ದಕ್ಷಿಣ ಭಾರತ ಜೈನ ಸಭಾ ೧೦೪ನೇ ಅಽವೇಶನವನ್ನು ಗಣ್ಯರು ಉದ್ಘಾಟಿಸಿದರು. ಶ್ರೀಮಂತ ಶಾಹು ಮಹಾರಾಜ, ರಾಜೇಂದ್ರ ಪಾಟೀಲ, ಉತ್ತಮ ಪಾಟೀಲ, ಬಾಲಚಂದ್ರ ಪಾಟೀಲ, ರಾಹುಲ ಅವಾಡೆ ಇತರರಿದ್ದರು. 
ಬೆಳಗಾವಿ

ಮಾನವ ಕಲ್ಯಾಣಕ್ಕೆ ಜೈನ ಧರ್ಮ ಒತ್ತು

ಬೋರಗಾಂವ: ಅಹಿಂಸೆ, ಸತ್ಯ ಮತ್ತು ಮಾನವ ಕಲ್ಯಾಣದ ಸಂದೇಶ ನೀಡುವ ಜೈನ ಧರ್ಮದ ಬೋಧನೆ ಇಂದಿನ ಕಾಲದಲ್ಲಿ ಮುಖ್ಯವಾಗಿವೆ ಎಂದು ಯುವ ನಾಯಕ ಉತ್ತಮ ಪಾಟೀಲ ಹೇಳಿದರು.

ಕೊಲ್ಲಾಪುರ ನಗರದಲ್ಲಿ ಭಾನುವಾರ ದಕ್ಷಿಣ ಭಾರತ ಜೈನಸಭೆ ಆಯೋಜಿಸಿದ್ದ ೧೦೪ನೇ ಅಽವೇಶನದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಜೈನ ಸಮುದಾಯ ಕೇವಲ ಧಾರ್ಮಿಕ ಕ್ಷೇತ್ರಕ್ಕೆ ಸೀಮಿತವಾಗದೆ, ಶಿಕ್ಷಣ ಸಂಸ್ಥೆ, ವಸತಿ ನಿಲಯ, ಆರೋಗ್ಯ ಸೇವೆ, ಕೈಗಾರಿಕೆ, ವ್ಯವಹಾರ ಮತ್ತು ವಿವಿಧ ಸಾಮಾಜಿಕ ಉಪಕ್ರಮಗಳ ಮೂಲಕ ಸಮಾಜದ ಪ್ರಗತಿಯಲ್ಲಿ ಪ್ರಮುಖ ಪಾತ್ರವಹಿಸಿದೆ ಎಂದರು.
ಕೊಲ್ಲಾಪುರದ ಉಸ್ತುವಾರಿ ಸಚಿವ ಪ್ರಕಾಶ ಅಬಿಟಕರ, ಸಚಿವ ಹಸನ್ ಮುಶ್ರಫ್, ಸಂಸದ ಶ್ರೀಮಂತ ಶಾಹು ಮಹಾರಾಜ, ಶಾಸಕರಾದ ಸತೇಜ ಪಾಟೀಲ, ರಾಜೇಂದ್ರ ಪಾಟೀಲ, ರಾಹುಲ ಅವಾಡೆ, ಪ್ರಕಾಶ ಅವಾಡೆ, ಉದ್ಯಮಿ ಅಭಿನಂದನ ಪಾಟೀಲ, ಜೈನ ಸಭಾಧ್ಯಕ್ಷ ಬಾಲಚಂದ್ರ ಪಾಟೀಲ, ಮಾಜಿ ಸಚಿವ ವೀರಕುಮಾರ ಪಾಟೀಲ, ಸಮಿತ ಕದಮ, ರವೀಂದ್ರ ಮಾನಗವೆ, ರಾಜೇಶ ಲಾಟ್ಕರ, ನಾಂದಣಿ ಮಠದ ಸ್ವಸ್ತಿಶ್ರೀ ಲಕ್ಷ್ಮಿಸೇನ ಭಟ್ಟಾರಕ ಸ್ವಾಮೀಜಿ, ಕೊಲ್ಲಾಪುರ ಜಿನಸೇನ ಭಟ್ಟಾರಕ ಸ್ವಾಮೀಜಿ, ರಾವಸಾಹೇಬ ಪಾಟೀಲ, ಸಂಜಯ ಶೇಟೆ, ಮೀನಾಕ್ಷಿ ಪಾಟೀಲ, ಅನಿಲ ಬಾಗನೆ, ವಿನಯಶ್ರೀ ಪಾಟೀಲ, ಬಾಳಾಸಾಹೇಬ ಪಾಟೀಲ, ಶಶಿಕಾಂತ ರಾಜೋಬ, ಅಜಿತ ಪಾಟೀಲ ಇತರರಿದ್ದರು.