ರಡ್ಡೇರಹಟ್ಟಿ ಗ್ರಾಮದ ಬಸವೇಶ್ವರ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಸಾಮೂಹಿಕ ಸತ್ಯ ನಾರಾಯಣ ಪೂಜೆ ಮತ್ತು ಧಾರ್ಮಿಕ ಸಭೆಯನ್ನು ಯೋಜನಾಧಿಕಾರಿ ರಹಬಲಿ ಮೇಲಿನಮನಿ ಉದ್ಘಾಟಿಸಿದರು. ಬಸವರಾಜೇಂದ್ರ ಶರಣರು, ಸುವರ್ಣಾ ಮಡಿವಾಳ, ಗಿರೀಶ ಬಳಿಗೇರಿ ಇತರರಿದ್ದರು.
ಅಥಣಿ ತಾಲೂಕಿನ ರಡ್ಡೇರಹಟ್ಟಿ ಗ್ರಾಮದ ಬಸವೇಶ್ವರ ದೇವಸ್ಥಾನದಲ್ಲಿ ಶ್ರೀಕ್ಷೇತ್ರ ಧಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಸಾಮೂಹಿಕ ಸತ್ಯ ನಾರಾಯಣ ಪೂಜೆ ಮತ್ತು ಧಾರ್ಮಿಕ ಸಭೆಯಲ್ಲಿ ಮಾತನಾಡಿ, ವೇಗವಾಗಿ ಬೆಳೆಯುತ್ತಿರುವ ತಂತ್ರಜ್ಞಾನದಿಂದ ಯುವ ಪೀಳಿಗೆಯಲ್ಲಿ ಧಾರ್ಮಿಕ ನಂಬಿಕೆ, ಆಚರಣೆ ಕಡಿಮೆಯಾಗುತ್ತಿವೆ. ಪ್ರತಿಯೊಬ್ಬರು ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಂಡಾಗ ದೇವರ ಕೃಪೆಗೆ ಪಾತ್ರರಾಗುತ್ತಾರೆ. ಹೀಗಾಗಿ, ಮಕ್ಕಳಿಗಾಗಿ ಆಸ್ತಿ ಮಾಡುವ ಬದಲು ಅವರನ್ನೇ ಆಸ್ತಿಯನ್ನಾಗಿಸಬೇಕು ಎಂದರು.
ಯೋಜನಾಧಿಕಾರಿ ರಹಬಲಿ ಮೇಲಿನಮನಿ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ಸುವರ್ಣಾ ಮಡಿವಾಳ, ದೇವಸ್ಥಾನ ಕಮಿಟಿ ಅಧ್ಯಕ್ಷ ಗಿರೀಶ ಬಳಿಗೇರಿ, ಒಕ್ಕೂಟ ಅಧ್ಯಕ್ಷೆ ಮಹಾದೇವಿ ತೊದಲಬಾಗಿ, ಸಂಗಪ್ಪ ಜನವಾಡ ಇತರರಿದ್ದರು. ಮಹಾಂತೇಶ ಪಿ.ಎಂ. ಸ್ವಾಗತಿಸಿದರು. ಸುಮಾ ಕಪೋಲಿ ನಿರೂಪಿಸಿದರು.