ಬೆಳಗಾವಿಯ ಆರ್.ಎಲ್.ಕಾನೂನು ಮಹಾವಿದ್ಯಾಲಯದಲ್ಲಿ ಕನ್ನಡ ಸಂಘವನ್ನು ಡಾ.ನಿರ್ಮಲಾ ಬಟ್ಟಲ ಉದ್ಘಾಟಿಸಿದರು. ಚೇತನಕುಮಾರ, ಡಾ.ಎ.ಎಚ್.ಹವಾಲ್ದಾರ ಇತರರಿದ್ದರು. 
ಬೆಳಗಾವಿ

ಕನ್ನಡ ಭಾಷೆ ಅಸ್ಮಿತೆಯ ಪ್ರತೀಕ

ಬೆಳಗಾವಿ: ಪ್ರಪಂಚದ ಅತ್ಯಂತ ಪುರಾತನ ಭಾಷೆಗಳಲ್ಲಿ ಒಂದಾಗಿರುವ ಕನ್ನಡ ಕೇವಲ ಒಂದು ಭಾಷೆಯಲ್ಲ, ಕರುನಾಡಿನ ಬಹು ಪ್ರಾಚೀನ ಸಂಸ್ಕೃತಿ, ಪದ್ಧತಿ ಮತ್ತು ಸಂಪ್ರದಾಯ ಪ್ರತಿನಿಧಿಸುತ್ತದೆ. ಕರುನಾಡಿನ ಅಸ್ಮಿತೆಯ ಪ್ರತೀಕವಾಗಿದೆ ಎಂದು ಮಹಾಂತೇಶ ನಗರ ರಹವಾಸಿಗಳ ಸಂಘದ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ.ನಿರ್ಮಲಾ ಬಟ್ಟಲ ಹೇಳಿದರು.
ನಗರದ ಕೆಎಲ್ಎಸ್ ರಾಜಾ ಲಖಮಗೌಡ ಕಾನೂನು ಮಹಾವಿದ್ಯಾಲಯದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಕಾಲೇಜಿನ ಕನ್ನಡ ಬಳಗ ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ಭಾಷೆಯ ಇತಿಹಾಸವನ್ನು ಶತಮಾನಗಳಿಂದ ನೋಡಬಹುದು. ಹಲ್ಮಿಡಿ ಶಾಸನದಿಂದ ಭಾಷೆ ಶಾಸನ ರೂಪದಲ್ಲಿ ಇರುವುದು ಗಮನಿಸಬಹುದು. ಬಹಳ ಶ್ರೀಮಂತ ಭಾಷೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಕನ್ನಡವನ್ನು ಭವಿಷ್ಯದ ಸವಾಲುಗಳ ವಿರುದ್ಧ ಅತ್ಯಂತ ಪ್ರೀತಿ ಹಾಗೂ ಅಭಿಮಾನದಿಂದ ಬೆಳೆಸುವಲ್ಲಿ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದರು.
ಪ್ರಾಚಾರ್ಯ ಡಾ.ಎ.ಎಚ್.ಹವಾಲ್ದಾರ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಬಳಗದ ಅಧ್ಯಕ್ಷ ಪ್ರೊ.ಚೇತನಕುಮಾರ ಟಿ.ಎಂ., ವಿದ್ಯಾರ್ಥಿ ಸಂಯೋಜಕ ಯಲ್ಲಪ್ಪ ಬಾಮನಹಳ್ಳಿ, ಸಂಜನಾ ಇಟಗಿ, ಸ್ನೇಹಾ ಮೇತ್ರಿ, ಸಿದ್ದಲಿಂಗ ಕವಟಕರ, ಅಜಯ ಬೊಮ್ಮನ್ನವರ, ಸುಚಿತ್ರಾ ಶಿಂಗೆ, ವೃಷಭ ಪಾಟೀಲ, ಚರಿತ್ರಮತಿ ಪಾಟೀಲ, ಅಕ್ಷಯ ವಾರದ, ಪ್ರವೀಣ ಕಾಂಬಳೆ, ಶಶಿಧರ ಸಸಾಲಟ್ಟಿ, ಜಯಶ್ರೀ ಕಾಂಬಳೆ, ಸ್ಪೂರ್ತಿ ಪಾಟೀಲ, ಗಾಯತ್ರಿ ಬಸ್ತವಾಡಿ, ಮಹಾಲಕ್ಷ್ಮೀ, ಕಾವೇರಿ ಬಡಿಗೇರ ಇತರರಿದ್ದರು.