ಬೆಳಗಾವಿ ತಾಲೂಕಿನ ಮಾರಿಹಾಳ ಠಾಣೆಪೊಲೀಸರ ಕಳ್ಳತನ ಆಗಿರುವ ವಾಹನ ವಶಪಡಿಸಿಕೊಂಡಿದ್ದಾರೆ.
ಕರ್ನಾಟಕ, ಮಹಾರಾಷ್ಟ್ರದ ವಿವಿಧ ಭಾಗದಲ್ಲಿ ವಾಹನ ಕಳ್ಳತನ ಪ್ರಕರಣ ಭೇದಿಸಿರುವ ಬೆಳಗಾವಿ ಮಾರಿಹಾಳ ಠಾಣೆ ಪೊಲೀಸರು ಶುಕ್ರವಾರ ಅಂತಾರಾಜ್ಯ ಐವರು ಕಳ್ಳರನ್ನು ಬಂಧಿಸಿ 95 ಲಕ್ಷ ರೂ. ಮೌಲ್ಯದ 21 ವಾಹನ ಜಪ್ತಿ ಮಾಡಿಕೊಂಡಿದ್ದಾರೆ.
ಧಾರವಾಡ ಜಿಲ್ಲೆಯ ಮಾದರಮಡ್ಡಿಯ ಯಸೂಫ್ ಖಾನ್ (68), ಜಾಕೀರ ಪರದೇವಾಲೆ (47), ವಿಜಯಪುರದ ಆಜಾದ ಮುತವಲ್ಲಿ (37) , ದಾಂಡೇಲಿಯ ಬಸೀರಹ್ಮದ್ ಮಕಾನದಾರ (38), ತಮಿಳುನಾಡು ವಲ್ಲೂರಿನ ಶಫೀಕ್ ಅಹ್ಮದ್ (52) ಬಂಧಿತರು. ಮಾರಿಹಾಳ, ಬೆಳವಿ, ನೆಲಮಂಗಲ, ಯಶವಂತಪುರ, ಅರಿಸಿಕೇರೆ, ವಿದ್ಯಾನಗರ ಹಾಗೂ ಮಹಾರಾಷ್ಟ್ರದ ಪುಣೆ, ಸಾಂಗ್ಲಿ, ಶಿರೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿವೆ.
2025 ನವಂಬರ್ 27ರಂದು ಬೆಳಗಾವಿ ಮಾರಿಹಾಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಅಶೋಕ ಲೆಲ್ಯಾಂಡ್ ಮಿನಿ ಗೂಡ್ಸ್ ಟ್ರಕ್ ಕಳ್ಳತನ ಪ್ರಕರಣ ತನಿಖೆಯ ವೇಳೆ ರಾಜ್ಯದ ವಿವಿಧ ಭಾಗಗಳಲ್ಲಿ ಪಾರ್ಕಿಂಗ್ ಸೇರಿ ವಿವಿಧ ಸ್ಥಳಗಳಲ್ಲಿದ್ದ ವಾಹನ ಕಳ್ಳತನ ಮಾಡಿಕೊಂಡು ಬೇರೆ ಕಡೆ ಮಾರಾಟ ಕೃತ್ಯದಲ್ಲಿ ವ್ಯವಸ್ಥಿತವಾದ ತಂಡ ಕಾರ್ಯನಿರ್ವಹಿಸುತ್ತಿರುವುದು ತನಿಖಾ ಮೇಲ್ನೋಟಕ್ಕೆ ಕಂಡು ಬಂದಿರುವ ಆಧಾರದ ಮೇಲೆ ಬಂಧಿತರನ್ನು ವಿಚಾರಣೆಗೆ ಒಳಪಡಿಸಿಗಾದ ಬಾಯಿಬಿಟ್ಟಿದ್ದಾರೆ. ಮಿನಿ ಗೂಡ್ಸ್, ರಾಯಲ್ ಎನ್‌ಪಿಲ್ಡ್, ಸುಜುಕಿ ಎಕ್ಸ್‌ಸ್, ಹಿರೋ ಸ್ಪಂಡೆರ್, ಹೊಂಡಾ ಡಿಯೋ ಹೀಗೆ 95 ಲಕ್ಷ ರೂ. ಮೌಲ್ಯದ ವಾಹನ ಜಪ್ತಿ ಮಾಡಿಕೊಂಡಿದ್ದಾರೆ.
ಬೆಳಗಾವಿ ಗ್ರಾಮೀಣ ಉಪವಿಭಾಗದ ಎಸಿಪಿ ಗಂಗಾಧರ ಬಿ.ಎಂ., ಮಾರಿಹಾಳ ಠಾಣೆ ಪಿಐ ಐ.ಆರ್. ಪಟ್ಟಣಶೆಟ್ಟಿ, ಪಿಎಸ್‌ಐ ಮಂಜುನಾಥ ಹುಲಕುಂದ, ಚಂದ್ರಶೇಖರ ಸಿ., ಸಿಸಿಬಿ ವಿಭಾಗದ ಪಿಎಸ್‌ಐ ಮಹೇಶ ನಾಯಿಕ, ಆರ್.ಎಸ್.ಬಳುಗುಂಡಿ, ಆರ್.ಎಚ್.ತಳವಾರ, ಟಿ.ಜಿ.ಸುಳಕೋಡ ಸೇರಿ ಸಿಬ್ಬಂದಿ ವರ್ಗ ತನಿಖಾ ತಂಡಕ್ಕೆ ಪೊಲೀಸ್ ಆಯುಕ್ತರು, ಡಿಸಿಪಿ ಶ್ಲಾಘಿಸಿದ್ದಾರೆ.