ತೆನಿಕೊಳ್ಳದ ಕೆಎಲ್‌ಇ ಕೃಷಿ ತರಬೇತಿ ಮತ್ತು ಸಂಶೋಧನಾ ವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಡಾ.ಬಿ.ಡಿ.ಬಿರಾದಾರ, ಡಾ.ಮಂಜುನಾಥ ಚೌರಡ್ಡಿ, ಶಂಕರಗೌಡ ಪಾಟೀಲ ಇತರರು ಸಸಿಗೆ ನೀರೆರೆದರು. 
ಬೆಳಗಾವಿ

ಕೃಷಿ ಕ್ಷೇತ್ರಕ್ಕೆ ಕೆಎಲ್‌ಇ ಕೊಡುಗೆ ಅನನ್ಯ

ಬೆಳಗಾವಿ:
ಸವದತ್ತಿ ತಾಲೂಕಿನ ತೆನಿಕೊಳ್ಳದ ಕೆಎಲ್‌ಇ ಕೃಷಿ ತರಬೇತಿ ಮತ್ತು ಸಂಶೋಧನಾ ವಿದ್ಯಾಲಯದಲ್ಲಿ ಬುಧವಾರ ಏರ್ಪಡಿಸಿದ್ದ 2026-27ನೇ ಸಾಲಿನ ಕೃಷಿ ಡಿಪ್ಲೊಮಾ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಶಿಸ್ತು, ಸಮರ್ಪಣೆ ಹಾಗೂ ವೈಜ್ಞಾನಿಕ ಮನೋಭಾವದೊಂದಿಗೆ ಅಧ್ಯಯನ ಮಾಡಿ ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಕೊಡುಗೆ ನೀಡುವಂತರಾಗಬೇಕು ಎಂದರು.
ಐಸಿಎಆರ್ ಕೆಎಲ್‌ಇ ಕೆವಿಕೆ ಮುಖ್ಯಸ್ಥ ಡಾ.ಮಂಜುನಾಥ ಚೌರಡ್ಡಿ ಮಾತನಾಡಿ, ವಿದ್ಯಾರ್ಥಿಗಳು ಸಮಯಪಾಲನೆ, ಕಠಿಣ ಪರಿಶ್ರಮ ಹಾಗೂ ನಿರಂತರ ಕಲಿಕೆಯ ಮನೋಭಾವ ಯಶಸ್ಸಿನ ಮೂಲ ಎಂದರು.
ಕ್ಷೇತ್ರ ವ್ಯವಸ್ಥಾಪಕ ಶಂಕರಗೌಡ ಪಾಟೀಲ, ಕೆಎಲ್‌ಇ ಕೃಷಿ ತರಬೇತಿ ಮತ್ತು ಸಂಶೋಧನಾ ವಿದ್ಯಾಲಯದ ಪ್ರಾಂಶುಪಾಲ ಡಾ.ಶಿವಾನಂದ ಗೌಡ್ರ ಇತರರಿದ್ದರು. ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು, ಪಾಲಕರು ಪಾಲ್ಗೊಂಡಿದ್ದರು. ಹೊಸದಾಗಿ ಪ್ರವೇಶ ಪಡೆದ ವಿದ್ಯಾರ್ಥಿಗಳನ್ನು ಸ್ವಾಗತಿಸಲಾಯಿತು. ಅಕ್ಷತಾ ಚನ್ನಣ್ಣವರ ನಿರೂಪಿಸಿದರು. ಡಾ.ಸೌರಭ ಮುನ್ನೋಳಿ ವಂದಿಸಿದರು.