ಬೆಳಗಾವಿ ನಗರದ ಜಿಪಂ ಸಭಾಂಗಣದಲ್ಲಿ ಸೋಮವಾರ ಸಿಇಒ ರಾಹುಲ ಶಿಂಧೆ ಸಾಕ್ಷರತಾ ಸಪ್ತಾಹದ ಪ್ರಚಾರ ಪತ್ರ ಬಿಡುಗಡೆಗೊಳಿಸಿದರು. ರವಿ ಬಂಗಾರೆಪ್ಪನವರ, ಪ್ರಶಾಂತ ಘೋಡಕೆ ಇತರರಿದ್ದರು.
ಬೆಳಗಾವಿ:ಸಾರ್ವಜನಿಕರಲ್ಲಿ ಬ್ಯಾಂಕಿಂಗ್ ವ್ಯವಹಾರ ಹಾಗೂ ಆರ್ಥಿಕ ಶಿಸ್ತಿನ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಫೆ. 9 ರಿಂದ 13 ರವರೆಗೆ ಜಿಲ್ಲೆಯಾದ್ಯಂತ ಐದು ದಿನಗಳವರೆಗೆ ಆರ್ಥಿಕ ಸಾಕ್ಷರತಾ ಸಪ್ತಾಹ ಕಾರ್ಯಕ್ರಮಕ್ಕೆ ಎಲ್ಲರೂ ಕೈ ಜೋಡಿಸಬೇಕು ಎಂದು ಜಿಪಂ ಸಿಇಒ ರಾಹುಲ್ ಶಿಂಧೆ ತಿಳಿಸಿದರು.
ನಗರದ ಜಿಪಂ ಸಭಾಂಗಣದಲ್ಲಿ ಸೋಮವಾರ ಸಾಕ್ಷರತಾ ಸಪ್ತಾಹದ ಪ್ರಚಾರ ಪತ್ರ (ಪೋಸ್ಟರ್) ಬಿಡುಗಡೆಗೊಳಿಸಿ ಮಾತನಾಡಿದ ಅವರು,ಹಣಕಾಸು ಸೇವೆಗಳ ಇಲಾಖೆ, ಭಾರತೀಯ ರಿಸರ್ವ್ ಬ್ಯಾಂಕ್ ಹಾಗೂ ಜಿಲ್ಲಾ ಪಂಚಾಯತಿಯ ಸಹಯೋಗದಲ್ಲಿ ಬೆಳಗಾವಿ ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ಈ ಕಾರ್ಯಕ್ರಮವನ್ನು ಆಯೋಜಿಸಿದ್ದು, ಜಿಲ್ಲೆಯಾದ್ಯಂತ 779 ಬ್ಯಾಂಕ್ ಶಾಖೆಗಳಲ್ಲಿ ಹಾಗೂ 500ಗ್ರಾಪಂ ವ್ಯಾಪ್ತಿಯಲ್ಲಿ ಆರ್ಥಿಕ ಸಾಕ್ಷರತಾ ಸಪ್ತಾಹದ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಕೆವೈಸಿ (ನೋ ಯುವರ್ ಕಸ್ಟಮರ್) ನಿಮ್ಮ ಗ್ರಾಹಕರನ್ನು ತಿಳಿಯಿರಿ ಎನ್ನುವುದು ಈ ಆರ್ಥಿಕ ಸಪ್ತಾಹದ ವಿಷಯವಾಗಿದೆ. ಅಧಿಕೃತವಾಗಿ ಮಾನ್ಯವಾದ ದಾಖಲಾತಿಗಳ ಬಗ್ಗೆ ವಿಚಾರಗಳು, ಮರು ಕೆವೈಸಿ, ವಿಡಿಯೋ ಕೆವೈಸಿ, ಸೆಂಟ್ರಲ್ ಕೆವೈಸಿ, ಆಧಾರ್ ಓಟಿಪಿ ಹೀಗೆ ಹಲವಾರು ಬ್ಯಾಂಕಿನ ವಿಷಯಗಳ ಬಗ್ಗೆ ಸಪ್ತಾಹದಲ್ಲಿ ಸಾರ್ವಜನಿಕರಿಗೆ ತಿಳಿಸಿಕೊಡಲಾಗುವುದು. ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹಣಕಾಸು ಸಾಕ್ಷರತಾ ಕೇಂದ್ರ ಹಾಗೂ ಸಿ.ಎಫ್.ಎಲ್ಸಿ.ಗಳು, ಬ್ಯಾಂಕಿನ ಶಾಖೆ, ಬ್ಯಾಂಕಿನ ವ್ಯವಹಾರ ಪ್ರತಿನಿಧಿ (ಬಿ.ಸಿ.) ಶಿಬಿರ ಏರ್ಪಡಿಸುವ ಮೂಲಕ ಸಾರ್ವಜನಿಕರಿಗೆ ಮಾಹಿತಿಯನ್ನು ನೀಡಲಿದ್ದಾರೆ. ಎಲ್ಲ ಬ್ಯಾಂಕುಗಳು ಗ್ರಾಹಕರು ಹಾಗೂ ಸಾರ್ವಜನಿಕರು ಸಪ್ತಾಹದ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಜಿಪಂ ಯೋಜನಾ ನಿರ್ದೇಶಕ ರವಿ ಬಂಗಾರೆಪ್ಪನವರ, ಜಿಲ್ಲಾ ಮಾರ್ಗದರ್ಶಿ ಬ್ಯಾಂಕ ಮುಖ್ಯ ಪ್ರಬಂಧಕ ಪ್ರಶಾಂತ ಘೋಡಕೆ, ಎನ್‌ಐಸಿ(ಐಟಿ) ಬೆಳಗಾವಿ ನಿರ್ದೇಶಕ ಶ್ರೀಶ ಕಡಗದಕೈ ಇತರರಿದ್ದರು.
9ಮಂಜು4- ಬೆಳಗಾವಿ ನಗರದ ಜಿಪಂ ಸಭಾಂಗಣದಲ್ಲಿ ಸೋಮವಾರ ಸಿಇಒ ರಾಹುಲ ಶಿಂಧೆ ಸಾಕ್ಷರತಾ ಸಪ್ತಾಹದ ಪ್ರಚಾರ ಪತ್ರ ಬಿಡುಗಡೆಗೊಳಿಸಿದರು. ರವಿ ಬಂಗಾರೆಪ್ಪನವರ, ಪ್ರಶಾಂತ ಘೋಡಕೆ ಇತರರಿದ್ದರು.