ಕೊಕಟನೂರ ಗ್ರಾಮದ ಅಂಬೇಡ್ಕರ್ ವೃತ್ತದ ಬಳಿ ನಡೆಯುತ್ತಿರುವ ಮದಭಾವಿ-ಸಾವಳಗಿ ರಾಜ್ಯ ಹೆದ್ದಾರಿ ರಸ್ತೆ ಕಾಮಗಾರಿಯನ್ನು ಮಲ್ಲಿಕಾರ್ಜುನ ಮಗದುಮ್ಮ ನೇತೃತ್ವದ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅನೂಪ, ವೀರೇಶ ಬಿಸಗೊಂಡ, ಸುಭಾಸ ಭೋಸಲೆ, ಸಂಪತ್ ಶಿಂಗೆ ಇತರರಿದ್ದರು.
ಅಥಣಿ ಗ್ರಾಮೀಣ: ಅಥಣಿ ತಾಲೂಕಿನ ಕೊಕಟನೂರ ಗ್ರಾಮದ ಅಂಬೇಡ್ಕರ್ ವೃತ್ತದ ಬಳಿ ನಡೆಯುತ್ತಿರುವ ಮದಭಾವಿ-ಸಾವಳಗಿ ರಾಜ್ಯ ಹೆದ್ದಾರಿ ರಸ್ತೆ ಕಾಮಗಾರಿ ಸ್ಥಳಕ್ಕೆ ಗುರುವಾರ ಲೋಕೋಪಯೋಗಿ ಇಲಾಖೆ ಎಇಇ ಮಲ್ಲಿಕಾರ್ಜುನ ಮಗದುಮ್ಮ ನೇತೃತ್ವದ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಪಿಡಬ್ಲ್ಯುಡಿ ಇಲಾಖೆ ಎಇಇ ಮಲ್ಲಿಕಾರ್ಜುನ ಮಗದುಮ್ಮ ಮಾತನಾಡಿ, ಹೆದ್ದಾರಿಗೆ ಸಂಬಂಧಿಸಿದ ಜಾಗದಲ್ಲಿರುವ ಗೂಡಂಗಡಿ ಮತ್ತು ಕಟ್ಟಡ ಅಂಗಡಿಗಳನ್ನು ತೆರವುಗೊಳಿಸಿ, ಅಂಬೇಡ್ಕರ್ ವೃತ್ತಕ್ಕೆ ಯಾವುದೇ ತೊಂದರೆಯಾಗದಂತೆ ಡಾಂಬರೀಕರಣ ಹಾಗೂ ಪಕ್ಕದ ಚರಂಡಿ ಕಾಮಗಾರಿ ಗುಣಮಟ್ಟದಿಂದ ಕೈಗೊಳ್ಳಬೇಕು. ಯಾರಾದರೂ ಅಡ್ಡಿಪಡಿಸಿದರೆ ಮಾಹಿತಿ ನೀಡಿ ಅಂಥವರ ವಿರುದ್ಧ ಪೊಲೀಸ್ ಇಲಾಖೆಗೆ ದೂರು ನೀಡಿ ಸಾರ್ವಜನಿಕರ ಸಂಚಾರಕ್ಕೆ ಅನುಕೂಲವಾಗುವಂತೆ ಕಾಮಗಾರಿ ಮುಂದುವರಿಸಬೇಕು ಎಂದು ಸೂಚಿಸಿದರು.
ಅಧಿಕಾರಿಗಳಾದ ಅನೂಪ, ವೀರೇಶ ಬಿಸಗೊಂಡ, ಸುಭಾಸ ಭೋಸಲೆ, ವಕೀಲ ಸಂಪತ ಶಿಂಗೆ, ಅಂಬೇಡ್ಕರ್ ಸೇನೆ ತಾಲೂಕು ಉಪಾಧ್ಯಕ್ಷ ಪ್ರಕಾಶ ಹೆಗ್ರೆ, ಆಕಾಶ ಕಾಂಬಳೆ, ರಾಜು ದೊಡಮನಿ, ಸಂಜು ಕಾಂಬಳೆ ಇತರರಿದ್ದರು.