ಭರತೇಶ ಕಾಲೇಜಿನ ವಿವಿಧ ಚಟುವಟಿಕೆಗಳನ್ನು ಗುರುವಾರ ಪ್ರೊ.ಸಿ.ಎಂ.ತ್ಯಾಗರಾಜ ಉದ್ಘಾಟಿಸಿದರು. ಡಾ.ವಿನೋದ ದೊಡ್ಡಣ್ಣವರ, ಶ್ರೀಪಾಲ ಖೇಮಲಾಪುರೆ, ಹಿರಾಚಂದ ಕಲ್ಮನಿ, ಶಾಲಿನಿ ಚೌಗಲೆ, ಸ್ವಾತಿ ಉಪಾಧ್ಯಾಯ, ನೀತಾ ಗಂಗಾರೆಡ್ಡಿ ಇತರರಿದ್ದರು.
ಬೆಳಗಾವಿ : ವಿದ್ಯಾರ್ಥಿ ಜೀವನದಲ್ಲಿ ಕೇವಲ ಪದವಿ ಗಳಿಸುವುದಷ್ಟೇ ಮುಖ್ಯವಲ್ಲ. ಅದರೊಂದಿಗೆ ಅಗತ್ಯ ಕೌಶಲಗಳನ್ನು ಮೈಗೂಡಿಸಿಕೊಳ್ಳಬೇಕು. ಸಂವಹನ, ನಾಯಕತ್ವ, ಸಮಯ ನಿರ್ವಹಣೆ, ಸಮಸ್ಯೆ ಪರಿಹಾರ ಹಾಗೂ ಆತ್ಮವಿಶ್ವಾಸದಂತಹ ಜೀವನ ಕೌಶಲಗಳನ್ನು ಬೆಳೆಸಿಕೊಂಡಾಗ ಮಾತ್ರ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯ ಎಂದು ಕಿತ್ತೂರು ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಸಿ.ಎಂ.ತ್ಯಾಗರಾಜ ಹೇಳಿದರು.
ಜೆ.ಜಿ.ಎನ್.ಡಿ.ಭರತೇಶ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ವತಿಯಿಂದ ರೂಪಾಲಿ ಕನ್ವೆನ್ಷನ್ ಹಾಲ್‌ನಲ್ಲಿ ಏರ್ಪಡಿಸಿದ್ದ 2026-27ನೇ ಸಾಲಿನ ಫ್ರೆಷರ್ಸ್ ಡೇ, ಜಿಮಖಾನಾ, ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳನ್ನು ಉದ್ಘಾಟಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಭರತೇಶ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ.ವಿನೋದ ದೊಡ್ಡಣ್ಣವರ ಮಾತನಾಡಿ, ವಿದ್ಯಾರ್ಥಿಗಳ ಜೀವನದಲ್ಲಿ ಶಿಸ್ತು, ಉತ್ತಮ ಮೌಲ್ಯಗಳು ಹಾಗೂ ಗುಣಮಟ್ಟದ ಶಿಕ್ಷಣದ ಮಹತ್ವವನ್ನು ತಿಳಿಸಿದರು.
ಶ್ರೀಪಾಲ ಖೇಮಲಾಪುರೆ, ಹಿರಾಚಂದ ಕಲ್ಮನಿ, ಶಾಲಿನಿ ಚೌಗಲೆ , ಸ್ವಾತಿ ಉಪಾಧ್ಯಾಯ ಇತರರಿದ್ದರು. ವಿವಿಧ ಭಾಗಗಳಲ್ಲಿ ಆಯ್ಕೆಯಾದ ಜಿಮಖಾನಾ ಪ್ರತಿನಿಧಿಗಳಿಗೆ ಪ್ರಮಾಣ ವಚನ ಬೋಧಿಸಲಾಯಿತು. ಎಲ್ಲಾ ವಿಭಾಗಗಳಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಫಲಕ ನೀಡಲಾಯಿತು. ಸೂರಜ ದವಾಲೆ ಮಿಸ್ಟರ್ ಫ್ರೆಷರ್, ಪ್ರಿಯಾಂಕಾ ಪ್ರಸಾದ ಮಿಸ್ ಫ್ರೆಷರ್ ಆಗಿ ಆಯ್ಕೆಯಾದರು.
ಪ್ರಾಂಶುಪಾಲ ನೀತಾ ಗಂಗಾರೆಡ್ಡಿ ಸ್ವಾಗತಿಸಿದರು. ಮಾನಸ ಶೆಟ್ಟಿ ಹಾಗೂ ರಾಜಲಕ್ಷ್ಮಿ ಶೆಟ್ಟಿ ನಿರೂಪಿಸಿದರು. ಅಪರ್ಣ ಅಗಡಿ ವಂದಿಸಿದರು.