಸಲಿ ಎಂದು ಹಾರೈಸಿದರು.
ಮಾಜಿ ಸಚಿವ ಶ್ರೀಮಂತ ಪಾಟೀಲ ಮಾತನಾಡಿ, ಸಹಕಾರ ಅಧ್ಯಕ್ಷ ಅರುಣ ಗಣೇಶವಾಡಿ ಪರಿಶ್ರಮ, ಆಡಳಿತ ಮಂಡಳಿ ಸಹಕಾರದೊಂದಿಗೆ ಸಂಸ್ಥೆ ಪ್ರಗತಿಪಥದಲ್ಲಿ ಸಾಗುತ್ತಿದೆ. ಇದೇ ರೀತಿ ಸಂಘ ಇನ್ನಷ್ಟು ಪ್ರಗತಿ ಸಾಧಿಸಲಿ ಎಂದು ಹೇಳಿದರು.
ನಾಂದಣಿ ಜೈನ ಮಠದ ಸ್ವಸ್ತಿಶ್ರೀ ಜಿನಸೇನ ಭಟ್ಟಾರಕ ಪಟ್ಟಾಚಾರ್ಯರು, ರಾಜಸ್ಥಾನ-ತಿಜಾರಾ ಜೈನ ಮಠದ ಸ್ವಸ್ತಿಶ್ರೀ ಸೌರಭಸೇನ ಭಟ್ಟಾರಕ ಪಟ್ಟಾಚಾರ್ಯರು, ಕಾಗವಾಡ ಗುರುದೇವಾಶ್ರಮದ ಯತೀಶ್ವರಾನಂದ ಶ್ರೀಗಳು ಆಶೀರ್ವಚನ ನೀಡಿದರು. ಸಹಕಾರ ಅಧ್ಯಕ್ಷ ಅರುಣ ಗಣೇಶವಾಡಿ ಸಹಕಾರಿಯ ಪ್ರಗತಿ ನೋಟ ವಿವರಿಸಿದರು. ಯುವ ಧುರೀಣ ಉತ್ತಮ ಪಾಟೀಲ, ಮಾಜಿ ಶಾಸಕ ಕಲ್ಲಪ್ಪಣ್ಣ ಮಗ್ಗೆನ್ನವರ, ಬೆಳಗಾವಿ ಸಹಕಾರ ಸಂಘಗಳ ಉಪನಿಬಂಧಕ ರವೀಂದ್ರ ಪಾಟೀಲ, ತಹಸೀಲ್ದಾರ್ ಹನುಮಂತ ಶಿರಹಟ್ಟಿ, ಚಿಕ್ಕೋಡಿ ಸಿಬಿಕೆಎಸ್‌ಎಸ್ ಕಾರ್ಖಾನೆ ಅಧ್ಯಕ್ಷ ಮಲ್ಲಿಕಾರ್ಜುನ ಕೋರೆ, ನಿರ್ದೇಶಕ ಅಣ್ಣಾಸಾಬ ಪಾಟೀಲ, ಮುಖಂಡರಾದ ಭಮಣ್ಣ ಚೌಗುಲೆ, ಅಭಯ ಅಕಿವಾಟೆ, ಧೂಳಗೌಡ ಪಾಟೀಲ, ಜ್ಯೋತಿಕುಮಾರ ಪಾಟೀಲ, ಸುಧಾಕರ ಗಣೇಶವಾಡಿ, ಅಜಿತ ನಾಂದ್ರೆ, ಅಭಯ ಪಾಟೀಲ, ರಾವಸಾಬ ನಾಯಿಕ, ಬಾಪಾ ಪಾಟೀಲ, ಅನಿಲ ಸುಂಕೆ, ಶಿರಗುಪ್ಪಿ ಶುಗರ್ಸ್‌ನ ಎಂಡಿ ಅರುಣ ರಾಂಡೆ, ಅರಿಹಂತ ಶುಗರ್ಸ್‌ನ ಸಿಇಒ ಮಹಾವೀರ ಪಾಟೀಲ, ಸಿಎ ಗುಂಡು ಜುಗಳೆ, ಸಹಕಾರ ಉಪಾಧ್ಯಕ್ಷ ಅಪ್ಪಾಸಾಬ ಅಲಾಸೆ ಇತರರಿದ್ದರು.
ಸಹಕಾರ ರಂಗದಲ್ಲಿ ದೇಶಕ್ಕೆ ಬೆಳಗಾವಿ ಮಾದರಿಯಾಗಿದೆ. ಸಾವಿರಾರು ಸಂಘ-ಸಂಸ್ಥೆಗಳು ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಯುವಕರು ಸೇರಿ ಸ್ಥಾಪಿಸಿರುವ ಸಹಕಾರಿ ಇನ್ನಷ್ಟು ಪ್ರಗತಿ ಸಾಧಿಸಿ, ರೈತರ ಏಳಿಗೆಗೆ ಶ್ರಮಿಸಲಿ.
— ಮಹಾಂತೇಶ ಕವಟಗಿಮಠ ವಿಪ ಮಾಜಿ ಸದಸ್ಯ