ಬೆಳಗಾವಿ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಯಲ್ಲಮ್ಮ ಪ್ರಾಧಿಕಾರ ಸಭೆಯಲ್ಲಿ ಶಾಸಕ ವಿಶ್ವಾಸ ವೈದ್ಯ ಭಾಗಿ. 
ಬೆಳಗಾವಿ

ಸತೀಶ ಜಾರಕಿಹೊಳಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ; ಶಾಸಕ ವೈದ್ಯ 'ವಿಶ್ವಾಸ'

ಬೆಳಗಾವಿ: ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿಗೆ ಅವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೊಟ್ಟರೆ ಒಳ್ಳೆಯದು.‌ಪಕ್ಷ ಸಂಘಟನೆಗೆ ಮತ್ತಷ್ಟು ಬಲ ಬರಲಿದೆ ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.
ಬೆಳಗಾವಿ ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸತೀಶ್ ಜಾರಕಿಹೊಳಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೊಟ್ಟರೇ ಒಳ್ಳೆಯದು.ಒಳ್ಳೆಯ ಕೆಲಸ ಮಾಡ್ತಾರೆ, ಪಕ್ಷದ ಅಧಿಕಾರಕ್ಕೆ ಬರಲು ಸಹಕಾರಿಯಾಗಲಿದೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಯೋಜಿಸಿರುವಬ್ರೇಕ್ ಫಾಸ್ಟ್ ಮಿಟಿಂಗ್ ಬಗ್ಗೆ ಮಾಹಿತಿ ಇಲ್ಲ. ಹೀಗಾಗಿ ಸವದತ್ತಿ ಯಲ್ಲಮ್ಮ ಪ್ರಾಧಿಕಾರದ ಸಭೆ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಇದ್ದೇನೆ ಎಂದರು.
ಸಿಎಂ ಸಿದ್ದರಾಮಯ್ಯ ಬದಲಾವಣೆ ಬಗ್ಗೆ ಮಾಹಿತಿ ಇಲ್ಲ. ಸಿಎಲ್ ಪಿ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಇಲ್ಲ. ಮೆಸಜ್ ಬಂದ್ರೆ ಹೋಗುತ್ತೇನೆ ಇಲ್ಲ ಅಂದ್ರೆ ಇಲ್ಲ ಎಂದರು.
ನಾನು ಸಚಿವ ಸ್ಥಾನದ ಲಾಭಿ ಮಾಡಲ್ಲ.ಒಮ್ಮೆ, ಎರಡು ಸಲ ಗೆದ್ದವರು ಬೆಂಗಳೂರಿನಲ್ಲಿ ನಾಲ್ಕೈದು ತಿಂಗಳ ಹಿಂದೆ ಸಭೆ ಮಾಡಿದ್ದೇವೆ. ಒಟ್ಟು 65 ಜನ ಶಾಸಕರು ಸಭೆ ಮಾಡಿದ್ವಿ.136 ಶಾಸಕ ಪೈಕಿ ಶೇಕಡಾ 40 ರಷ್ಟು ಮೊದಲ ಸಲ ಗೆದ್ದವರು ಇದ್ದೇವೆ.ನಮ್ಮವರಿಗೂ ಅವಕಾಶ ಕೊಡಿ ಎಂದು ಕೇಳಿದ್ದೇವೆ.
ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ.ಸತೀಶ್ ಜಾರಕಿಹೊಳಿಗೆ ಸಿಎಂ, ಕೆಪಿಸಿಸಿ ಹುದ್ದೆ ನೀಡುವುದು ಹೈಕಮಾಂಡ್ ಗೆ ಬಿಟ್ಟಿದ್ದು ಎಂದರು.