ಸವದತ್ತಿ ನಗರದಲ್ಲಿ ಬಾಲಕರ ವಸತಿನಿಲಯ ನಿರ್ಮಾಣಕ್ಕೆ ಶಾಸಕ ವಿಶ್ವಾಸ ವೈದ್ಯ ಭೂಮಿಪೂಜೆ ನೆರವೇರಿಸಿದರು. ಮಲ್ಲಿಕಾರ್ಜುನ ಹೆಗ್ಗನ್ನವರ, ಎಸ್.ಸಿ.ಕದ್ರಾಪುರ, ಮಾರುತಿ ಬಸಲಿಗುಂದಿ, ರತ್ನಾ ಕದಂ, ಅಮೃತ ಸಾಣಿಕೊಪ್ಪ ಇತರರಿದ್ದರು.
ನಗರದ ಚೋಪ್ರಾ ಸರ್ಕಾರಿ ಪಿಯು ಕಾಲೇಜು ಪಕ್ಕದ ರಾಘವೇಂದ್ರ ನಗರದ ಕರಿಕಟ್ಟಿ ರಸ್ತೆಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಬಾಲಕರ ವಸತಿನಿಲಯ ಕಟ್ಟಡಕ್ಕೆ ಮಂಗಳವಾರ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ವಿದ್ಯಾರ್ಥಿಗಳು ನಿಲಯದ ಅಗತ್ಯ ಕುರಿತು ತಿಳಿಸಿದ್ದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಗ್ರಾಮೀಣ ವಿದ್ಯಾರ್ಥಿಗಳ ವಸತಿ ಸಮಸ್ಯೆ ಮನಗಂಡು ನಿರ್ಮಾಣವಾಗುತ್ತಿರುವ ನಿಲಯ ಅನುಕೂಲವಾಗಲಿದೆ ಎಂದರು.
ತಹಸೀಲ್ದಾರ್ ಮಲ್ಲಿಕಾರ್ಜುನ ಹೆಗ್ಗನ್ನವರ, ತಾಪಂ ಪ್ರಭಾರ ಇಒ ಎಸ್.ಸಿ.ಕದ್ರಾಪುರ, ಬಿಸಿಎಂ ತಾಲೂಕು ಅಧಿಕಾರಿ ರತ್ನಾ ಕದಂ, ಸಿಡಿಪಿಒ ಅಮೃತ ಸಾಣಿಕೊಪ್ಪ, ಸಮಾಜ ಕಲ್ಯಾಣ ಇಲಾಖೆ
ನಿರ್ದೇಶಕ ಆರ್.ಆರ್.ಕುಲಕರ್ಣಿ, ಹಾಸೀಂ ತಹಸೀಲ್ದಾರ್, ಎಪಿಎಂಸಿ ಉಪಾಧ್ಯಕ್ಷ ಮಾರುತಿ ಬಸಲಿಗುಂದಿ, ಬಿ.ಎನ್.ಪ್ರಭುನವರ, ಗಿರೀಶ ಮುನೋಳಿ, ಜಗದೀಶ ಸಿರಸಂಗಿ, ನಿಂಗಪ್ಪ ಹಾದಿಮನಿ, ಗದಿಗೆಪ್ಪ ಕುರಿ, ಮೈಲಾರಿ ಹೊಸಮನಿ ಇತರರಿದ್ದರು.