ಬೈಲಹೊಂಗಲ ಈಶ್ವರೀಯ ವಿಶ್ವ ವಿದ್ಯಾಲಯದ ರಾಜಯೋಗ ಭವನದ ಉದ್ಘಾಟನೆ ಹಾಗೂ ಅಮತ ಮಹೋತ್ಸವ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು. ಪ್ರಭಾ ಅಕ್ಕ, ರಾಜಯೋಗಿ ಬಿ.ಕೆ.ಬಸವರಾಜ, ಚಿತ್ರನಟ ಶಿವರಂಜನ ಬೋಳನ್ನನವರ, ಶಂಕರ ಮಾಡಲಗಿ, ಬಾಬು ಕುಡಸೋಮನ್ನವರ ಇತರರಿದ್ದರು. 
ಬೆಳಗಾವಿ

ರಾಜಯೋಗ ಭವನ ಉದ್ಘಾಟನೆ, ಅಮೃತ ಮಹೋತ್ಸವ

ರಾಜಯೋಗಿ ಬ್ರಹ್ಮಕುಮಾರ ಬಸವರಾಜ ಮಾತನಾಡಿ,ಫೆ.26ರಿಂದ 28ರವರೆಗೆ ಸಂಜೆ 5.30ರಿಂದ 8ರವರೆಗೆ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಈಶ್ವರೀಯ ಸಂದೇಶದ ಪ್ರವಚನ ಜರುಗಲಿದೆ. ಮಾರ್ಚ 1 ರಂದು ಬೆಳಗ್ಗೆ 8.30ರಿಂದ ನಗರದ ಚನ್ನಮ್ಮನ ಐಕ್ಯಸ್ಥಳದಿಂದ ಶಾಂತಿಯಾತ್ರೆ ಜರುಗಲಿದೆ. 10.30ಕ್ಕೆ ರಾಜಯೋಗ ಭವನ ಉದ್ಘಾಟನೆ ಹಾಗೂ ಅಮತ ಮಹೋತ್ಸವ ಕಾರ್ಯಕ್ರಮ ಜರುಗಲಿದೆ.
ವಿವಿಧ ಮಠಾಧೀಶರ ಸಾನ್ನಿಧ್ಯದಲ್ಲಿ ಮೌಂಟ್ ಅಬು ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಡಾ.ಬಿ.ಕೆ.ಮತ್ಯುಂಜಯ ಉದ್ಘಾಟಿಸಲಿದ್ದಾರೆ. ಬಿ.ಕೆ. ಅಂಬಿಕಾ, ಬಿ.ಕೆ. ಪ್ರಭಾ, ಬಿ.ಕೆ. ಮೀರಾ, ಬಿ.ಕೆ. ಸುಲೋಚನಾ, ಜನಪ್ರತಿನಿಧಿಗಳು, ಗಣ್ಯರು ಉಪಸ್ಥಿತರಿರುವರು ಎಂದರು. 25ರಂದು ತಾಲೂಕು ಕಾನೂನು ಸೇವಾ ಸಮಿತಿಯಿಂದ ನ್ಯಾಯಾಧೀಶರ ಸಮ್ಮುಖದಲ್ಲಿ ವಿಶ್ವ ಸಾಮಾಜಿಕ ನ್ಯಾಯ ಕಾರ್ಯಕ್ರಮ ಜರುಗಲಿದೆ. 27ರಂದು ರೈತ ಸಮಾವೇಶ ಜರುಗಲಿದೆ. ಪ್ರಭಾ ಅಕ್ಕ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಚಿತ್ರನಟ ಶಿವರಂಜನ ಬೋಳನ್ನನವರ, ಬಿ.ಬಿ.ಗಣಾಚಾರಿ, ಶಂಕರ ಮಾಡಲಗಿ ಮಾತನಾಡಿ, ಕಾರ್ಯಕ್ರಮಕ್ಕೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದರು. ಬಾಬು ಕುಡಸೋಮನ್ನವರ, ರಾಜು ಜನ್ಮಟ್ಟಿ, ಪ್ರಮೋದಕುಮಾರ ವಕ್ಕುಂದಮಠ, ವಿ.ಎಸ್.ಕೊರಿಮಠ, ಬಸವರಾಜ ಭರಮನ್ನವರ, ಮಹಾಂತೇಶ ತುರಮರಿ ಇತರರಿದ್ದರು.