ಯಕ್ಸಂಬಾ ಪಟ್ಟಣದ ಶಿವಶಂಕರ ಜೊಲ್ಲೆ ಕನ್ನಡ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಗಣರಾಜ್ಯೋತ್ಸವ ಆಚರಿಸಲಾಯಿತು. ಜ್ಯೋತಿಪ್ರಸಾದ ಜೊಲ್ಲೆ, ಬಾಳಾಸಾಹೇಬ ಶಿಂಧೆ, ಬಸವಪ್ರಸಾದ ಜೊಲ್ಲೆ ಇತರರಿದ್ದರು.
ಚಿಕ್ಕೋಡಿ: ತಾಲೂಕಿನ ಯಕ್ಸಂಬಾ ಪಟ್ಟಣದ ಶಿವಶಂಕರ ಜೊಲ್ಲೆ ಕನ್ನಡ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ೭೭ನೇ ಗಣರಾಜ್ಯೋತ್ಸವ ಅಂಗವಾಗಿ ಆಶಾಜ್ಯೋತಿ ವಿಶೇಷ ಮಕ್ಕಳ ವಸತಿ ಶಾಲೆ ಅಧ್ಯಕ್ಷ ಜ್ಯೋತಿಪ್ರಸಾದ ಜೊಲ್ಲೆ ದ್ವಜಾರೋಹಣ ನೆರವೇರಿಸಿದರು.
ಜ್ಯೋತಿ ವಿವಿಧೋದ್ದೇಶ ಸಹಕಾರ ಸಂಘದ ನಿರ್ದೇಶಕ ಬಾಳಾಸಾಹೇಬ ಶಿಂಧೆ ಮಾತನಾಡಿ, ವಿವಿಧತೆಯಲ್ಲಿ ಏಕತೆ ಸಾರುತ್ತಿರುವ ಭಾರತದ ಸಂಸ್ಕೃತಿ, ಆಚಾರ ವಿಚಾರಗಳ ಮಹತ್ವ ಅರಿತು, ಉಳಿಸಿ-ಬೆಳೆಸಿ ಜೀವನ ಉಜ್ವಲವಾಗಿ ರೂಪಿಸಿಕೊಳ್ಳೋಣ ಎಂದರು.
ಶಾಲಾ ವಿದ್ಯಾರ್ಥಿಗಳಿಂದ ಪಥಸಂಚಲನ, ಭಾಷಣ, ದೇಶಭಕ್ತಿಗೀತೆ, ಪ್ರಾಥಮಿಕ ಹಾಗೂ ಪ್ರೌಢ ವಿದ್ಯಾರ್ಥಿಗಳಿಗಾಗಿ ಕೋರ್ ವಿಷಯಗಳ ಕಲಿಕೋಪಕರಣ ಪ್ರದರ್ಶನ ಸ್ಪರ್ಧೆಯನ್ನು ಜೊಲ್ಲೆ ಗ್ರೂಪ್‌ನ ಉಪಾಧ್ಯಕ್ಷ ಬಸವಪ್ರಸಾದ ಜೊಲ್ಲೆ ಉದ್ಘಾಟಿಸಿದರು.
ಸಹಶಿಕ್ಷಕಿ ಆರ್.ಬಿ.ಕಾಂಬಳೆ ಮಾತನಾಡಿ, ಸಂವಿಧಾನದಲ್ಲಿರುವ ಹಕ್ಕು ಕರ್ತವ್ಯ ಪಾಲಿಸುವುದರ ಜತೆ ಎಲ್ಲರಿಗೂ ಅದರ ಅರಿವು ಮೂಡಿಸಬೇಕು ಎಂದರು.
ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು. ಬಾಬುರಾವ ಮಾಳಿ, ಲಕ್ಷ÷್ಮಣ ಕಬಾಡೆ, ವಿಶ್ವನಾಥ ಪೇಟಕರ, ಸುಜಾತಾ ಕಬಾಡೆ, ಲತಾ ವಾಳಕೆ, ಫೈಮಿದಾ ದಾಡಿವಾಲೆ, ಮಂಗಲ ಜೊಲ್ಲೆ, ವಿಜಯ ರಾವುತ, ಸಂತೋಷ ಪಾಟೀಲ ಇತರರಿದ್ದರು. ಮುಖ್ಯಶಿಕ್ಷಕ ವಿ.ಆರ್.ಭಿವಸೆ ಸ್ವಾಗತಿಸಿದರು. ವಿದ್ಯಾರ್ಥಿನಿ ರಕ್ಷಿತಾ ಶಿಂಧೆೆ ನಿರೂಪಿಸಿದರು. ಶಿಕ್ಷಕ ಟಿ.ಎಸ್.ಮಗದುಮ್ಮ ವಂದಿಸಿದರು.