ಐನಾಪುರ ಪಟ್ಟಣ ಪಂಚಾಯಿತಿಗೆ ಅಧ್ಯಕ್ಷೆಯಾಗಿ ಲಕ್ಷ್ಮವ್ವ ಅಡಿಶೇರಿ, ಉಪಾಧ್ಯಕ್ಷೆಯಾಗಿ ಜಯಶ್ರೀ ಹರಳೆ ಅವಿರೋಧ ಆಯ್ಕೆಯಾದ ಹಿನ್ನೆಲೆಯಲ್ಲಿ ಸನ್ಮಾನಿಸಲಾಯಿತು. ಪ್ರವೀಣ ಗಾಣಿಗೇರ, ಅರುಣ ಗಾಣಿಗೇರ, ಸಂಜಯ ಬಿರಡಿ ಇತರರಿದ್ದರು. 
ಬೆಳಗಾವಿ

ಲಕ್ಷ್ಮವ್ವ ಅಧ್ಯಕ್ಷೆ, ಜಯಶ್ರೀ ಉಪಾಧ್ಯಕ್ಷೆ

ಐನಾಪುರ: ಪಟ್ಟಣ ಪಂಚಾಯಿತಿ 3ನೇ ಅವಧಿಗೆ ಮಂಗಳವಾರ ಜರುಗಿದ ಚುನಾವಣೆ ಪ್ರಕ್ರಿಯೆಯಲ್ಲಿ ಅಧ್ಯಕ್ಷೆಯಾಗಿ ಕಾಂಗ್ರೆಸ್ ಪಕ್ಷದ ಲಕ್ಷ್ಮವ್ವ ಅಡಿಶೇರಿ, ಉಪಾಧ್ಯಕ್ಷೆಯಾಗಿ ಜಯಶ್ರೀ ಹರಳೆ ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ ತಹಸೀಲ್ದಾರ್ ರವೀಂದ್ರ ಹಾದಿಮನಿ ಘೋಷಿಸಿದರು.
ಅಧ್ಯಕ್ಷೆಯಾಗಿದ್ದ ಕಸ್ತೂರಿ ಮಡಿವಾಳ ಹಾಗೂ ಉಪಾಧ್ಯಕ್ಷೆಯಾಗಿದ್ದ ರತ್ನವ್ವ ಮಾದರ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ತೆರವಾಗಿದ್ದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಒಂದೇ ನಾಮಪತ್ರ ಸಲ್ಲಿಕೆಯಾಗಿದ್ದರಿಂದ ಅವಿರೋಧ ಆಯ್ಕೆ ಮಾಡಲಾಯಿತು.
ನೂತನ ಅಧ್ಯಕ್ಷೆ ಮತ್ತು ಉಪಾಧ್ಯಕ್ಷೆಯನ್ನು ಸನ್ಮಾನಿಸಲಾಯಿತು. ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಹಾಂತೇಶ ಕವಲಾಪುರೆ, ಮಹಾಂತೇಶ ಬಾದವಾಡಗಿ, ಗ್ರಾಮ ಆಡಳಿತ ಅಧಿಕಾರಿ ಪ್ರಕಾಶ ಪುಠಾಣಿ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು.
ಪಪಂ ಸದಸ್ಯ ಪ್ರವೀಣ ಗಾಣಿಗೇರ, ಅರುಣ ಗಾಣಿಗೇರ, ಸಂಜಯ ಬಿರಡಿ, ಕುಮಾರ ಜಯಕರ, ರಾಜು ಹರಳೆ, ಧರೆಪ್ಪ ಹರಳೆ, ದಾದಾ ಜೆಂತೆನ್ನವರ, ಸಂಜು ಕುಸನಾಳೆ, ಗುರುರಾಜ ಮಡಿವಾಳ, ಕುಮಾರ ಜಯಕರ, ಸುರೇಶ ಅಡಿಶೇರಿ, ಪ್ರಕಾಶ ಚಿನಗಿ, ಸಿದ್ದು ಅಡಿಶೇರಿ, ಪ್ರಕಾಶ ಗಾಣಿಗೇರ ಇತರರಿದ್ದರು.