ಬೆಲ್ಲದ ಬಾಗೇವಾಡಿಯಲ್ಲಿ ಹಮ್ಮಿಕೊಂಡಿದ್ದ ಹೊನಲು ಬೆಳಕಿನ ಅಂತಾರಾಜ್ಯ ಮಹಿಳಾ ಕಬಡ್ಡಿ ಪಂದ್ಯಾವಳಿಗೆ ಶಾಸಕ ನಿಖಿಲ ಮತ್ತು ಪವನ ಕತ್ತಿ ಚಾಲನೆ ನೀಡಿದರು. ಸಂದೀಪ ಕತ್ತಿ, ಸುಧೀರ ಕತ್ತಿ, ಮಹಾವೀರ ನಿಲಜಗಿ, ಕೆಂಪಣ್ಣ ದೇಸಾಯಿ ಇತರರಿದ್ದರು.
ಹುಕ್ಕೇರಿ: ದೇಸಿ ಕ್ರೀಡೆಗಳನ್ನು ಬೆಳೆಸುವ ಉದ್ದೇಶದಿಂದ ಅಂತಾರಾಜ್ಯ ಮಹಿಳಾ ಕಬಡ್ಡಿ ಪಂದ್ಯಾವಳಿ ಹಮ್ಮಿಕೊಳ್ಳಲಾಗಿದೆ. ಕತ್ತಿ ಮನೆತನ ಕ್ರೀಡೆಗಳನ್ನು ಪ್ರೋತ್ಸಾಹಿಸುತ್ತಾ ಬಂದಿದೆ ಎಂದು ಶಾಸಕ ನಿಖಿಲ ಕತ್ತಿ ಹೇಳಿದರು.
ತಾಲೂಕಿನ ಬೆಲ್ಲದ ಬಾಗೇವಾಡಿಯಲ್ಲಿ ರಾಜ್ಯ ಅಮೆಚ್ಯೂರ್ ಕಬಡ್ಡಿ ಅಸೋಸಿಯೇಷನ್ ಮತ್ತು ರಾಹುಲ ಕತ್ತಿ ಸ್ಪೋರ್ಟ್ಸ್ ಮತ್ತು ಸೋಶಿಯಲ್ ಕ್ಲಬ್ ಆಶ್ರಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಹೊನಲು ಬೆಳಕಿನ ಅಂತಾರಾಜ್ಯ ಮಹಿಳಾ ಕಬಡ್ಡಿ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದ ಅವರು, ಸೋದರ ದಿ.ರಾಹುಲ ಕತ್ತಿ ಹೆಸರಿನಲ್ಲಿ ಸುಸಜ್ಜಿತ ಕ್ರೀಡಾ ಮೈದಾನ ನಿರ್ಮಿಸಿ, ಅಲ್ಲ್ಲಿ ಅಂತಾರಾಷ್ಟ್ರೀಯ ಮಟ್ಟದ ಸೌಲಭ್ಯ ಒದಗಿಸುವ ಮೂಲಕ ಕ್ರಿಕೆಟ್ ಪಂದ್ಯಾವಳಿ ನಡೆಸುತ್ತಿದ್ದೇವೆ ಎಂದರು.
ಅರ್ಬನ್ ಬ್ಯಾಂಕ್ ಅಧ್ಯಕ್ಷ ಪವನ ಕತ್ತಿ ಮಾತನಾಡಿ, ಕಲೆ, ಕ್ರೀಡೆ, ಧಾರ್ಮಿಕ ಮತ್ತು ಸಮಾಜ ಸೇವೆಗಳಿಗೆ ಪ್ರೋತ್ಸಾಹಿಸುವುದು ನಮ್ಮ ವೈಶಿಷ್ಟೃ. ದೇಸಿ ಕ್ರೀಡೆಗಳು ಗ್ರಾಮೀಣ ಜನರಿಂದ ಉಳಿದಿವೆ. ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಮಟ್ಟದಲ್ಲಿ ಕಬಡ್ಡಿ, ವಾಲಿಬಾಲ್,
ಖೋಖೋ ಮೊದಲಾದ ದೇಸಿ ಕ್ರೀಡೆಗಳನ್ನು ಆಯೋಜಿಸುವ ಚಿಂತನೆ ಇದೆ ಎಂದರು.
