ಈಚೆಗೆ ಮೃತರಾದ ಚಿಂಚಲಿ ಶಾಖೆ ಸದಸ್ಯ ಬಸಪ್ಪ ಮಾರುತಿ ಖಿಲಾರೆ ಅವರ ವಾರಸುದಾರರಿಗೆ ಅಪಘಾತ ವಿಮೆಯ 1 ಲಕ್ಷ ರೂಪಾಯಿ ಪರಿಹಾರವನ್ನು ಡಾ.ಪ್ರಭಾಕರ ಕೋರೆ ಕೋ-ಆ್ ಕ್ರೆಡಿಟ್ ಸೊಸೈಟಿ ಚಿಂಚಲಿ ಶಾಖೆ ಅಧ್ಯಕ್ಷ ಜಗನ್ನಾಥ ಪಾಟೀಲ ವಿತರಿಸಿದರು. ರಾವಸಾಹೇಬ ಗುಂಡಕಲ್ಲೆ, ಪ್ರದೀಪ ಬಿಳ್ಳೂರೆ ಇತರರಿದ್ದರು. 
ಬೆಳಗಾವಿ

ರೈತರ ಅಭಿವೃದ್ಧಿಗೆ ಕೋರೆ ಸೊಸೈಟಿ ಬದ್ಧ

ಮಾಂಜರಿ: ಕೆಎಲ್‌ಇ ಸಂಸ್ಥೆ ಗೌರವ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ರೈತರ ಅಭಿವೃದ್ಧಿಗಾಗಿ ಜನಪರ ಯೋಜನೆ ಜಾರಿಗೊಳಿಸಿದ್ದಾರೆ. ಅವುಗಳ ಸದುಪಯೋಗ ಪಡೆದು ಆರ್ಥಿಕವಾಗಿ ಬಲಿಷ್ಠರಾಗಬೇಕು ಎಂದು ಡಾ.ಪ್ರಭಾಕರ ಕೋರೆ ಕೋ-ಆ್ ಕ್ರೆಡಿಟ್ ಸೊಸೈಟಿ ಚಿಂಚಲಿ ಶಾಖೆ ಅಧ್ಯಕ್ಷ ಜಗನ್ನಾಥ ಪಾಟೀಲ ಹೇಳಿದರು.
ಈಚೆಗೆ ಮೃತರಾದ ಚಿಂಚಲಿ ಶಾಖೆ ಸದಸ್ಯ ಬಸಪ್ಪ ಮಾರುತಿ ಖಿಲಾರೆ ಅವರ ವಾರಸುದಾರರಿಗೆ ಅಪಘಾತ ವಿಮೆಯ 1 ಲಕ್ಷ ರೂಪಾಯಿ ಪರಿಹಾರ ವಿತರಿಸಿ ಮಾತನಾಡಿದರು. ವಸಂತ ಕರಾಕಾಯಿ, ಬಾಬು ನಿಂಗನೂರೆ, ಅಂಕುಶ ಜಾಧವ, ಗುರುಲಿಂಗ ಕುಂಬಾರ, ಭಾಗಪ್ಪ ಚೌಗುಲೆ, ಜಾಕೀರಹುಸೇನ್ ಬಿಚ್ಚು, ವ್ಯವಸ್ಥಾಪಕ ನಿರ್ದೇಶಕ ದೇವೇಂದ್ರ ಕರೋಶಿ, ವಿಮೆ ಅಧಿಕಾರಿ ರಾವಸಾಹೇಬ ಗುಂಡಕಲ್ಲೆ, ಶಾಖಾ ವ್ಯವಸ್ಥಾಪಕ ಪ್ರದೀಪ ಬಿಳ್ಳೂರೆ ಇತರರಿದ್ದರು.