ಹುಕ್ಕೇರಿ ಬಾಪೂಜಿ ಶಿಕ್ಷಣ ಸಂಸ್ಥೆಯಲ್ಲಿ ನಡೆದ ರಾಷ್ಟ್ರಮಟ್ಟದ ಜೂನಿಯರ್ ಡಾಡ್ಜ್ ಬಾಲ್ ಪಂದ್ಯಾವಳಿಯಲ್ಲಿ ವಿಜೇತ ಕರ್ನಾಟಕ ತಂಡಕ್ಕೆ ಬಹುಮಾನ ವಿತರಿಸಲಾಯಿತು. ಪಿ.ಎಸ್.ಬ್ರಾರ, ವಿಷ್ಣು ಹೆಬ್ಬಾರ, ಎ.ಬಿ.ಜುನೇದ್‌ಪಟೇಲ, ಬಸವರಾಜ ಅಮ್ಮಣಗಿ, ಅಡಿವೆಪ್ಪ ಬೂದಿಗೊಪ್ಪ, ಲೀಲಾವತಿ ಹಿರೇಮಠ ಇತರರಿದ್ದರು. 
ಬೆಳಗಾವಿ

ಡಾಡ್ಜ್ ಬಾಲ್‌ನಲ್ಲಿ ಕರ್ನಾಟಕಕ್ಕೆ ಜಯ

ಹುಕ್ಕೇರಿ: ಪಟ್ಟಣ ಹೊರವಲಯದ ಬಾಪೂಜಿ ಶಿಕ್ಷಣ ಸಂಸ್ಥೆಯ ಬಾಪೂಜಿ ಅಂತಾರಾಷ್ಟ್ರೀಯ ಸಿಬಿಎಸ್‌ಇ ಶಾಲೆ ಮತ್ತು ವಸತಿ ಪಿಯು ಕಾಲೇಜಿನಲ್ಲಿ ಡಾಡ್ಜ್ ಬಾಲ್ ಅಸೋಸಿಯೇಶನ್ ಆ್ ಕರ್ನಾಟಕ ಸಹಯೋಗದಲ್ಲಿ ಈಚೆಗೆ ಆಯೋಜಿಸಿದ್ದ 18ನೇ ರಾಷ್ಟ್ರಮಟ್ಟದ ಜೂನಿಯರ್ ಡಾಡ್ಜ್ ಬಾಲ್ ಪಂದ್ಯಾವಳಿಯಲ್ಲಿ ಕರ್ನಾಟಕ ಪುರುಷರ ತಂಡ ಪ್ರಥಮ ಸ್ಥಾನ ಪಡೆದಿದೆ.
ಪುರುಷ ಮತ್ತು ಮಹಿಳೆಯರನ್ನು ಒಳಗೊಂಡ ಮಿಶ್ರ ತಂಡದಲ್ಲೂ ಕರ್ನಾಟಕ ಪ್ರಥಮ ಸ್ಥಾನ, ಕರ್ನಾಟಕ ಮಹಿಳಾ ತಂಡ ಮೂರನೇ ಸ್ಥಾನ ಪಡೆದಿವೆ. ಟೂರ್ನಿಯಲ್ಲಿ 22 ರಾಜ್ಯಗಳ 23 ತಂಡಗಳು ಭಾಗವಹಿಸಿದ್ದು, ೈನಲ್ ಪಂದ್ಯ ಮಹಾರಾಷ್ಟ್ರ ಮತ್ತು ಕರ್ನಾಟಕ ತಂಡಗಳ ಮಧ್ಯೆ ನಡೆಯಿತು.
ಡಾಡ್ಜ್ ಬಾಲ್ ೆಡರೇಶನ್ ಪ್ರಧಾನ ಕಾರ್ಯದರ್ಶಿ ಪಿ.ಎಸ್.ಬ್ರಾರ, ಧಾರವಾಡ ಕಮಿಷನರ್ ಕಚೇರಿ ವಿಷ್ಣು ಹೆಬ್ಬಾರ, ಬೆಳಗಾವಿ ಡಿಪಿಒ ಎ.ಬಿ.ಜುನೇದ್ ಪಟೇಲ, ಸಂಸ್ಥೆ ಮಾರ್ಗದರ್ಶಕ ಅಡಿವೆಪ್ಪ ಬೂದಿಗೊಪ್ಪ, ಧಾರವಾಡ ವಿಭಾಗದ ನಿವೃತ್ತ ಆಯುಕ್ತ ಗಜಾನನ ಮನ್ನಿಕೇರಿ, ಪ್ರಾಚಾರ್ಯೆ ಲೀಲಾವತಿ ಹಿರೇಮಠ, ಕರ್ನಾಟಕ ತಂಡದ ಕೋಚ್ ತೇಜಸ್ ಎಸ್., ಆಡಳಿತಾಧಿಕಾರಿ ಬಸವರಾಜ ಅಮ್ಮಣಗಿ ಇತರರಿದ್ದರು.