ಈ ಮೊದಲು ನಡೆಸುತ್ತಿದ್ದ ಕ್ರಿಕೆಟ್ ಪಂದ್ಯಾವಳಿಗಳನ್ನು ಮತ್ತೇ ಪ್ರಾರಂಭಿಸುವಂತೆ ಶಾಸಕ ನಿಖಿಲ ಮತ್ತು ಪವನ ಕತ್ತಿ ಅವರನ್ನು ಕ್ರಿಕೆಟ್ ಅಭಿಮಾನಿಗಳು ಒತ್ತಾಯಿಸಿದರು. ಮಾಜಿ ಸಂಸದ ರಮೇಶ ಕತ್ತಿ ಅವರ ಮಾರ್ಗದರ್ಶನದಲ್ಲಿ ಗ್ರಾಮದ ಹಿರಿಯರೊಂದಿಗೆ ಚರ್ಚಿಸಿ, ಕೋರಿಕೆ ಈಡೇರಿಸುವುದಾಗಿ ಭರವಸೆ ನೀಡಿದರು. 9 ರಾಜ್ಯಗಳ 33 ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು.
ವಿದ್ಯುತ್ ಸಹಕಾರ ಸಂಘದ ಅಧ್ಯಕ್ಷ ಮಹಾವೀರ ನಿಲಜಗಿ, ಉಪಾಧ್ಯಕ್ಷ ಅಜಿತ್ ಮುನ್ನೋಳಿ, ನಿರ್ದೇಶಕರಾದ ಕೆಂಪಣ್ಣ ವಾಸೇದಾರ, ನಂದು ಮುಡಸಿ, ಶಿವನಗೌಡ ಮದವಾಲ, ಪಿಕಾರ್ಡ್ ಬ್ಯಾಂಕ್ ನಿರ್ದೇಶಕ ಶೀತಲ ಬ್ಯಾಳಿ, ಗುರಪ್ಪ ತಳವಾರ, ಗ್ರಾಪಂ ಮಾಜಿ ಅಧ್ಯಕ್ಷ ಗಂಗಾಧರ ನಾಂವಿ, ಮುಖಂಡರಾದ ಸಂದೀಪ ಕತ್ತಿ, ಸುಧೀರ ಕತ್ತಿ, ಮಹಾನಿಂಗ ಶೆಟ್ಟಿ, ಎಂ.ಕೆ.ಪೂಜೇರಿ, ಸಿದ್ಧಲಿಂಗಯ್ಯ ಕಡಹಟ್ಟಿಮಠ, ಅಶೋಕ ಬೆಲ್ಲದ, ಅಪ್ಪಾಸಾಹೇಬ ಖೇಮಲಾಪುರೆ, ಎ.ಕೆ.ಪಾಟೀಲ, ಲಾಜಮ್ ನಾಯಿಕವಾಡಿ, ಶ್ರೀಶೈಲ ಮಠಪತಿ, ಬಸವರಾಜ ತಳವಾರ, ಲಕ್ಷ್ಮಣ ರಾಮದುರ್ಗ, ಯಾಸೀನ್ ಕಲೈಗಾರ, ಸತ್ಯಪ್ಪ ಚಂದರಗಿ, ಆನಂದ ಲಕ್ಕುಂಡಿ, ಇಲಿಯಾಸ್ ಅತ್ತಾರ್, ರಾಜು ಮುನ್ನೋಳಿ, ಗುರಪ್ಪ ತಳವಾರ, ಸುನೀಲ ಬೆಲ್ಲದ, ರವಿ ಕತ್ತಿ, ಶ್ರೀಶೈಲ ಚರಾಟಿ ಇತರರಿದ್ದರು. ವಿ.ಎಂ.ಕತ್ತಿ ಶಿಕ್ಷಣ ಸಂಸ್ಥೆ ಆಡಳಿತಾಧಿಕಾರಿ ಕೆ.ಸಿ.ಮುಚಖಂಡಿ ಸ್ವಾಗತಿಸಿದರು.