ಚಿಂಚಣಿ ಸಿದ್ಧಪ್ರಭು ಪದವಿಪೂರ್ವ ಕಾಲೇಜಿನಲ್ಲಿ ಈಚೆಗೆ ಸ್ನೇಹಸಮ್ಮೇಳನ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭವನ್ನು ಗಣ್ಯರು ಉದ್ಘಾಟಿಸಿದರು. ಎ.ಎಂ.ಕಾಮತ, ಸಿದ್ದಪ್ಪ ಪಟಾಯತ್, ಸುರೇಖಾ ಕಾಂಬಳೆ, ಸುರೇಖಾ ಕುಲಕರ್ಣಿ ಇತರರಿದ್ದರು. 
ಬೆಳಗಾವಿ

ಮೌಲ್ಯಾಧಾರಿತ ಜೀವನಕ್ಕೆ ಜ್ಞಾನ ಅಗತ್ಯ

ಪ್ರಶಾಂತ ಹೂಗಾರ
ಚಿಕ್ಕೋಡಿ: ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ಉತ್ತಮ ವ್ಯಕ್ತಿತ್ವ ಹಾಗೂ ಸಮಾಜಮುಖಿ ಚಿಂತನೆ ಬೆಳೆಸಿಕೊಳ್ಳಬೇಕೆಂದು ಪ್ರಾಚಾರ್ಯ ಎ.ಎಂ.ಕಾಮತ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಚಿಂಚಣಿ ಸಿದ್ಧಪ್ರಭು ಪದವಿಪೂರ್ವ ಕಾಲೇಜಿನಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಸ್ನೇಹಸಮ್ಮೇಳನ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಬಂಬಲವಾಡದ ಗೌತಮ ಸಿದ್ಧಾರ್ಥ ಪ್ರೌಢಶಾಲೆ ಮುಖ್ಯಶಿಕ್ಷಕಿ ಸರೋಜನಿ ಕುಂದರಗಿ ಮಾತನಾಡಿ, ವಿದ್ಯಾರ್ಥಿಗಳು ಶಿಸ್ತು, ಪರಿಶ್ರಮ ಹಾಗೂ ಉತ್ತಮ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಗುರಿ ಸಾಧನೆಗೆ ಮುಂದಾಗಬೇಕು. ಶಿಕ್ಷಣವೇ ಭವಿಷ್ಯದ ಯಶಸ್ಸಿನ ಮೂಲಾಧಾರ ಎಂದರು. ಸಂಸ್ಥೆಯ ಕಾರ್ಯದರ್ಶಿ ಸಿದ್ದಪ್ಪ ಪಟಾಯತ್, ಮುಖ್ಯಶಿಕ್ಷಕಿ ಸುರೇಖಾ ಕಾಂಬಳೆ, ಸುರೇಖಾ ಕುಲಕರ್ಣಿ, ವಂದನಾ ಹುಲ್ಲೊಳ್ಳಿ, ಶಿವಾನಂದ ಕಮತೆ, ಶ್ರೀಧರ ಕಿಚಡೆ, ಆರ್.ಟಿ.ಕವಟಕೊಪ್ಪ, ರೂಪಾ ಗುಡೋಡಗಿ, ಆನಂದ ಪಟಾಯತ್, ಎಸ್.ಬಿ.ಪಾಟೀಲ ಇತರರಿದ್ದರು.