ಬೆಳಕೂಡ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ಬಸವರಾಜ ಕುಂಬಾರ ಚಾಲನೆ ನೀಡಿದರು. ಮಲ್ಲಿಕಾರ್ಜುನ ಯರಗುದ್ರಿ, ಯಲ್ಲೇಶ ಕಾಮಣ್ಣವರ, ಬಸವರಾಜ ಕುಂಬಾರ, ಮಹಾಂತೇಶ ಚೌಹಾಣ, ದಾನೇಶ್ವರಿ ಮಠಪತಿ ಇತರರಿದ್ದರು. 
ಬೆಳಗಾವಿ

ಅಧ್ಯಯನದಿಂದ ಜ್ಞಾನ ವೃದ್ಧಿ

ಪ್ರಶಾಂತ ಹೂಗಾರ
ಚಿಕ್ಕೋಡಿ: ವಿದ್ಯಾರ್ಥಿಗಳು ಶ್ರಮಪಟ್ಟು ಓದಿದರೆ ಜ್ಞಾನ ದೊರೆಯುತ್ತದೆ ಎಂದು ಡಿಡಿಪಿಯು ಪಾಂಡುರಂಗ ಭಂಡಾರೆ ಹೇಳಿದರು.
ಪಟ್ಟಣದ ಕಲ್ಮೇಶ್ವರ ಶಿಕ್ಷಣ ಸಂಸ್ಥೆಯ ವೈ.ಬಿ.ಕಿವಡ ಹಾಗೂ ಶ್ರೀಮತಿ ಎನ್.ವೈ.ಕಿವಡ ಶಾಲೆಯಲ್ಲಿ ಈಚೆಗೆ ಹಮ್ಮಿಕೊಂಡಿದ್ದ ವಾರ್ಷಿಕೋತ್ಸವ ಹಾಗೂ ಬಹುಮಾನ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಸಂಸ್ಥೆ ಅಧ್ಯಕ್ಷ ಟಿ.ವೈ.ಕಿವಡ ಮಾತನಾಡಿ, ವಿದ್ಯಾರ್ಥಿಗಳು ಚೆನ್ನಾಗಿ ಓದಿ ಸಂಸ್ಥೆಯ ಹಾಗೂ ಪಾಲಕರ ಕೀರ್ತಿ ಹೆಚ್ಚಿಸಬೇಕು ಎಂದರು. ಉಪಾಧ್ಯಕ್ಷ ಬಸವಣ್ಣಿ ಕಮತೆ, ಜಯಶ್ರೀ ಕಿವಡ, ಕಲ್ಮೇಶ ಕಿವಡ, ಜಿನ್ನಪ್ಪ ಶೇಡಬಾಳೆ, ರುದ್ರೇಶ ರುದ್ರಾಪರೆ, ನಾಗೇಶ ಕಿವಡ, ಆಡಳಿತಾಧಿಕಾರಿ ಪಿ.ಡಿ.ಹೊಂಬಾಳ್ಕರ, ಕಿರಣ ಕಾಂಬಳೆ, ಮೀನಾಕ್ಷಿ ನಿರವಾಣಿ, ಪುಂಡಲೀಕ ಬೆಕ್ಕೇರಿ ಇತರರಿದ್ದರು. ನಿಶಾ ಮಾನೆ ಮತ್ತು ದೀಪಾ ಚಿಮ್ಮಡ ನಿರೂಪಿಸಿ, ರೇಖಾ ನೇಜೆ ವಂದಿಸಿದರು.