ಸತ್ತಿಗೇರಿ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ವಿಶ್ವ ಪರಿಸರ ದಿನ ಆಚರಿಸಲಾಯಿತು. ಎಂ.ವಿ.ಗುಂಡಪ್ಪಗೋಳ, ಆನಂದ ಬಡಕುಂದ್ರಿ, ಎ.ಎ.ಖಾಜಿ, ಅಮೃತ ಸಾಣಿಕೊಪ್ಪ, ನೀಹಾ ತೋರಗಲ್ಲ, ನಾಗರಾಜು ಕೆ., ಇತರರಿದ್ದರು.
ಸತ್ತಿಗೇರಿ: ನಾವು ಪರಿಸರವನ್ನು ರಕ್ಷಿಸಿದರೆ ಮಾತ್ರ ಪರಿಸರ ನಮ್ಮನ್ನು ರಕ್ಷಿಸುತ್ತದೆ ಎಂದು ತಹಸೀಲ್ದಾರ್ ಎಂ.ವಿ. ಗುಂಡಪ್ಪಗೋಳ ಅಭಿಪ್ರಾಯಪಟ್ಟರು.
ಸ್ಥಳೀಯ ಸರ್ಕಾರಿ ಪ್ರೌಢ ಶಾಲಾ ಆವರಣದಲ್ಲಿ ಶುಕ್ರವಾರ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಸಿ ನೆಟ್ಟು ಮಾತನಾಡಿ, ಜಾಗತಿಕ ತಾಪಮಾನ ಏರಿಕೆ ತಡೆಗಟ್ಟುವುದು ಮತ್ತು ಪರಿಸರ ರಕ್ಷಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ಸವದತ್ತಿ ವಲಯ ಅರಣ್ಯ ಅಧಿಕಾರಿ ನೀಹಾ ತೋರಗಲ್ಲ ಮಾತನಾಡಿ, ಆರೋಗ್ಯದ ಹಿತದೃಷ್ಟಿಯಿಂದ ಪ್ರತಿಯೊಬ್ಬರೂ ಪರಿಸರ ರಕ್ಷಣೆಗೆ ಒತ್ತು ನೀಡಬೇಕು ಎಂದರು.
ಆನಂದ ಬಡಕುಂದ್ರಿ, ಸಿಡಿಪಿಒ ಅಮೃತ ಸಾಣಿಕೊಪ್ಪ, ಬಿಇಒ ಎ.ಎ.ಖಾಜಿ, ಪಿಡಿಒ ಎ.ಬಿ.ಬಂಗಾರಿ, ಎಪಿಎಂಸಿ ಅಧ್ಯಕ್ಷ ನೀಲಕಂಠ ಸಿದ್ದಬಸನ್ನವರ, ಕೆಎಂಎಫ್ ನಿದೇರ್ಶಕ ಶಂಕರ ಇಟ್ನಾಳ, ಪ.ಪಂ.ಸದಸ್ಯ ನಿಖಿಲ ಪಾಟೀಲ, ಎಸ್‌ಡಿಎಂಸಿ ಉಪಾಧ್ಯಕ್ಷ ಬಸಯ್ಯ ಸಾಲಿಮಠ, ಪ್ರಕಾಶ ವಾಲಿ, ಉಮೇಶ ಮಾಗುಂಡನ್ನವರ, ಈರಣ್ಣ ಹೊಸಮನಿ, ತಿಮ್ಮಣ್ಣಾ ಯಡಹಳ್ಳಿ, ಮುದಕಪ್ಪ ದಳವಾಯಿ, ವಿಠ್ಠಲ ಭಾಂಗಿ, ಪ್ರಾಂಶುಪಾಲ ನಾಗರಾಜು ಕೆ., ಮಂಜುಳಾ ಲೋಕನ್ನವರ, ಎಸ್.ಬಿ.ತೋರಗಲ್ಲ, ಸಿಆರ್‌ಪಿ ಬಾಳಪ್ಪ ಸಿದ್ದಬಸನ್ನವರ, ಮಹಾಂತೇಶ ಪಟ್ಟಣಶೆಟ್ಟಿ, ಕುಬ್ರಾ ದಂತಾಳಿ, ಎಸ್.ವೈ.ಸಿದ್ದರಡ್ಡಿ, ಬಿ.ಎಸ್.ಉಪ್ಪಾರ, ವಿ.ಯು.ಇಟ್ನಾಳ, ಶ್ರೀಶೈಲ ಯರಗಣವಿ ಇತರರಿದ್ದರು.