ಸಂಕೇಶ್ವರದಲ್ಲಿ ಜರುಗಿದ ಬಸವರಾಜ ಕಟ್ಟೀಮನಿಯವರ ಕಾದಂಬರಿ ಕುರಿತ ವಿಶೇಷ ಉಪನ್ಯಾಸದಲ್ಲಿ ಪ್ರಕಾಶ ಗಿರಿಮಲ್ಲನವರ ಮಾತನಾಡಿದರು. ಯಲ್ಲಪ್ಪ ಹಿಮ್ಮಡಿ, ಡಾ.ಡಿ.ಎಸ್​.ಕಾಂಬಳೆ, ಪ್ರೊ.ಎಸ್​.ಜಿ.ಚಿಕ್ಕನರಗುಂದ, ಡಾ.ರವೀಂದ್ರ ಕಾಂಬಳೆ ಇತರರಿದ್ದರು. 
ಬೆಳಗಾವಿ

ಸಮಾಜ ಎಚ್ಚರಿಸುವ "ಜರತಾರಿ ಜಗದ್ಗುರು'

ಬೆಳಗಾವಿ:

ಸಮಾಜದೊಳಗಿನ ಸಣ್ಣತನಗಳನ್ನು ತಮ್ಮ ಕಥೆ ಕಾದಂಬರಿಗಳಲ್ಲಿ ಒತ್ತುಕೊಟ್ಟು ಚಿತ್ರಿಸುವ ಬಸವರಾಜ ಕಟ್ಟೀಮನಿಯವರು ಸಮಾಜವನ್ನು ಎಚ್ಚರಿಸುವ ಭಾಗವಾಗಿ "ಜರತಾರಿ ಜಗದ್ಗುರು' ಕಾದಂಬರಿ ರಚಿಸಿ ಕ್ರಾಂತಿಕಾರಿ ಬದಲಾವಣೆಗೆ ಮುನ್ನುಡಿ ಬರೆದಿದ್ದಾರೆ ಎಂದು ಬಸವರಾಜ ಕಟ್ಟೀಮನಿ ಪ್ರತಿಷ್ಠಾನದ ಅಧ್ಯ ಯಲ್ಲಪ್ಪ ಹಿಮ್ಮಡಿ ಹೇಳಿದರು.

ಕಟ್ಟೀಮನಿ ಪ್ರತಿಷ್ಠಾನದ ವತಿಯಿಂದ ಸಂಕೇಶ್ವರದ ಎಸ್​.ಡಿ.ವಿ.ಎಸ್​ ಸಂದ ಎಸ್​.ಎಸ್​. ಕಲಾ ಹಾಗೂ ಟಿ.ಪಿ. ವಿಾನ ಮಹಾವಿದ್ಯಾಲಯದ ಐಕ್ಯೂಎಸಿ ಟಕ ಹಾಗೂ ಕನ್ನಡ ವಿಭಾಗದಿಂದ ಶುಕ್ರವಾರ ಏರ್ಪಡಿಸಿದ್ದ ಬಸವರಾಜ ಕಟ್ಟೀಮನಿ ರಚನೆಯ "ಜರತಾರಿ ಜಗದ್ಗುರು' ಕಾದಂಬರಿ ಕುರಿತ ವಿಶೇಷ ಉಪನ್ಯಾಸದಲ್ಲಿ ಮಾತನಾಡಿದರು.
ವಿಮರ್ಶಕ ಪ್ರಕಾಶ ಗಿರಿಮಲ್ಲನವರ ಮಾತನಾಡಿ, ಕಟ್ಟೀಮನಿಯವರ ಈ ಸಮಾಜಮುಖಿ ಕಾದಂಬರಿ ಸತ್ಯಕ್ಕೆ ಹಿಡಿದ ಕನ್ನಡಿಯಂತಿದೆ. ಸಮಾಜದಲ್ಲಿ ನಡೆಯುವ ಅನೈತಿಕ ವ್ಯವಸ್ಥೆಯನ್ನು ಜನರೆದುರಿಗೆ ತೆರೆದಿಡುವ ಪ್ರಗತಿಶೀಲ ಲೇಖಕ ಬಸವರಾಜ ಕಟ್ಟೀಮನಿ ಧಾರ್ಮಿಕ ನಂಬಿಕೆಯಲ್ಲಿ ಜಗದ್ಗುರು ಸ್ಥಾನದಲ್ಲಿರುವ ಒಬ್ಬ ವ್ಯಕ್ತಿ ತನ್ನ ದೌರ್ಬಲ್ಯದಿಂದ ಸಾಮಾಜಿಕ ಸ್ವಾಸ್ಥ$್ಯ ಹೇಗೆ ಕದಡಬಲ್ಲ ಎಂಬ ಚಾರಿತ್ರಿಕ ಟನೆ ಆಧರಿಸಿ ಬರೆದ ಕಾದಂಬರಿ ಪ್ರಗತಿಶೀಲತೆಗೆ ಮಾದರಿಯಾಗಿದೆ ಎಂದು ವಿವರಿಸಿದರು.
ಪ್ರಾಂಶುಪಾಲ ಡಾ.ಡಿ.ಎಸ್​.ಕಾಂಬಳೆ ಅಧ್ಯಕ್ಷತೆ ವಹಿಸಿದ್ದರು. ಪ್ರತಿಷ್ಠಾನದ ಸದಸ್ಯ ಪ್ರೊ.ಎಸ್​.ಜಿ.ಚಿಕ್ಕನರಗುಂದ, ಬಿಸಿಎ ಕಾಲೇಜಿನ ಪ್ರಾಂಶುಪಾಲ ಡಾ.ರವೀಂದ್ರ ಕಾಂಬಳೆ, ಐಕ್ಯೂಎಸಿ ಸಂಯೋಜಕ ಪ್ರೊ.ಎಂ.ಆರ್​.ಪಾಟೀಲ, ಡಾ.ಮಹಾನಂದ ಹಿರೇಮಠ, ಪೊ.ರುದ್ರಪ್ಪ ಬಡಿಗೇರ, ಡಾ.ಶ್ರೀಶೈಲ ಮಠಪತಿ, ಡಾ.ಸುನೀಲಕುಮಾರ, ರಾಜು ಗಸ್ತಿ, ಪ್ರಜ್ವಲ ಕಟ್ಟಿ, ರಮ್ಯಾ ಗಸ್ತಿ, ವೈಷ್ಣವಿ ಪಾಟೀಲ, ರಾಜು ಹಲಗಿ ಇತರರಿದ್ದರು.
ಪ್ರತಿಷ್ಠಾನದ ಸದಸ್ಯ ಸಂಚಾಲಕಿ ಹಮೀದಾಬೇಗಂ ದೇಸಾಯಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಲಕ್ಷಿ$್ಮ ಗಡಕರಿ ಕ್ರಾಂತಿಗೀತೆ ಹಾಡಿದರು. ಕನ್ನಡ ವಿಭಾಗದ ಮುಖ್ಯಸ್ಥೆ ಡಾ.ವಿಜಯಮಾಲಾ ನಾಗನೂರಿ ಸ್ವಾಗತಿಸಿದರು. ಪ್ರಾಧ್ಯಾಪಕ ದೇಮಣ್ಣ ಸೊಗಲದ ವಂದಿಸಿದರು. ವಚನಶ್ರೀ ಚೌಗಲಾ ನಿರ್ವಹಿಸಿದರು.