ಮಾಣಿಕಪ್ರಭು ವಿರಕ್ತಮಠದಲ್ಲಿ ನಂದಿಸೇನೆ ರಥಯಾತ್ರೆಗೆ ಅಭಿನವ ರಾಚೋಟೇಶ್ವರ ದೇವರು ಪೂಜೆ ಸಲ್ಲಿಸಿ ಬೀಳ್ಕೊಟ್ಟರು. ಬಸವರಾಜ ಬಿರಾದಾರ, ಪ್ರಹ್ಲಾದ ಪಾಟೀಲ, ಭೀಮಗೌಡ ಬಿರಾದಾರ ಇತರರಿದ್ದರು.
ಐಗಳಿ: ಕೃಷಿಯಲ್ಲಿ ಯಂತ್ರೋಪಕರಣಗಳ ಬಳಕೆ ಹೆಚ್ಚುತ್ತಿರುವುದರಿಂದ ಮಣ್ಣಿನ ಫಲವತ್ತತೆ ಕುಸಿಯುತ್ತಿದೆ ಎಂದು ಐಗಳಿ ಮಾಣಿಕಪ್ರಭು ವಿರಕ್ತಮಠದ ಅಭಿನವ ರಾಚೋಟೇಶ್ವರ ದೇವರು ನುಡಿದರು.
ಗ್ರಾಮದ ಮಾಣಿಕಪ್ರಭು ವಿರಕ್ತಮಠದ ಆವರಣದಲ್ಲಿ ಶನಿವಾರ ಯಡೂರದಿಂದ ಶ್ರೀಶೈಲಕ್ಕೆ ಹೊರಡುವ ನಂದಿಸೇನೆ ರಥಯಾತ್ರೆಗೆ ಪೂಜೆ ಸಲ್ಲಿಸಿ ಮಾತನಾಡಿ, ಪ್ರತಿವರ್ಷ ಜಾತ್ರೆಯಲ್ಲಿ ಜಾನುವಾರು ಪ್ರದರ್ಶನ ಹಮ್ಮಿಕೊಂಡು ಬಹುಮಾನ ನೀಡುತ್ತೇವೆ. ಇದರಿಂದ ರೈತರಲ್ಲಿ ಜಾನುವಾರು ಸಾಕಲು ಉತ್ಸಾಹ ಹೆಚ್ಚುತ್ತದೆ ಎಂದರು. ಬಸವರಾಜ ಬಿರಾದಾರ ಮಾತನಾಡಿ, ಜೋಡೆತ್ತಿನ ಕೃಷಿಕರು ಬಸವತತತ್ತ್ವದ ಮೂಲಬೇರುಗಳೆಂದು ಗುರುತಿಸಿ ಬಜೆಟ್‌ನಲ್ಲಿ ಶೇ.೧೦ರಷ್ಟು ಮೀಸಲಿಟ್ಟು, ಪ್ರತಿ ತಿಂಗಳು ೧೧,೦೦೦ ರೂ. ಪ್ರೋತ್ಸಾಹಧನ ನೀಡಬೇಕು ಎಂದರು.
ಜಾತ್ರಾ ಕಮಿಟಿ ಅಧ್ಯಕ್ಷ ಪ್ರಹ್ಲಾದ ಪಾಟೀಲ, ಭೀಮಗೌಡ ಬಿರಾದಾರ, ಮಲಗೌಡ ಪಾಟೀಲ, ಕೆ.ಎಸ್.ಬಿಜ್ಜರಗಿ, ಹನುಮಂತ ಕರೆಗಾರ ಇತರರಿದ್ದರು.