ಬುಡರಕಟ್ಟಿ ಗ್ರಾಮದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸಾಮೂಹಿಕ ವರಮಹಾಲಕ್ಷ್ಮೀ ಪೂಜೆಯನ್ನು ಗಣ್ಯರು ಉದ್ಘಾಟಿಸಿದರು. ಪ್ರಭು ನೀಲಕಂಠ ಸ್ವಾಮೀಜಿ, ಶಾಸಕ ಮಹಾಂತೇಶ ಕೌಜಲಗಿ, ಡಾ.ವಿಶ್ವನಾಥ ಪಾಟೀಲ, ಮಹಾಂತೇಶ ಕಮತ, ರತ್ನಾ ಗೋದಿ, ವಿಜಯಕುಮಾರ ಇತರರಿದ್ದರು.
ಮಲ್ಲಮ್ಮನ ಬೆಳವಡಿ:
ಸಮೀಪದ ಬುಡರಕಟ್ಟಿ ಗ್ರಾಮದಲ್ಲಿ ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟದ ಬುಡರಕಟ್ಟಿ ವಲಯ, ಸಾಮೂಹಿಕ ವರಮಹಾಲಕ್ಷ್ಮೀ ಪೂಜೆ ಹಾಗೂ ಹಕಾರಿ ಕೆರೆ ಅಭಿವೃದ್ಧಿ ಸಮಿತಿ, ಉಳವಿ ಚನ್ನಬಸವೇಶ್ವರ ಸಮಿತಿ, ಗ್ರಾಪಂ ಆಶ್ರಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸಾಮೂಹಿಕ ವರಮಹಾಲಕ್ಷ್ಮೀ ಪೂಜೆ ಮತ್ತು ಕೆರೆ ಹಸ್ತಾಂತರ ಹಾಗೂ ಧಾರ್ಮಿಕ ಸಭೆ ಉದ್ಘಾಟಿಸಿ ಮಾತನಾಡಿದರು.
ಗ್ರಾಪಂಗೆ ಕೆರೆ ಹಸ್ತಾಂತರ ಪ್ರಮಾಣಪತ್ರ ಹಸ್ತಾಂತರಿಸಿದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಸತೀಶ ನಾಯಕ ಪ್ರಾಸ್ತಾವಿಕ ಮಾತನಾಡಿ, ರೈತ ಸ್ವಾವಲಂಬಿ ಜೀವನ ನಡೆಸಬೇಕು ಎಂಬ ಕಾರಣದಿಂದ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಆಶಯದಂತೆ ಪ್ರಗತಿ ಸ್ವಸಹಾಯ ಸಂಘ ಅಬಿವೃದ್ಧಿಪಡಿಸಿದ ರಾಜ್ಯದ ಸಾವಿರ ಕೆರೆಗಳಲ್ಲಿ ತಾಲೂಕಿನ 9 ಕೆರೆಗಳಿವೆ ಎಂದರು.