ಅಲಖನೂರ ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘಕ್ಕೆ ಅಧ್ಯಕ್ಷರಾಗಿ ಇಟ್ಟಪ್ಪ ಹಟ್ಟಿಮನಿ, ಉಪಾಧ್ಯಕ್ಷರಾಗಿ ರಾಜು ಯಲ್ಲಟ್ಟಿ ಹಾಗೂ ಆಡಳಿತ ಮಂಡಳಿ ಸದಸ್ಯರನ್ನು ಸನ್ಮಾನಿಸಲಾಯಿತು. 
ಬೆಳಗಾವಿ

ಇಟ್ಟಪ್ಪ ಅಧ್ಯಕ್ಷ, ರಾಜು ಉಪಾಧ್ಯಕ್ಷ

ಕುಡಚಿ: ಸಮೀಪದ ಅಲಖನೂರ ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘಕ್ಕೆ ಅಧ್ಯಕ್ಷರಾಗಿ ಇಟ್ಟಪ್ಪ ಹಟ್ಟಿಮನಿ, ಉಪಾಧ್ಯಕ್ಷರಾಗಿ ರಾಜು ಯಲ್ಲಟ್ಟಿ ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಶಾಂತೇಶ ಕಾಂಬಳೆ ತಿಳಿಸಿದ್ದಾರೆ.
ಅಲಖನೂರ ಗ್ರಾಮದ ವಿವಿಧೋದ್ದೇಶ ಗ್ರಾಮೀಣ ಕೃಷಿ ಸಹಕಾರ ಸಂಘದ ಕಾರ್ಯಾಲಯದಲ್ಲಿ ಮಂಗಳವಾರ ನಡೆದ ಚುನಾವಣೆಯಲ್ಲಿ ತಲಾ ಒಂದೊಂದೇ ನಾಮಪತ್ರ ಸಲ್ಲಿಕೆಯಾದ ಹಿನ್ನೆಲೆಯಲ್ಲಿ ಅವಿರೋಧ ಆಯ್ಕೆ ನಡೆಯಿತು.
ಆಡಳಿತ ಮಂಡಳಿ ಸದಸ್ಯರಾದ ವಿಠ್ಠಲ ಚೌಗಲಾ, ರಾಮಪ್ಪ ಚೌಗಲಾ, ಭೀಮಪ್ಪ ಅವರಖೋಡ, ಮಾಯಪ್ಪ ಪೂಜಾರಿ, ಭೀರಪ್ಪ ಚೌಗಲಾ, ಸದಾಶಿವ ಬಾನಿ, ಗಂಗವ್ವ ಚೆಲ್ಲಿಕೇರಿ, ಸುಶೀಲಾ ಹಟ್ಟಿಮನಿ, ರಾಜವ್ವ ಮಾಂಗ, ಕಾಶಿನಾಥ ಪಾಟೀಲ, ಸಂತೋಷ ನಿವರಗಿ ಇತರರಿದ್ದರು.