ಎಂ.ಎಸ್.ಹೊಸಮನಿ ಪಿಯು ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಪಿಎಸ್‌ಐ ಎ.ಒ.ನಿರಂಜನಸ್ವಾಮಿ, ಪ್ರೊಬೇಷನರಿ ಪಿಎಸ್‌ಐ ಶಿಲ್ಪಾ, ಬಸವರಾಜ, ವಿಜಯ ಕಲಮಠ ಇತರರಿದ್ದರು.
- ಎ.ಒ.ನಿರಂಜನಸ್ವಾಮಿ ಸಲಹೆ
- ಜಾಗೃತಿ ಅಭಿಯಾನ
ಖಾನಾಪುರ: ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಿದ್ದು, ಶಿಕ್ಷಣ ಮತ್ತು ವ್ಯಕ್ತಿತ್ವ ವಿಕಾಸದತ್ತ ಗಮನ ಹರಿಸಬೇಕು ಎಂದು ಪಿಎಸ್‌ಐ ಎ.ಒ.ನಿರಂಜನಸ್ವಾಮಿ ಸಲಹೆ ನೀಡಿದರು.
ಕೆಎಲ್‌ಇ ಸೊಸೈಟಿಯ ಎಂ.ಎಸ್.ಹೊಸಮನಿ ಪಿಯು ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ವ್ಯಸನಮುಕ್ತ ಯುವ ಪೀಳಿಗೆ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ, ಡ್ರಗ್ಸ್ ಹಾಗೂ ಇತರೆ ಮಾದಕ ವಸ್ತುಗಳ ಸೇವನೆಯಿಂದ ಯುವಕರ ಭವಿಷ್ಯ ಹಾಳಾಗುವುದರ ಜತೆಗೆ ಕುಟುಂಬ ಮತ್ತು ಸಮಾಜದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ ಎಂದರು.
ಪ್ರಾಂಶುಪಾಲ ವಿಜಯ ಕಲಮಠ ಮಾತನಾಡಿ, ವಿದ್ಯಾರ್ಥಿಗಳು ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಳ್ಳುವ ಮೂಲಕ ಸಮಾಜಕ್ಕೆ ಮಾದರಿಯಾಗಬೇಕು ಎಂದರು.
ಪ್ರೊಬೇಷನರಿ ಪಿಎಸ್‌ಐ ಶಿಲ್ಪಾ ಹಾಗೂ ಬಸವರಾಜ ಮಾದಕ ವಸ್ತುಗಳ ವಿಧಗಳು, ಅವುಗಳ ದುಷ್ಪರಿಣಾಮ ಹಾಗೂ ಸಂಬಂಧಿತ ಕಾನೂನು ಬಗ್ಗೆ ಮಾಹಿತಿ ನೀಡಿದರು.
ಉಪನ್ಯಾಸಕರಾದ ಸುನೀತಾ, ಸೋನಿಯಾ, ಮಹೇಶ ಕಲ್ಯಾಣಿ, ಬಿ.ಎಂ.ಪಾಟೀಲ ಇತರರಿದ್ದರು.
ಎಂ.ಎಸ್.ಹೊಸಮನಿ ಪಿಯು ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಪಿಎಸ್‌ಐ ಎ.ಒ.ನಿರಂಜನಸ್ವಾಮಿ, ಪ್ರೊಬೇಷನರಿ ಪಿಎಸ್‌ಐ ಶಿಲ್ಪಾ, ಬಸವರಾಜ, ವಿಜಯ ಕಲಮಠ ಇತರರಿದ್ದರು.