ಮದಿಹಳ್ಳಿ ಗ್ರಾಮದ ದತ್ತವಾಡ ಮಠದಲ್ಲಿ ಹಮ್ಮಿಕೊಂಡಿದ್ದ ಕಾನೂನು ನಿತ್ಯೋತ್ಸವ ವಿಚಾರ ವಿನಿಮಯ ಮಾಲಿಕೆ ಕಾರ್ಯಕ್ರಮವನ್ನು ಆದಿತ್ಯ ಕಲಾಲ ಉದ್ಘಾಟಿಸಿದರು. ಕೆ.ಬಿ.ಕುರಬೇಟ, ಬಿ.ಎಂ.ಜಿನರಾಳಿ, ಅನಿಲ ಕರೋಶಿ ಇತರರಿದ್ದರು.
ಹುಕ್ಕೇರಿ: ಹಿರಿಯ ನಾಗರಿಕರಿಗಾಗಿ ಪ್ರತ್ಯೇಕ ನ್ಯಾಯಾಧೀಕರಣ ಸ್ಥಾಪನೆಯಾಗಿದ್ದು, ಯಾವುದೇ ಶುಲ್ಕವಿಲ್ಲದೆ ಉಚಿತ ಕಾನೂನು ಸಹಾಯ ನೀಡಲಾಗುತ್ತದೆ. ಅವಶ್ಯವಿರುವವರು ಪ್ರಯೋಜನ ಪಡೆಯಬೇಕು ಎಂದು ಸಿವಿಲ್ ನ್ಯಾಯಾಧೀಶ ಆದಿತ್ಯ ಕಲಾಲ ಹೇಳಿದರು.
ತಾಲೂಕಿನ ಮದಿಹಳ್ಳಿ ಗ್ರಾಮದ ದತ್ತವಾಡ ಮಠದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಮತ್ತು ತಾಲೂಕಾಡಳಿತದ ಆಶ್ರಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾನೂನು ನಿತ್ಯೋತ್ಸವ ವಿಚಾರ ವಿನಿಮಯ ಮಾಲಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, 2007ರಲ್ಲಿ ಹಿರಿಯ ನಾಗರಿಕರ ಪಾಲನೆ ಪೋಷಣೆ ಕಾಯ್ದೆ ಜಾರಿಗೆ ಬಂದಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಹಿರಿಯ ನಾಗರಿಕರಿಗಾಗಿ ವಿಶೇಷ ವ್ಯವಸ್ಥೆ ಮೂಲಕ ಉಪಚಾರ ನೀಡಬೇಕು. ಪೊಲೀಸ್ ಇಲಾಖೆಯೂ ತನ್ನ ವ್ಯಾಪ್ತಿಯಲ್ಲಿರುವ ಹಿರಿಯ ನಾಗರಿಕರ ಪಟ್ಟಿ ತಯಾರಿಸಿ ತಿಂಗಳಿಗೊಮ್ಮೆ ಮನೆಗೆ ಭೇಟಿ ನೀಡಿ ಯೋಗಕ್ಷೇಮ ವಿಚಾರಿಸಬೇಕು ಎಂದರು.
ವಕೀಲರಾದ ಎಸ್.ವೈ.ಏಗನ್ನವರ, ಐ.ಪಿ.ಪಾಟೀಲ ಹಿರಿಯ ನಾಗರಿಕರ ನ್ಯಾಯಮಂಡಳಿ ಹಾಗೂ ಮಕ್ಕಳ ಹಕ್ಕುಗಳ ಕುರಿತು ಉಪನ್ಯಾಸ ನೀಡಿದರು. ವಕೀಲರ ಸಂಘದ ಅಧ್ಯಕ್ಷ ಕೆ.ಬಿ.ಕುರಬೇಟ, ಉಪಾಧ್ಯಕ್ಷ ಬಿ.ಎಂ.ಜಿನರಾಳಿ, ಅಪರ ಸರ್ಕಾರಿ ವಕೀಲ ಅನಿಲ ಕರೋಶಿ, ಸಲೀಂ ಶೇಖ್, ಎ.ಬಿ.ತೊದಲ, ಸಾಗರ ಅಕ್ಕತಂಗೇರಹಾಳ, ಸಿಪಿಐ ಮಹಾಂತೇಶ ಬಸ್ಸಾಪೂರೆ ಇತರರಿದ್ದರು.