ಸವದತ್ತಿಯ ಪದಕಿಪುರಂ ಶಂಕರಚಾರ್ಯ ಮಠದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪಿಯುಸಿಯಲ್ಲಿ ಸಾಧನೆ ಮಾಡಿದ ವೇದಿಕಾ ವೈದ್ಯ ಅವರನ್ನು ಸನ್ಮಾನಿಸಲಾಯಿತು. ಶಿವಾನಂದ ಸ್ವಾಮೀಜಿ, ಸದಾನಂದ ದಿಕ್ಷೀತ, ಪಲ್ಲವಿ ಪದಕಿ, ಗಿರೀಶ ಮುನೋಳಿ, ವೆಂಕಟೇಶ ವೈದ್ಯ ಇತರರಿದ್ದರು. 
ಬೆಳಗಾವಿ

ಶಂಕರಾಚಾರ್ಯರ ಉಪದೇಶ ಪ್ರೇರಣೆ

ಸವದತ್ತಿ: ಆದಿ ಶಂಕರಾಚಾರ್ಯರರ ಉಪದೇಶಗಳು ಆಧ್ಯಾತ್ಮಿಕ ಜಾಗೃತಿಗೆ ಅಗತ್ಯವಾಗಿದ್ದು, ಇಂದಿನ ಸಮಾಜದಲ್ಲಿ ಅವುಗಳ ಪ್ರಾಸಂಗಿಕತೆ ಹೆಚ್ಚಾಗಿದೆ ಎಂದು ರಾಮಕೃಷ್ಣ ಆಶ್ರಮದ ಉಪನ್ಯಾಸಕ ಉದಯ ಪಾಟೀಲ ಹೇಳಿದರು.
ನಗರದ ಪದಕಿಪುರಂ ಶಂಕರಾಚಾರ್ಯ ಮಠದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಆದಿ ಶಂಕರಾಚಾರ್ಯರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಶಂಕರಾಚಾರ್ಯರು ಪ್ರತಿಪಾದಿಸಿದ ಅದ್ವೈತ ತತ್ತ್ವ ಮಾನವನಲ್ಲಿ ಏಕತೆ ಮನೋಭಾವ ಬೆಳೆಸುತ್ತದೆ. ಅವರ ತತ್ತ್ವ ಸನ್ಮಾರ್ಗದಲ್ಲಿ ನಡೆಯಲು ದಾರಿದೀಪ ಎಂದರು.
ಗೊರವನಕೊಳ್ಳದ ಶಿವಾನಂದ ಸ್ವಾಮೀಜಿ, ರಾಜಾರಾಮ ಮಠದ ಸದಾನಂದ ದೀಕ್ಷಿತ ಮಾತನಾಡಿ, ಶಂಕರಾಚಾರ್ಯರ ಉಪದೇಶಗಳು ಆತ್ಮಶುದ್ಧಿ ಹಾಗೂ ಧಾರ್ಮಿಕ ಜಾಗೃತಿಗೆ ಮಾರ್ಗದರ್ಶಕವಾಗಿವೆ ಎಂದರು.
ಇದೇ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯು ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ದಿ.ರಮೇಶ ಪದಕಿ ಅವರ ಸ್ಮರಣಾರ್ಥ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಪಲ್ಲವಿ ಪದಕಿ, ಗಿರೀಶ ಮನೋಳಿ, ರೇಣುಕಾ ಪದಕಿ, ವೆಂಕಟೇಶ ವೈದ್ಯ, ಅಶ್ವತ್ ವೈದ್ಯ, ರಾಮಚಂದ್ರ ಜೋಶಿ, ರಾಜು ಕುಲಕರ್ಣಿ, ಸಂದೀಪ ಸಬನೀಸ, ಶ್ರೀನಿವಾಸ ಗದಗೆ, ತನ್ಮಯ ಪದಕಿ ಇತರರಿದ್ದರು.