ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ಕರೋಕೆ ಕನ್ನಡ ಹಾಡುಗಳು-ಭಾವಗೀತೆಗಳು ಎಂಬ ವಿಶೇಷ ಕಾರ್ಯಕ್ರಮ ಜರುಗಿತು. ಎಂ.ಬಿ.ಹೊಸಳ್ಳಿ, ಎಂ.ಎಸ್.ಇಂಚಲ, ಪ್ರೊ.ಜಿ.ಕೆ.ಕುಲರಣ್ಣ, ಚಂದ್ರಶೇಖರ ಹಿರೇಮಠ, ಚಿದಂಬರ ಮುನವಳ್ಳಿ ಇತರರಿದ್ದರು. 
ಬೆಳಗಾವಿ

ಅತ್ಯಂತ ಶ್ರೀಮಂತ ಭಾಷೆ ಕನ್ನಡ

ಧರ್ಮರಾಜ ರಾಮನಗೌಡ ಪಾಟೀಲ
ಬೆಳಗಾವಿ: ಮನುಷ್ಯನ ಎಲ್ಲ ಭಾವಗಳನ್ನು ಅರಳಿಸುವಂತಹ ಶಕ್ತಿ ಒಂದು ಭಾಷೆಯಲ್ಲಿ ಇದ್ದಾಗ ಆ ಭಾಷೆಯನ್ನು ಶ್ರೀಮಂತ ಭಾಷೆಯೆಂದು ಕರೆಯುತ್ತಾರೆ. ಈ ಎಲ್ಲ ಗುಣ ಹೊಂದಿರುವ ಕನ್ನಡ ಜಗತ್ತಿನ ಶ್ರೀಮಂತ ಭಾಷೆಗಳಲ್ಲಿ ಮೂರನೇ ಸ್ಥಾನದಲ್ಲಿ ನಿಲ್ಲುತ್ತದೆ ಎಂದು ವಾಗ್ಮಿ ಎಂ.ಬಿ.ಹೊಸಳ್ಳಿ ಅಭಿಪ್ರಾಯಪಟ್ಟರು.
ನಗರದ ಚನ್ನಮ್ಮ ವೃತ್ತದಲ್ಲಿರುವ ಕನ್ನಡ ಸಾಹಿತ್ಯ ಭವನದಲ್ಲಿ ಈಚೆಗೆ ನಗರದ ಹಾಸ್ಯಕೂಟ ಮತ್ತು ಕನ್ನಡ ಸಾಹಿತ್ಯ ಭವನ ವಿಶ್ವಸ್ಥ ಮಂಡಳಿ ಸಂಯುಕ್ತ ಆಶ್ರಯದಲ್ಲಿ ರಾಜ್ಯೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ‘ಕರೋಕೆ ಕನ್ನಡ ಹಾಡುಗಳು-ಭಾವಗೀತೆಗಳು’ ಎಂಬ ವಿಶೇಷ ಕಾರ್ಯಕ್ರಮದಲ್ಲಿ ಮಾತನಾಡಿ, ಕನ್ನಡ ನಾಡಿನಲ್ಲಿರುವ ವೈವಿಧ್ಯತೆ ಬೇರೆಲ್ಲಿಯೂ ನೋಡಲು ಸಿಗದು. ಇದು ಕನ್ನಡ ನಾಡಿನ ಮಣ್ಣಿನ ವೈಶಿಷ್ಟ್ಯ ಎಂದು ವರ್ಣಿಸಿದರು.
ಸ್ವರಾಂಜಲಿ ಕರೋಕೆ ಸಂಸ್ಥೆಯ ಸಂಸ್ಥಾಪಕರಾದ ಚಂದ್ರಶೇಖರ ಹಿರೇಮಠ ಮತ್ತು ಚಂದ್ರಶೇಖರ ಅಪ್ಪಣ್ಣವರ, ಸುಜಾತಾ, ಜಿ.ಎಸ್.ಸೋನಾರ, ಪ್ರೇಮಾ ಎಸ್., ವೃಂದಾ ಮುತಾಲಿಕ ದೇಸಾಯಿ ಅವರು ಕನ್ನಡ ನಾಡುನುಡಿ ಕುರಿತ ಚಲನಚಿತ್ರಗೀತೆ ಹಾಗೂ ಗುಂಡೇನಟ್ಟಿ ಮಧುಕರ ಭಾವಗೀತೆಗಳನ್ನು ಹಾಡಿದರು.
ಹಿರಿಯ ಕವಿ ಪ್ರೊ.ಎಂ.ಎಸ್.ಇಂಚಲ, ನಗೆ ಮಾತುಗಾರ ಪ್ರೊ.ಜಿ.ಕೆ.ಕುಲರಣ್ಣ, ಚಿದಂಬರ ಮುನವಳ್ಳಿ, ನವಿಲೂರು ತಾನಾಜಿ ಇತರರಿದ್ದರು.