ಮುನವಳ್ಳಿ ಪಟ್ಟಣದಲ್ಲಿ ಇಂದಿರಾ ಕ್ಯಾಂಟೀನ್‌ಗೆ ವಿಶ್ವಾಸ ವೈದ್ಯ ಚಾಲನೆ ನೀಡಿದರು. ಮುರುಘೇಂದ್ರ ಸ್ವಾಮೀಜಿ, ರವೀಂದ್ರ ಯಲಿಗಾರ, ಈಶ್ವರ ಕರೀಕಟ್ಟಿ, ಡಿ.ಡಿ.ಕಿನ್ನೂರಿ, ಸಿ.ಬಿ.ಬಾಳಿ ಇತರರಿದ್ದರು.
- ಶಾಸಕ ವಿಶ್ವಾಸ ವೈದ್ಯ ಹೇಳಿಕೆ
- ಗುಣಮಟ್ಟದ ಆಹಾರ ವಿತರಣೆ
ಮುನವಳ್ಳಿ: ಶ್ರಮಿಕ ವರ್ಗ, ವಿದ್ಯಾರ್ಥಿ ಮತ್ತು ಬಡವರಿಗೆ ಕಡಿಮೆ ದರದಲ್ಲಿ ಗುಣಮಟ್ಟದ ಆಹಾರ ಒದಗಿಸುವ ಉದ್ದೇಶದಿಂದ ‘ಇಂದಿರಾ ಕ್ಯಾಂಟೀನ್’ ಜಾರಿಗೊಳಿ ಸಲಾಗಿದೆ ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.
ಪಟ್ಟಣದಲ್ಲಿ ಸೋಮವಾರ ‘ಇಂದಿರಾ ಕ್ಯಾಂಟೀನ್’ ಉದ್ಘಾಟಿಸಿ ಮಾತನಾಡಿ, ಕೇವಲ 5 ರೂ.ಗೆ ಉಪಾಹಾರ ಮತ್ತು 10 ರೂ.ಗೆ ಮಧ್ಯಾಹ್ನ ಹಾಗೂ ರಾತ್ರಿ ಊಟ ನೀಡುವ ಮೂಲಕ ಸಾಮಾನ್ಯ ಜನರಿಗೆ ಆಸರೆಯಾಗುತ್ತಿದ್ದೇವೆ ಎಂದು ತಿಳಿಸಿದರು.
ಪುರಸಭೆ ಅಧ್ಯಕ್ಷ ಈಶ್ವರ ಕರೀಕಟ್ಟಿ ಮಾತನಾಡಿ, ಹಸಿವು ಮುಕ್ತ ಸಮಾಜ ನಿರ್ಮಾಣ ಮಾಡುವುದು ಸರ್ಕಾರದ ಗುರಿಯಾಗಿದೆ ಎಂದರು. ಸೋಮಶೇಖರ ಮಠದ ಮುರುಘೇಂದ್ರ ಸ್ವಾಮೀಜಿ ಮಾತನಾಡಿದರು. ಕಾಂಗ್ರೆಸ್ ಹಿರಿಯ ಮುಖಂಡ ರವೀಂದ್ರ ಯಲಿಗಾರ, ಎಂ.ಆರ್.ಗೋಪಶೆಟ್ಟಿ, ವಿರೇಶ ಬ್ಯಾಹಟ್ಟಿ, ಪುರಸಭೆ ಮಾಜಿ ಅಧ್ಯಕ್ಷ ಸಿ.ಬಿ.ಬಾಳಿ, ಪುರಸಭೆ ಉಪಾಧ್ಯಕ್ಷ ಡಿ.ಡಿ.ಕಿನ್ನೂರಿ, ಅಂಬರೀಷ ಯಲಿಗಾರ, ವೀರಣ್ಣ ಕಮ್ಮಾರ, ಕೀರಪ್ಪ ಹದ್ದನ್ನವರ, ಪುರಸಭೆ ಸದಸ್ಯರಾದ ಮೀರಾಸಾಬ ವಟ್ನಾಳ, ಶ್ರೀಶೈಲ ನೇಗಿನಾಳ, ಸಮೀವುಲ್ಲಾ ಚೂರಿಖಾನ್, ಬಸವರಾಜ ದೊಡಮನಿ, ಸಲೀಂಮಲ್ಲಿಕ್ ಬೆಳವಡಿ, ಹೆಚ್.ಕೆ.ದನದಮನಿ, ವಿನಾಯಕ ಕಟ್ಟೇಕಾರ, ಹನುಮಂತ ಹಿರೇಮೇತ್ರಿ, ಕಲ್ಲಪ್ಪ ಕಿತ್ತೂರ, ಅಮಿತ ಕರೀಕಟ್ಟಿ, ಸಿಂಗಯ್ಯ ಹಿರೇಮಠ, ಪುರಸಭೆ ಮುಖ್ಯಾಧಿಕಾರಿ ಎಂ.ಎಂ.ತಿಮ್ಮಾಣಿ ಇತರರಿದ್ದರು.