ಅನಂತಪುರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಸಾಮೂಹಿಕ ದೀಕ್ಷಾ ಕಾರ್ಯಕ್ರಮದಲ್ಲಿ ಶ್ರೀಶೈಲ ಜಗದ್ಗುರುಗಳಿಗೆ ಮಲ್ಲಪ್ಪ ಪಡಸಲಗಿ ವಿಜಯವಾಣಿ ಪತ್ರಿಕೆ ವಿತರಿಸಿದರು. ಜಮಖಂಡಿಯ ಗೌರಿಶಂಕರ ಸ್ವಾಮೀಜಿ, ಲಕ್ಷ್ಮಿ ಕಬಾಡೆ, ಕುಸುಮಾ ಮಶಾಳೆ ಇತರರಿದ್ದರು.
ಅಥಣಿ ಗ್ರಾಮೀಣ: ವೀರಶೈವ ಲಿಂಗಾಯತ ಧರ್ಮ ಪುರಾತನ ಕಾಲದಿಂದಲೂ ಸಮಾನ ಹಕ್ಕು ನೀಡಿದೆ. ಜಾತ್ಯತೀತವಾಗಿ ಇಷ್ಟಲಿಂಗ ದೀಕ್ಷೆ ಪಡೆದು ಧರ್ಮ, ಪರಂಪರೆ ಉಳಿಸಿ, ಬೆಳೆಸುವ ಕಾರ್ಯವಾಗಬೇಕಿದೆ ಎಂದು ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರು ಹೇಳಿದರು.
ಅಥಣಿ ತಾಲೂಕಿನ ಅನಂತಪುರ ಗ್ರಾಮದಲ್ಲಿ ಧರ್ಮ ಜಾಗೃತಿ ಯಾತ್ರೆ ನಿಮಿತ್ತ ಶನಿವಾರ ಹಮ್ಮಿಕೊಂಡಿದ್ದ ಸಾಮೂಹಿಕ ಇಷ್ಟಲಿಂಗ ದೀಕ್ಷಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಾನವ ಜನ್ಮ ಸರ್ವ ಶ್ರೇಷ್ಠವಾಗಬೇಕಾದರೆ ಗುರುಗಳಿಂದ ದೀಕ್ಷೆ ಪಡೆಯಬೇಕು. ದುಶ್ಚಟಗಳಿಗೆ ಅಂಟಿಕೊಳ್ಳದೆ, ಧಾರ್ಮಿಕತೆಯಲ್ಲಿ ಜೀವನ ಸಾಗಿಸಬೇಕು. ಇಷ್ಟಲಿಂಗ ಪೂಜೆಯಿಂದ ಸಂಕಲ್ಪ ಈಡೇರುವ ಜತೆಗೆ ಮನೋಸ್ಥೈರ್ಯ ವೃದ್ಧಿಸುತ್ತದೆ. ಸಾಮಾಜಿಕ ಪ್ರಜ್ಞೆ ಜಾಗೃತಗೊಳಿಸಲು ಲಿಂಗದೀಕ್ಷೆ ಹಮ್ಮಿಕೊಳ್ಳಲಾಗಿದೆ ಎಂದರು.
ಗುಣದಾಳದ ಡಾ.ವಿವೇಕಾನಂದ ದೇವರು ಇಷ್ಟಲಿಂಗ ದೀಕ್ಷಾರ್ಥಿಗಳಿಗೆ ಪೂಜಾ ವಿಧಾನ ಮತ್ತು ದೈನಂದಿನ ಆಚರಣೆ ಬಗ್ಗೆ ಮಾರ್ಗದರ್ಶನ ನೀಡಿದರು.
೪೦೦ಕ್ಕೂ ಹೆಚ್ಚು ಭಕ್ತರಿಗೆ ಸಾಮೂಹಿಕ ಇಷ್ಟಲಿಂಗ ದೀಕ್ಷೆ ಪ್ರದಾನ ಮಾಡಲಾಯಿತು. ಸಾಮೂಹಿಕ ದೀಕ್ಷಾ ಕಾರ್ಯಕ್ರಮಕ್ಕೆ ಸಹಾಯ ಮಾಡಿದ ಭಕ್ತರನ್ನು ಶ್ರೀಶೈಲ ಶ್ರೀ ಸನ್ಮಾನಿಸಿದರು. ಜಮಖಂಡಿಯ ಗೌರಿಶಂಕರ ಸ್ವಾಮೀಜಿ, ರುದ್ರಗೌಡ ಪಾಟೀಲ, ಅಕ್ಷಯ ಹಿರೇಮಠ, ಸಂಗಪ್ಪ ಜಾಬಗೌಡರ, ಸೋಮಲಿಂಗ ಮಠಪತಿ, ರಾಹುಲ ಮಹಾಜನ, ಈರಪ್ಪ ತೆಗ್ಗಿ, ಮಲ್ಲಿಕಾರ್ಜುನ ಜತ್ತಿ, ಕುಸುಮಾ ಮಶಾಳೆ, ಮಂಗಲ ಮೇತ್ರಿ, ಮಂಗಲ ಮಾಂಗೋಜಿ, ಮಲ್ಲಯ್ಯ ಮಠಪತಿ, ಅಪ್ಪಾಸಾಹೇಬ ಕುರಣಿ, ಸಿದ್ದರಾಮಯ್ಯ ಮಠಪತಿ, ಲಕ್ಷ್ಮಿ ಕಬಾಡೆ ರಾವಸಾಹೇಬ ಬಿರಾದಾರ ಇತರರಿದ್ದರು.