ಅಥಣಿ ಶಿವಯೋಗಿ ನಗರದ ಕೇರಿ ಲಕ್ಕವ್ವ ದೇವಸ್ಥಾನದ ಜಾತ್ರಾ ಮಹೋತ್ಸವದಲ್ಲಿ ಮರುಳಸಿದ್ಧ ಸ್ವಾಮೀಜಿಯನ್ನು ಸನ್ಮಾನಿಸಲಾಯಿತು. ಬಸಪ್ಪ ಬಕಾರಿ, ಗಿರೀಶ ದಿವಾನಮಳ, ಬಾಬು ಜೋಗಾಣಿ, ಭೀಮು ದಿವಾನಮಳ ಇತರರಿದ್ದರು. 
ಬೆಳಗಾವಿ

ಕೇರಿ ಲಕ್ಕವ್ವ ದೇವಿ ಜಾತ್ರೆ ಸಂಭ್ರಮ

ಅಥಣಿ: ಸ್ಥಳೀಯ ಶಿವಯೋಗಿ ನಗರದ ಕೇರಿ ಲಕ್ಕವ್ವ ದೇವಿ ಜಾತ್ರಾ ಮಹೋತ್ಸವ ಅಂಗವಾಗಿ ಬುಧವಾರ ಪೂರ್ಣಕುಂಭ ಮೆರವಣಿಗೆಯೊಂದಿಗೆ ಪಲ್ಲಕ್ಕಿ ಉತ್ಸವ ಜರುಗಿತು.
ಹಿರಿಯ ಸಮಾಜ ಸೇವಕ ಶಿವಾನಂದ ದಿವಾನಮಳ ಮಾತನಾಡಿ, ನಗರದ ಕೇರಿ ಲಕ್ಕವ್ವ ದೇವಸ್ಥಾನದ ಕಲ್ಯಾಣ ಮಂಟಪವು ಭಕ್ತರ ದೇಣಿಗೆಯಿಂದ ಪೂರ್ಣಗೊಂಡಿದೆ. ಅದೇ ರೀತಿ ದೇವಸ್ಥಾನದ ಕಟ್ಟಡ ಕಾಮಗಾರಿಗೆ ಶಾಸಕ ಲಕ್ಷ್ಮಣ ಸವದಿ ಅವರು ಈಗಾಗಲೇ ೩೦ ಲಕ್ಷ ರೂ. ಅನುದಾನ ಬಿಡುಗಡೆ ಮಾಡಿದ್ದಾರೆ. ಶೀಘ್ರ ಕೊಠಡಿ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲಾಗುವುದು. ಬಡವರಿಗೆ ಅನುಕೂಲವಾಗುವ ದೃಷ್ಟಿಯಿಂದ ನಿರ್ಮಿಸಿರುವ ಕಲ್ಯಾಣಮಂಟಪದ ಸದುಪಯೋಗ ಪಡೆಯಬೇಕು ಎಂದರು.
ಶೆಟ್ಟರಮಠದ ಮರುಳಸಿದ್ಧ ಸ್ವಾಮೀಜಿ ಮಾತನಾಡಿ, ಸಮಾಜಕ್ಕೆ ಮಾದರಿಯಾಗುವಂತೆ ಕೇರಿ ಲಕ್ಕವ್ವ ದೇವಸ್ಥಾನ ಜೀರ್ಣೋದ್ಧಾರಗೊಂಡು ಜನಪಯೋಗಿಯಾಗಲಿ. ಧಾರ್ಮಿಕ ಕಾರ್ಯಗಳಿಂದ ಭಕ್ತರಲ್ಲಿ ಮಾನಸಿಕ ನೆಮ್ಮದಿ ಹೊಂದಲು ಸಹಕಾರಿಯಾಗಿದೆ. ಇಂತಹ ಕಾರ್ಯದಲ್ಲಿ ಸರ್ವಧರ್ಮೀಯರು ಪಾಲ್ಗೊಂಡಿರುವುದು ಹೆಮ್ಮೆ ಸಂಗತಿ ಎಂದರು.
ಉಡಿ ತುಂಬುವ ಕಾರ್ಯಕ್ರಮ ಜರುಗಿತು. ಬಸಪ್ಪ ಬಕಾರಿ, ಬಾಬು ಜೋಗಾಣಿ, ಭೀಮು ದಿವಾನಮಳ, ಶಿವು ಬಳೊಳ್ಳಿ, ಗಿರೀಶ ದಿವಾನಮಳ, ಶ್ರೀಶೈಲ ಹಳ್ಳದಮಳ, ಮಹಾದೇವ ಹಳ್ಳದಮಳ, ಬಸಪ್ಪ ಮೈಗೂರ, ನಿತ್ಯಾನಂದ ಚರಂತಿಮಠ ಇತರರಿದ್ದರು.