ಅಥಣಿ ಪಟ್ಟಣದ ಜೆಎ ಶಿಕ್ಷಣ ಸಂಸ್ಥೆ ಪದಾಧಿಕಾರಿಗಳಾದ ಡಾ.ರಾಮ ಕುಲಕರ್ಣಿ, ಸಂದೀಪ ಸಂಗೊರಾಮ, ಆನಂದ ಟೊಣಪಿ, ಆರ್.ಎ.ಕುಲಕರ್ಣಿ, ಎಲ್.ವಿ.ಕುಲಕರ್ಣಿ, ಹಿಮಾಂಶು ಭಾತೆ, ಎಸ್.ವಿ.ಜೋಶಿ ಇತರರಿದ್ದರು.
ಅಥಣಿ: ಪಟ್ಟಣದ ಜೆಇ ಶಿಕ್ಷಣ ಸಂಸ್ಥೆಗೆ ಈಚೆಗೆ ಪದಾಧಿಕಾರಿಗಳ ಆಯ್ಕೆ ನಡೆಯಿತು. ಸತತ ಮೂರನೇ ಬಾರಿಗೆ ಕಾರ್ಯಾಧ್ಯಕ್ಷರಾಗಿ ಡಾ.ರಾಮ ಕುಲಕರ್ಣಿ, ಉಪ ಕಾರ್ಯಾಧ್ಯಕ್ಷರಾಗಿ ಸಂದೀಪ ಸಂಗೋರಾಮ, ಕಾರ್ಯದರ್ಶಿಯಾಗಿ ಆರ್.ಎ.ಕುಲಕರ್ಣಿ, ಸಹಕಾರ್ಯದರ್ಶಿಯಾಗಿ ಆನಂದ ಟೊಣಪಿ, ನಿರ್ದೇಶಕರಾಗಿ ಡಾ.ಅವಿನಾಶ ನಾಯಿಕ, ಹಿಮಾಂಶು ಭಾತೆ, ಎಲ್.ವಿ.ಕುಲಕರ್ಣಿ, ಡಾ.ಅಮೃತ ಕುಲಕರ್ಣಿ, ಅಥರ್ವ ದೇಶಪಾಂಡೆ ಆಯ್ಕೆಯಾದರು.
ಡಾ.ರಾಮ ಕುಲಕರ್ಣಿ ಮಾತನಾಡಿ, ಜೆಇ ಶಿಕ್ಷಣ ಸಂಸ್ಥೆಯಲ್ಲಿ ಮುಂಬರುವ ದಿನಗಳಲ್ಲಿ ಸಿಬಿಎಸ್‌ಸಿ ಶಾಲೆ, ಕಾನೂನು ಮಹಾವಿದ್ಯಾಲಯ ಮತ್ತು ಬಿ.ಇಡಿ ಪದವಿ ಕೋರ್ಸ್ ಆರಂಭಿಸುವ ಚಿಂತನೆ ಇದೆ. ಕಡಿಮೆ ಶುಲ್ಕದಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ ಎಂದರು.
ಉಪ ಕಾರ್ಯಾಧ್ಯಕ್ಷ ಸಂದೀಪ ಸಂಗೋರಾಮ ಮಾತನಾಡಿ, ವಿದ್ಯಾರ್ಥಿಗಳಿಗೆ ಉಚಿತವಾಗಿ ಸಿಇಟಿ, ನೀಟ್ ತರಬೇತಿ ನೀಡುತ್ತಿದ್ದೇವೆ. ಹೊಸ ಆ್ಯಪ್ ಮೂಲಕ ವಿದ್ಯಾರ್ಥಿಗಳಿಗೆ ಹೆಚ್ಚಿನ ಜ್ಞಾನ ನೀಡುವುದು ಸಂಸ್ಥೆಯ ಗುರಿಯಾಗಿದೆ ಎಂದರು.
ಸಹ ಕಾರ್ಯದರ್ಶಿ ಆನಂದ ಟೊಣಪಿ ಮಾತನಾಡಿ, ಸಂಸ್ಥೆಯಲ್ಲಿ ಎಲ್‌ಕೆಜಿಯಿಂದ ಪಿಜಿವರೆಗೆ ಸುಮಾರು ೬ ಸಾವಿರಕ್ಕೂ ಅಽಕ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ ಎಂದು ತಿಳಿಸಿದರು. ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು.
ಎಸ್.ವಿ.ಜೋಶಿ, ಲಕ್ಷ್ಮಿಕಾಂತ ಕುಲಕರ್ಣಿ, ರವಿ ಕುಲಕರ್ಣಿ ಇತರರಿದ್ದರು.