ಜಿಲ್ಲಾಮಟ್ಟಕ್ಕೆ ಆಯ್ಕೆಯಾದ ಬೈಲಹೊಂಗಲ ಕಲ್ಪವೃ ಪಿಯು ಕಾಲೇಜಿನ ವಿದ್ಯಾರ್ಥಿಗಳೊಂದಿಗೆ ಪ್ರಾಚಾರ್ಯರಾದ ಹಣಮೇಶ ದುಡ್ಯಾಳ, ಪುನೀತ ಎಂ., ಯಶೋಧಾ ಕಂಬಾರ ಇತರರಿದ್ದರು. 
ಬೆಳಗಾವಿ

ಕಲ್ಪವೃಕ್ಷ ಕಾಲೇಜ್​ ವಿದ್ಯಾರ್ಥಿಗಳು ಜಿಲ್ಲಾಮಟ್ಟಕ್ಕೆ

ಬೈಲಹೊಂಗಲ: ಶ್ರೀ ಎ.ವಿ.ಢಮ್ಮಣಗಿ ವಿಜನ್​ ೌಂಡೇಷನ್​ದ ಕಲ್ಪವೃಕ್ಷ ಪಿಯು ಕಾಲೇಜ್​ ವಿದ್ಯಾರ್ಥಿಗಳು ರಾಜ್ಯ ವಿದ್ಯಾರ್ಥಿ ೇಮಾಭಿವೃದ್ಧಿ ನಿಧಿ ಹಾಗೂ ಶಾಲಾ ಶಿಣ ಇಲಾಖೆ (ಪದವಿಪೂರ್ವ) ಇವರ ಸಂಯುಕ್ತಾಶ್ರಯದಲ್ಲಿ ನೇಸರಗಿ ಸರ್ಕಾರಿ ಪಿಯು ಕಾಲೇಜನಲ್ಲಿ ಈಚೆಗೆ ನಡೆದ ತಾಲೂಕುಮಟ್ಟದ ಸಾಂಸತಿಕ ಚಟುವಟಿಕೆಗಳಲ್ಲಿ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ರಸಪ್ರಶ್ನೆ ಸ್ಪರ್ಧೆಯಲ್ಲಿ ಹರ್ಷಿತ ನ್ಯಾಮಗೌಡರ ಮತ್ತು ಪ್ರಜ್ವಲ್​ಕುಮಾರ ಪ್ರಥಮ, ಇಂಗ್ಲಿಷ್​ ಚರ್ಚಾ ಸ್ಪರ್ಧೆ ತೃಪ್ತಿ ಪಾಟೀಲ ಪ್ರಥಮ, ವಿಜ್ಞಾನ ಮಾದರಿ ಸ್ಪರ್ಧೆಯಲ್ಲಿ ಶ್ರೇಯಲ್​ ದಳವಾಯಿ ಮತ್ತು ಸಿಂಚನಾ ಶಿಂಗನ್ನವರ ಪ್ರಥಮ ಸ್ಥಾನಗಳಿಸಿ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇಂಗ್ಲಿಷ್​ ಪ್ರಬಂಧದಲ್ಲಿ ರೋಹಿತ ಬೆಲ್ಲದ ದ್ವೀತಿಯ, ಕನ್ನಡ ಪ್ರಬಂಧ ಸ್ಪರ್ಧೆಯಲ್ಲಿ ಕಾರ್ತಿಕ ಬೆಳಗಾವಿ ತೃತೀಯ ಸ್ಥಾನ ಗಳಿಸಿದ್ದಾರೆ. ಸಂಸ್ಥೆಯ ಅಧ್ಯಕ್ಷೆ ಮಂಗಳಾ ಢಮ್ಮಣಗಿ, ಪ್ರಾಚಾರ್ಯರಾದ ಹಣಮೇಶ ದುಡ್ಯಾಳ, ಪುನೀತ ಎಂ., ಆಡಳಿತಾಧಿಕಾರಿ ರಾಜಶೇಖರ ಕೋತಂಬ್ರಿ ಅಭಿನಂದಿಸಿದ್ದಾರೆ.