ಅನಂತಪುರ ಗ್ರಾಮದಲ್ಲಿ ವೀರಭದ್ರೇಶ್ವರ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಧರ್ಮ ಜಾಗೃತಿ ಪ್ರವಚನ ಕಾರ್ಯಕ್ರಮದಲ್ಲಿ ಡಾ.ಮಲ್ಲಿಕಾರ್ಜುನ ವಿಶ್ವಾರಾಧ್ಯ ಸ್ವಾಮೀಜಿ ಮಾತನಾಡಿದರು. ವಿವೇಕಾನಂದ ದೇವರು ಇತರರಿದ್ದರು.
ಅಥಣಿ ಗ್ರಾಮೀಣ: ಭಾರತ ಹಿಂದೂ ಧರ್ಮ, ಶ್ರೇಷ್ಠ ಸಂಸ್ಕೃತಿ ಹೊಂದಿರುವ ರಾಷ್ಟ್ರವಾಗಿದೆ. ಹೀಗಾಗಿ ಪ್ರತಿಯೊಬ್ಬರೂ ಪರಸ್ಪರ ಗೌರವ ಭಾವನೆ ಬೆಳೆಸಿಕೊಳ್ಳಬೇಕು ಎಂದು ಜ್ಞಾನಪೀಠ ಕಾಶಿ ವಾರಣಾಸಿಯ 1008 ಜಗದ್ಗುರು ಡಾ.ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಹೇಳಿದರು.
ಅಥಣಿ ತಾಲೂಕಿನ ಅನಂತಪುರ ಗ್ರಾಮದಲ್ಲಿ ವೀರಭದ್ರೇಶ್ವರ ದೇವಸ್ಥಾನದ ಕಲಶಾರೋಹಣ ಹಾಗೂ ಲಕ್ಷ ದೀಪೋತ್ಸವ ಅಂಗವಾಗಿ ಸೋಮವಾರ ಹಮ್ಮಿಕೊಂಡಿದ್ದ ಧರ್ಮ ಜಾಗೃತಿ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿ, ದೇವಸ್ಥಾನದಲ್ಲಿ ದೇವ ಮಾನವರಿದ್ದಾಗ ಬೆಲೆ ಸಿಗುತ್ತದೆ. ಹಾಗೆ ಅಂಗದ
ಮೇಲೆ ಲಿಂಗ ಇದ್ದಾಗ ವೀರಶೈವರಿಗೆ ಬೆಲೆ. ಹಿಂದೂ ಧರ್ಮದಲ್ಲಿ ಪ್ರತಿಯೊಂದು ಆಚರಣೆಯಲ್ಲಿ ವಿಜ್ಞಾನವಿದೆ. ಅಧ್ಯಾತ್ಮದ ಜತೆ ಈಶ್ವರನ ಅಧಿಷ್ಠಾನವಿದೆ. ಪ್ರತಿಯೊಬ್ಬರೂ ಸತ್ಯ, ಅಹಿಂಸೆ, ದಯೆ ಮತ್ತು ಕರುಣೆ ಅಳವಡಿಸಿಕೊಂಡು ಧರ್ಮದ ಆಚರಣೆ ಮತ್ತು ಮೌಲ್ಯಗಳನ್ನು ಅರ್ಥೈಸಿಕೊಂಡು ನಡೆಯಬೇಕು ಎಂದರು.
ಗುಣದಾಳದ ವಿವೇಕಾನಂದ ದೇವರು ಮಾತನಾಡಿದರು. 1008 ಜಗದ್ಗುರು ಡಾ.ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರನ್ನು ನೂರಾರು ಮಹಿಳೆಯರ ಕುಂಭ ಮೆರವಣಿಗೆ ಮೂಲಕ ಬರಮಾಡಿಕೊಂಡರು.
ರುದ್ರಗೌಡ ಪಾಟೀಲ, ಮೃತ್ಯುಂಜಯ ಹಿರೇಮಠ, ಸಂಜುಗೌಡ ಪಾಟೀಲ, ಸಂಗಪ್ಪ ಜಾಬಗೌಡರ, ರೇವಣಸಿದ್ಧ ನಕಾತೆ, ಭೀಮು ದೇಶಿಂಗೆ, ಅಪ್ಪಾಸಾಬ ಕರಣಿ, ಓಂಕಾರ ಡೊಳ್ಳಿ, ಶಿವಾನಂದ ಖೋತ, ಪೀರಾಜಿ ಹಬ್ಬಗೊಂಡ, ಮಹಾದೇವ ದೇಶಿಂಗೆ, ಶಿವಾನಂದ ಪಾಟೀಲ, ರಾವಸಾಬ ಬಿರಾದಾರ, ಅಶೋಕ ಪಾಟೀಲ, ರಾಜು ಮದಭಾವಿ, ಸಂಜು ಕಾಳಗಿ, ಗುಲಾಬ್ ಮುಲ್ಲಾ, ಬಾಳಪ್ಪ ಮಾಲಗಾವಿ, ಬಸವರಾಜ ಅಥಣಿಕರ ಇತರರಿದ್ದರು.