ಚಿಕ್ಕೋಡಿ ಪಟ್ಟಣದ ಕೆಎಲ್‌ಇ ಕಾನೂನು ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮಕ್ಕೆ ಮಲ್ಲಿಕಾರ್ಜುನ ಆರ್.ಎಂ.ಚಾಲನೆ ನೀಡಿದರು. ಡಾ.ಡಿ.ಬಿ.ಸೋಲಾಪುರೆ, ವಿ.ಎಸ್.ಬಿಳಗಿ, ಡಿ.ಬಿ.ಪಾಟೀಲ, ಎಂ.ಎಂ.ಶೆಟ್ಟಿ ಇತರರಿದ್ದರು.
ಚಿಕ್ಕೋಡಿ: ವಕೀಲರ ವೃತ್ತಿ ಮಹತ್ವದ ಕೆಲಸ. ಶ್ರಮವಹಿಸಿ ಕಕ್ಷಿದಾರರಿಗೆ ನ್ಯಾಯ ಒದಗಿಸಿಕೊಟ್ಟರೆ ಯಶಸ್ಸು ಖಚಿತ ಎಂದು ಉಚ್ಚ ನ್ಯಾಯಾಲಯದ ವಕೀಲ ಮಲ್ಲಿಕಾರ್ಜುನ ಆರ್.ಎಂ. ಹೇಳಿದರು.
ಪಟ್ಟಣದ ಕೆಎಲ್‌ಇ ಸಂಸ್ಥೆಯ ಕಾನೂನು ಮಹಾವಿದ್ಯಾಲಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ನಾಳೆಯ ಕಾನೂನು ನಾಯಕರನ್ನು ರೂಪಿಸುವುದು ಎಂಬ ವಿಷಯದಡಿ ಕಾನೂನು ವೃತ್ತಿ ಮಾರ್ಗದರ್ಶನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ವಿದ್ಯಾರ್ಥಿಗಳನ್ನು ಕಾನೂನು ವೃತ್ತಿಯತ್ತ ಪ್ರೇರೇಪಿಸುವುದರ ಜತೆ ಅದರ ಆಳ, ಸವಾಲು ಮತ್ತು ಅವಕಾಶ ಅರಿಯುವಂತೆ ತಿಳಿಸುವುದು ಅವಶ್ಯ ಎಂದರು.
ಡಾ.ಡಿ.ಬಿ.ಸೋಲಾಪುರೆ, ವಿ.ಎಸ್.ಬಿಳಗಿ, ಡಿ.ಬಿ.ಪಾಟೀಲ, ಎಂ.ಎಂ.ಶೆಟ್ಟಿ, ಪಿ.ಸಿ.ಚೌಹಾಣ, ಎಸ್.ಡಿ.ಖಾಜಿ, ಪಿ.ಎಂ.ಖಾಜಿ, ಅಡ್ವೊಕೇಟ್ ಟಿ.ಎಚ್.ಕದಮ ಇತರರಿದ್ದರು. ಜಿ.ಎಸ್.ಗೊಲಶೆಟ್ಟಿ ಸ್ವಾಗತಿಸಿದರು. ಪ್ಲೇಸ್ಮೆಂಟ್ ಸೆಲ್ ಕಾರ್ಯದರ್ಶಿ ವೀನಾ ಎಂ.ಎಸ್. ವಂದಿಸಿದರು. ಪ್ರತಿಷ್ಠಾ ಶೆಟ್ಟಿ ಮತ್ತು ಸಾಕ್ಷಿ ಐನಾಪುರೆ ನಿರೂಪಿಸಿದರು.