ಮಮದಾಪುರ ಚಿಂತಾಮಣಿ ಪಾವಟೆ ಪ್ರೌಢಶಾಲೆಯಲ್ಲಿ ಡಾ.ಡಿ.ಸಿ.ಪಾವಟೆ ಜನ್ಮದಿನ ನಿಮಿತ್ತ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ನಿವೃತ್ತ ಡಿಡಿಪಿಐ ಗಜಾನನ ಮನ್ನಿಕೇರಿ ಹಾಗೂ ನಿವತ್ತ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಶೈಲ ವಾಲಿ ಕೊಡುಗೆ ನೀಡಿದ ವಿಜಯವಾಣಿ ವಿದ್ಯಾರ್ಥಿ- ಉದ್ಯೋಗ ಮಿತ್ರ ಸಂಚಿಕೆ ವಿತರಿಸಲಾಯಿತು. ಚಂದ್ರಶೇಖರ ಅಕ್ಕಿ, ಪ್ರಕಾಶ ಮಾಸ್ತಿಹೊಳಿ, ಜಿ.ಬಿ.ಬಳಗಾರ, ಡಾ.ಸಿದ್ದಣ್ಣ ಕಮತ, ಈರಣ್ಣ ಜನ್ಮಟ್ಟಿ ಇತರರಿದ್ದರು. 
ಬೆಳಗಾವಿ

ವಿದ್ಯಾರ್ಥಿಗಳಲ್ಲಿ ಆದರ್ಶ ಮೌಲ್ಯ ಬೆಳೆಸಿ

ಪ್ರಶಾಂತ ಹೂಗಾರ

ಮಮದಾಪುರ:

ನಾಡಿಗೆ ಅನೇಕ ಕೊಡುಗೆ ನೀಡಿದ ಪುಣ್ಯಭೂಮಿಯಲ್ಲಿ ಜನಿಸಿದ ಮಮದಾಪುರ ಗ್ರಾಮದ ವಿದ್ಯಾರ್ಥಿಗಳು ನಿಜಕ್ಕೂ ಪುಣ್ಯವಂತರು ಎಂದು ಪ್ರೊ.ಚಂದ್ರಶೇಖರ ಅಕ್ಕಿ ಹೇಳಿದರು.

ಚಿಂತಾಮಣಿ ಪಾವಟೆ ಪ್ರೌಢಶಾಲೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಡಾ.ಡಿ.ಸಿ.ಪಾವಟೆ ಅವರ 127ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಪಾವಟೆ ಈ ಗ್ರಾಮದ ಕಡುಬಡತನದ ಕುಟುಂಬದಲ್ಲಿ ಜನಿಸಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಉಪಕುಲಪತಿಯಾಗಿ ಶೈಕ್ಷಣಿಕ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಅವರ ಆದರ್ಶಗಳನ್ನು ವಿದ್ಯಾರ್ಥಿಗಳು ಅಳವಡಿಸಿ, ಓದಿನತ್ತ ಗಮನಹರಿಸಿ ಜೀವನದಲ್ಲಿ ಯಶಸ್ಸುಗಳಿಸಬೇಕು ಎಂದರು.
ಬೈಲವಾಡ ಸರ್ಕಾರಿ ಪ್ರೌಢಶಾಲೆ ಶಿಕ್ಷಕ ಪ್ರಕಾಶ ಮಾಸ್ತಿಹೊಳಿ ಮಾತನಾಡಿ, ಪಾವಟೆ ರಚಿಸಿದ ಪುಸ್ತಕಗಳು ಇಂದಿಗೂ ಮಾದರಿಯಾಗಿವೆ. ವಿದ್ಯಾರ್ಥಿಗಳು ಅಂಥ ಪುಸ್ತಕಗಳನ್ನು ಓದಿ ಮೌಲ್ಯಗಳನ್ನು ವೃದ್ಧಿಸಿಕೊಳ್ಳಬೇಕು ಎಂದರು. ಬಳಿಕ ಜಯಂತಿ ನಿಮಿತ್ತ ಏಳನೇ ಹಾಗೂ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಜಿಲ್ಲಾಮಟ್ಟದ ಹಾಗೂ ತಾಲೂಕು ಮಟ್ಟದ ಗಣಿತ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು. ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಪಾವಟೆ ಸಮಾಧಿಗೆ ವಕೀಲ ಆರ್.ಪಿ.ಪಾವಟೆ ಪೂಜೆ ಸಲ್ಲಿಸಿದರು. ಪ್ರತೀಕ ಪಾವಟೆ, ಸಂತೋಷ ಪಾವಟೆ, ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ, ಗ್ರಾಮೀಣ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಸಿದ್ದಣ್ಣ ಕಮತ, ಕಾರ್ಯದರ್ಶಿ ಈರಣ್ಣ ಜನ್ಮಟ್ಟಿ, ನಿವೃತ್ತ ಶಿಕ್ಷಣ ಇಲಾಖೆ ಸಹಾಯಕ ನಿರ್ದೇಶಕ ಗಜಾನನ ಮನ್ನಿಕೇರಿ, ಮುಖಂಡ ಸುರೇಶ ಸನದಿ, ಕೆಂಪಣ್ಣ ಮೈಲನ್ನವರ, ನಿವೃತ್ತ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಶೈಲ ವಾಲಿ, ಜಿ.ಎಂ.ಕಮತ, ವಿನಾಯಕ ಗಾಣಗಿ, ಈಶ್ವರ ಶೀಗಿಹಳ್ಳಿ, ಬಿ.ಕೆ.ಕಂಬಿ ಇತರರಿದ್ದರು. ಸಿ.ಎಂ.ಪಟಾತ್ ಸ್ವಾಗತಿಸಿದರು. ಎ.ಎಂ.ಕಮತ್, ಎಂ.ಬಿ.ಹಾದಿಮನಿ ನಿರೂಪಿಸಿದರು. ಎಂ.ಎ.ಪಟ್ಟಣ, ಎಂ.ಪಿ.ಕಮತ ವಂದಿಸಿದರು.